ಧ್ವಂಸವಾದ ಉಕ್ರೇನ್ ರಕ್ಷಣಾ ಸೇತುವೆ

0 17

ರಶ್ಯ-ಉಕ್ರೇನ್ ನಡುವಿನ ಯುದ್ಧವು ಸೋಮವಾರ 68ನೇ ದಿನಕ್ಕೆ ಮುಂದುವರಿದಿದ್ದು , ಡಿನಿಸ್ಟರ್ ನದಿಗೆ ನಿರ್ಮಿಸಿರುವ ಈ ಸೇತುವೆ ರಕ್ಷಣಾ ಕಾರ್ಯತಂತ್ರದಲ್ಲಿ ಅತ್ಯಂತ ಪ್ರಾಮುಖ್ಯತೆ ಪಡೆದಿದ್ದು,  ಕ್ಷಿಪಣಿ ದಾಳಿಗೆ ಈ ಸೇತುವೆ ಈಗ ಧ್ವಂಸವಾಗಿದೆ.

ನೈಋತ್ಯ ಉಕ್ರೇನ್ ನ ಒಡೆಸಾ ಪ್ರಾಂತದಲ್ಲಿ ರಕ್ಷಣಾ ಕಾರ್ಯತಂತ್ರದಲ್ಲಿ ಅತ್ಯಂತ ಮಹತ್ವ ಪಡೆದಿರುವ ಸೇತುವೆಯೊಂದನ್ನು ರಶ್ಯ ಸೇನೆ ಕ್ಷಿಪಣಿ ಪ್ರಯೋಗಿಸಿ ಧ್ವಂಸಗೊಳಿಸಿುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಸೋಮವಾರ ಬೆಳಿಗ್ಗೆ ಸೇತುವೆಯನ್ನು ಗುರಿಯಾಗಿಸಿ ರಶ್ಯ ಸೇನೆ ನಡೆಸಿದ ಕ್ಷಿಪಣಿ ಮತ್ತು ಬಾಂಬ್ ದಾಳಿಯಲ್ಲಿ ಸೇತುವೆ ಧ್ವಂಸಗೊಂಡಿದ್ದು ಹಲವಾರು ನಾಗರಿಕರು ಮೃತಪಟ್ಟಿದ್ದಾರೆ
ರಶ್ಯ ಸೇನೆಯ ಮುತ್ತಿಗೆಗೆ ಒಳಗಾಗಿರುವ ಆಯಕಟ್ಟಿನ ಬಂದರು ನಗರ ಮರಿಯುಪೋಲ್ ನ ಉಕ್ಕುಸ್ಥಾವರದೊಳಗೆ ಸಿಕ್ಕಿಬಿದ್ದಿರುವ ಸುಮಾರು 100 ನಾಗರಿಕರನ್ನು ಅಲ್ಲಿಂದ ಸುರಕ್ಷಿತವಾಗಿ ಸ್ಥಳಾಂತರಗೊಳಿಸಲಾಗಿದೆ.

Leave A Reply