ಈ ದಿನಾಂಕದಿಂದ ಮಸೀದಿ ಎದುರು ಶ್ರೀರಾಮಸೇನೆಯಿಂದ ಹನುಮಾನ್ ಚಾಲೀಸ್ ಪಠಣ ಅಭಿಯಾನ!

ರಾಜ್ಯ ಸರ್ಕಾರ ಮಸೀದಿಗಳ ಮೇಲಿನ ಮೈಕ್ ತೆರವು ಮಾಡದೆ ಇರುವ ಕಾರಣ ಮೇ. 9 ರಿಂದ ಮಸೀದಿಗಳ ಮುಂಭಾಗದಲ್ಲಿ ಹನುಮಾನ್ ಚಾಲಿಸ್ ಪಠಣ ಮಾಡಲಾಗುವುದು ಎಂದು ಶ್ರೀ ರಾಮ ಸೇನೆಯ ರಾಜ್ಯ ಗೌರವಾಧ್ಯಕ್ಷ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ತಿಳಿಸಿದ್ದಾರೆ


Ad Widget

Ad Widget

Ad Widget

ಮಸೀದಿಗಳಲ್ಲಿ ಮೈಕ್ ತೆರವುಗೊಳಿಸುವ ಕುರಿತಾಗಿ ನ್ಯಾಯಾಲಯದ ಆದೇಶವನ್ನು ಅನುಷ್ಠಾನ ಮಾಡಿ ಎಂದು ನಾವು ಸರಕಾರಕ್ಕೆ ಮೇ.9ನೇ ತಾರೀಕಿನ ವರೆಗೆ ಗಡುವು ನೀಡಿದ್ದೇವು. ಆದರೆ, ಇಲ್ಲಿಯವರೆಗೆ ಮಸೀದಿ ಮೇಲಿನ ಮೈಕ್ (ಧ್ವನಿವಧ೯ಕ) ತೆರವಿಗೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಹಾಗಾಗಿ ಮೇ 9ರಂದು ಮಸೀದಿಗಳ ಮುಂದೆ ನಾವು ಮೈಕ್ ಗಳನ್ನು ಇರಿಸಿ ಹನುಮಾನ್ ಚಾಲಿಸ್ ಓದುತ್ತೇವೆ ಎಂದು ಶ್ರೀ ರಾಮ ಸೇನೆಯ ರಾಜ್ಯ ಗೌರವಾಧ್ಯಕ್ಷ ಹೇಳಿದ್ದಾರೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ ಅವರಿಗೆ ಮಸೀದಿಗಳಿಂದ ಮೈಕ್ ತೆಗೆಸಲು ಸಾಧ್ಯವಾದರೆ, ಬಸವರಾಜ ಬೊಮ್ಮಾಯಿ ಅವರಿಂದ ಯಾಕೆ ಆಗುತ್ತಿಲ್ಲ ಹಾಗಾಗಿ ಯಾವುದೇ ಅನಾಹುತ ಘಟಿಸಿದರೂ ಅದಕ್ಕೆ ರಾಜ್ಯ ಸರ್ಕಾರ ನೇರ ಹೊಣೆಯಾಗಲಿ ಎಂದು ಘೋಷಿಸಿದ್ದಾರೆ.

Leave a Reply

error: Content is protected !!
Scroll to Top
%d bloggers like this: