ನಟಿ ಸಾಯಿ ಪಲ್ಲವಿಯ ಮದುವೆ ತಯಾರಿ | ಅಭಿಮಾನಿಗಳಲ್ಲಿ ವಿರಹ ವೇದನೆ, ತವಕ ತಲ್ಲಣ ಶುರು !

ಸೌತ್ ಸಿನಿಮಾ ಇಂಡಸ್ಟ್ರಿಯ ಸಹಜ ಸುಂದರಿ ಸಾಯಿ ಪಲ್ಲವಿ ಅವರಿಗೆ ಫ್ಯಾನ್ ಫಾಲವರ್ಸ್ ತುಂಬಾ ಮಂದಿ ಇದ್ದಾರೆ. ಸಾಯಿ ಪಲ್ಲವಿಗೆ ಎಷ್ಟು ದೊಡ್ಡ ಅಭಿಮಾನಿಗಳ ಬಳಗವಿದೆ ಅನ್ನೋದಕ್ಕೆ ಒಂದು ಸಣ್ಣ ಝಳಕ್ ಇತ್ತೀಚೆಗೆ ರಶ್ಮಿಕಾ ಮಂದಣ್ಣ ಸಿನಿಮಾ ಆಡವಾಳು ಮೀಕು ಜೋಹಾರ್ಲು ಕಾರ್ಯಕ್ರಮದಲ್ಲೇ ಸಿಕ್ಕಿತ್ತು. ಕಾರ್ಯಕ್ರಮ ರಶ್ಮಿಕಾ ಸಿನಿಮಾದೇ ಆದ್ರೂ ಅಲ್ಲಿದ್ದವರೆಲ್ಲಾ ನಾನ್ ಸ್ಟಾಪ್ ಚಪ್ಪಾಳೆ ಹೊಡೆದದ್ದು ಮಾತ್ರ ಸಾಯಿ ಪಲ್ಲವಿಗೆ.

“ಪ್ರೇಮಂ” ಸಿನಿಮಾ ಮೂಲಕ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡಿದ ಈ ನಟಿ ತಮ್ಮ ಸಹಜ ಅಭಿನಯದ ‘ಅದಾ’ ಮೂಲಕ ಅಭಿಮಾನಿಗಳನ್ನ ‘ಫಿದಾ’ ಆಗುವಂತೆ ಮಾಡಿ ಯಶಸ್ಸು ಪಡೆದು, ಎಲ್ಲರ ಮನಸ್ಸಿನಲ್ಲಿ ಮನೆಮಾತಾಗಿದ್ದಾರೆ.


Ad Widget

Ad Widget

Ad Widget

ಸಾಯಿ ಪಲ್ಲವಿ ಸದ್ಯ ಯಾವುದೇ ಸಿನಿಮಾಗಳನ್ನ ಒಪ್ಪಿಕೊಳ್ತಿಲ್ಲ ಎಂಬ ವಿಷಯ ಎಲ್ಲರಿಗೂ ಗೊತ್ತೇ ಇದೆ. ಇದು ಸಾಯಿಪಲ್ಲವಿ ಅಭಿಮಾನಿಗಳ ಮನಸ್ಸಿನಲ್ಲಿ ಸಾಕಷ್ಟು ಗೊಂದಲಕ್ಕೆ ಅವಕಾಶ ನೀಡಿದೆ. ಮೂಲಗಳ ಪ್ರಕಾರ ಸಾಯಿ ಪಲ್ಲವಿ ಸದ್ಯದಲ್ಲೇ ಮದುವೆಯಾಗಲಿದ್ದಾರೆ ಹೀಗಾಗಿ ಸಿನಿಮಾರಂಗದಿಂದ ಅಂತರ ಕಾಯ್ದುಕೊಳ್ತಿದ್ದಾರೆ ಎನ್ನಲಾಗುತ್ತಿದೆ.

ಇಷ್ಟು ಮಾತ್ರವಲ್ಲದೇ ಅರೇಂಜ್ ಮ್ಯಾರೇಜ್ ಆಗಲಿದ್ದಾರಂತೆ ಸಾಯಿ ಪಲ್ಲವಿ. ಮನೆಯವರು ಗಂಡು ಹುಡುಕುವ ಕೆಲಸವನ್ನೂ ಶುರು ಮಾಡಿದ್ದಾರೆ ಎನ್ನಲಾಗುತ್ತಿದೆ.

Leave a Reply

error: Content is protected !!
Scroll to Top
%d bloggers like this: