ಅಪರಿಚಿತನ ಸಾವಿಗೆ ಮರುಗಿದ ಯುವಕ | ತಾನೂ ನೇಣಿಗೆ ಬಿದ್ದು ಕೊಂದು ಕೊಂಡ ಬದುಕ!!

ಬೆಂಗಳೂರು: ತನಗೆ ಏನೇನೂ ಸಂಬಂಧ ಇರದ ಅಪರಿಚಿತ ವ್ಯಕ್ತಿಯ ಆತ್ಮಹತ್ಯೆಯಿಂದ ಬೇಸತ್ತ ಯುವಕನೊಬ್ಬ 24 ವರ್ಷದ ಯುವಕ ಶುಕ್ರವಾರ ಮನೆಯಲ್ಲಿ ಆತ್ಮಹತ್ಯೆಗೆ ಶರಣಾದ ವಿಚಿತ್ರ ಘಟನೆ ವರದಿಯಾಗಿದೆ.

ಕೆಂಗೇರಿ ಬಳಿ ರಸ್ತೆ ಬದಿಯ ಮರಕ್ಕೆ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಸತ್ತಿದ್ದ. ಅದನ್ನು ನೋಡಿದ, ಮೊಬೈಲ್ ರಿಪೇರಿ ತಂತ್ರಜ್ಞನಾಗಿ ಕೆಲಸ ಮಾಡುತ್ತಿದ್ದ ಮಂಜುನಾಥ್ ಎಂಬಾತ ಈ  ಅಪರಿಚಿತ ವ್ಯಕ್ತಿಯ ಸಾವಿನಿಂದ ಕಂಗೆಟ್ಟಿದ್ದ. ಕಳೆದ 20 ದಿನಗಳ ನಂತರವೂ ಆತ ತೀವ್ರ ಭಯದಲ್ಲಿದ್ದು ಆತ್ಮಹತ್ಯೆಯ ಕನಸು ಕಾಣುವುದಾಗಿ ಆತ ತನ್ನ ತಾಯಿಗೆ ಹೇಳುತ್ತಿದ್ದ. ತಾಯಿ ಸಮಾಧಾನ ಮಾಡುತ್ತಿದ್ದಳು.


Ad Widget

Ad Widget

Ad Widget

ಆದರೆ ಆತ ತನ್ನ ಮನೆಯಲ್ಲಿದ್ದ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದುಕೊಂಡಿದ್ದಾನೆ. ಕಳೆದ ಶುಕ್ರವಾರ ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯೊಳಗೆ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಸಂಜೆ 6 ಗಂಟೆಗೆ ಅವರ ತಾಯಿ ಜಿ ಮಂಗಳಾ (44) ಕೆಲಸದಿಂದ ಮನೆಗೆ ಹಿಂದಿರುಗಿದಾಗ ಬಾಗಿಲು ಒಳಗಿನಿಂದ ಲಾಕ್ ಆಗಿರುವುದನ್ನು ಕಂಡು ಬಂದಿದೆ. ಬಾಗಿಲು ತಟ್ಟಿದರೂ ಯಾವುದೇ  ಪ್ರತಿಕ್ರಿಯೆ ಬರಲಿಲ್ಲ. ನಕಲಿ ಕೀಲಿಯೊಂದಿಗೆ ಬಾಗಿಲನ್ನು ತೆಗೆದು ನೋಡಿದಾಗ ಆತ್ಮಹತ್ಯೆಗೆ ಶರಣಾಗಿರುವುದು ಕಂಡು ಬಂದಿದೆ.

ಮಂಜುನಾಥನ ತಾಯಿ ಮಗನಿಗೆ ಧೈರ್ಯ ತುಂಬಲು ಪ್ರಯತ್ನಿಸಿದ್ದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಅವನು ನಿದ್ದೆಯಲ್ಲಿ ಕನವರಿಸುತ್ತಿದ್ದ, ಕಿರುಚಾಡುತ್ತಿದ್ದ, ಆತ್ಮಹತ್ಯೆಯ ಚಿತ್ರಗಳು ಕಣ್ಣು ಮುಂದೆ ಬರುತ್ತಿವೆ ಎಂದು ತಾಯಿ ಬಳಿ ಹೇಳುತ್ತಿದ್ದ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಸಂಬಂಧ ಮಂಗಳಾ ಪೊಲೀಸರಿಗೆ ದೂರು ನೀಡಿದ್ದಾರೆ. ತನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಮಂಜುನಾಥ್ ಡೆತ್ ನೋಟ್ ಬರೆದಿದ್ದಾರೆ.  ಡೆತ್ ನೋಟ್ ನ್ಲಿರುವ ಕೈ ಬರಹ ತಮ್ಮ ಮಗನದ್ದೇ ಎಂದು ಹೇಳಿದ್ದಾರೆ.

Leave a Reply

error: Content is protected !!
Scroll to Top
%d bloggers like this: