Indian Bank ನಲ್ಲಿ ಉದ್ಯೋಗ| ಕ್ರೀಡಾ ಕೋಟದಲ್ಲಿ ಕ್ಲರ್ಕ್ ಹುದ್ದೆ

ಇಂಡಿಯನ್ ಬ್ಯಾಂಕ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದೆ. ಈ ನೇಮಕಾತಿಯು ಕ್ರೀಡಾ ಕೋಟಾದಲ್ಲಿ ನಡೆಯಲಿದ್ದು, ಕ್ಲರ್ಕ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿ ಈ ಕೆಳಗೆ ನೀಡಲಾಗಿದೆ.

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 30-04-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 14-05-2022.


Ad Widget

Ad Widget

Ad Widget

ಹುದ್ದೆ : ಅಧಿಸೂಚನೆಯ ಪ್ರಕಾರ ಒಟ್ಟು 12 ಕ್ಲರ್ಕ್/ಜೆಜಿಎಂ ನೇಮಕಾತಿ ನಡೆಯಲಿದೆ.

ಅಥ್ಲೆಟಿಕ್ಸ್, ಬಾಸ್ಕೆಟ್‌ಬಾಲ್, ಕ್ರಿಕೆಟ್, ಹಾಕಿ, ವಾಲಿಬಾಲ್‌ನಂತಹ ಕ್ರೀಡೆಗಳಲ್ಲಿ ಪ್ರಮಾಣಪತ್ರ ಹೊಂದಿರುವ ಅಭ್ಯರ್ಥಿಗಳನ್ನು ಈ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.

ವಿದ್ಯಾರ್ಹತೆ : ಅಭ್ಯರ್ಥಿಗಳು ಪಿಯುಸಿ ತೇರ್ಗಡೆಹೊಂದಿರಬೇಕು. ಮತ್ತು ಸಂಬಂಧಿತ ಕ್ರೀಡೆಗಳಲ್ಲಿ ರಾಷ್ಟ್ರೀಯ ಮಟ್ಟ / ಜೂನಿಯರ್ / ಹಿರಿಯರ ತಂಡಗಳನ್ನು ಪ್ರತಿನಿಧಿಸಿರಬೇಕು.

ವಯೋಮಿತಿ : ಈ ಹುದ್ದೆಗಳಿಗೆ 18 ರಿಂದ 26 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು.

ಈ ಹುದ್ದೆಗೆ  ಆನ್‌ಲೈನ್‌ನಲ್ಲಿ ಮಾತ್ರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಆಯ್ಕೆ ಪ್ರಕ್ರಿಯೆ : ಅಪ್ಲಿಕೇಶನ್ ಸ್ಟೀನಿಂಗ್ ಮತ್ತು ಪ್ರಯೋಗಗಳಲ್ಲಿ ತೋರಿದ ಪ್ರತಿಭೆಯನ್ನು ಆಧರಿಸಿ ಅಭ್ಯರ್ಥಿಗಳನ್ನು ಮೊದಲು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ನಂತರ ಸಂದರ್ಶನದ ಆಧಾರದ ಮೇಲೆ ಅಂತಿಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Leave a Reply

error: Content is protected !!
Scroll to Top
%d bloggers like this: