ಬಿಳಿನೆಲೆ: ಕ್ಷುಲ್ಲಕ ಕಾರಣಕ್ಕೆ ಮನೆಯವರೊಂದಿಗೆ ಮನಸ್ತಾಪ!! ಇಲಿಪಾಷಣ ಸೇವಿಸಿದ್ದ ಯುವಕ ಮೃತ್ಯು

ಕ್ಷುಲ್ಲಕ ವಿಚಾರಕ್ಕೆ ಮನಸ್ತಾಪಗೊಂಡು ಕೆಲ ದಿನಗಳ ಹಿಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಯುವಕನೊಬ್ಬ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಬೆಳಕಿಗೆ ಬಂದಿದೆ.

ಬಿಳಿನೆಲೆ ಗ್ರಾಮ ಸೂಡ್ಲು ನಿವಾಸಿ ದುಗ್ಗಪ್ಪ ಗೌಡರ ಪುತ್ರ ಪ್ರಸಾದ್ ಮೃತ ಯುವಕ.


Ad Widget

Ad Widget

Ad Widget

ಕೈಕಂಬದಲ್ಲಿ ಶಾಮಿಯಾನ ಸರ್ವಿಸ್ ಹೊಂದಿದ್ದ ಪ್ರಸಾದ್, ಅದನ್ನು ಮತ್ತೋರ್ವರಿಗೆ ಮಾರಾಟ ಮಾಡಿ ಮನೆಯಲ್ಲೇ ಇದ್ದರು. ಕೆಲ ದಿನಗಳ ಹಿಂದೆ ಕಡಬದ ಅಂಗಡಿಯೊಂದರಲ್ಲಿ ಕೆಲಸಕ್ಕೆ ನಿಯೋಜನೆಗೊಂಡ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನದ ಅವಶ್ಯಕತೆ ಇತ್ತು ಎನ್ನಲಾಗಿದೆ. ಇತ್ತ ಮನೆಯಲ್ಲಿ ಹಳೆಯ ಬೈಕ್ ಇದ್ದು, ಅದನ್ನು ತನಗೆ ನೀಡುವಂತೆ ಪ್ರಸಾದ್ ತನ್ನ ಮನೆಯವರ ಬಳಿ ಕೇಳಿದ್ದ ಎನ್ನಲಾಗಿದೆ.

ಆದರೆ ಇನ್ಮುರೆನ್ಸ್ ವಾಯ್ದೆ ಕಳೆದಿದ್ದರಿಂದ ಎರಡು ದಿನಗಳ ಕಾಲ ಕಾಯುವಂತೆ ಮನೆಯವರು ಪ್ರಸಾದ್ ಗೆ ಮನವಿ ಮಾಡಿದ್ದರು. ಆದರೆ ಬೈಕ್ ನೀಡಲಿಲ್ಲ ಎಂಬ ಸಿಟ್ಟಿನಲ್ಲಿ ಎಲ್ಲರ ಮುಂದೆಯೇ ಮನೆಯಲ್ಲಿದ್ದ ಇಲಿಪಾಷಾಣ ಸೇವಿಸಿದ್ದಾರೆ ಎನ್ನಲಾಗಿದೆ.

ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಿ, ಪುತ್ತೂರಿನ ಆಸ್ಪತ್ರೆಯಲ್ಲಿ ಎರಡು ದಿನಗಳ ಕಾಲ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಈ ಘಟನೆಗೆ ಸಂಬಂಧಿಸಿದಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

error: Content is protected !!
Scroll to Top
%d bloggers like this: