ಈ ಮೀನು ಸಿಕ್ಕವರು ಕೋಟ್ಯಾಧಿಪತಿಗಳು

ಇತ್ತೀಚಿಗೆ ಮೀನುಗಾರಿಕಾ ಬಂದರು ಒಂದರಲ್ಲಿ ಕೇವಲ ಮೂರು ಮೀನುಗಳು 2.25 ಲಕ್ಷ ರೂ.ಗೆ ಹರಾಜಾಗಿ ದೊಡ್ಡ ಸುದ್ದಿಯಾಗಿದ್ದವು. ಈ ಮೀನಿನ ಬಗ್ಗೆ ಸಹಜವಾಗಿ ಅಚ್ಚರಿ-ಆಶ್ಚರ್ಯ ಉಂಟಾಗಿತ್ತು.

ಅದು ಯಾವ ಮೀನು ಅಂದುಕೊಂಡಿರಾ ? ಅದೇ ಘೋಲ್ ಮೀನುಗಳು.ಇದನ್ನು ಸಾಮಾನ್ಯವಾಗಿ ‘ಸಮುದ್ರ ಚಿನ್ನ’ ಎಂದೇ ಕರೆಯಲಾಗುತ್ತದೆ. ಸಿಂಗಾಪುರ, ಮಲೇಷಿಯಾ, ಹಾಂಗ್ಲಾಂಗ್ ಮತ್ತು ಜಪಾನ್ ನಂತಹ ದೇಶಗಳಲ್ಲಿ ಅವುಗಳಿಗೆ ಹೆಚ್ಚಿನ ಬೇಡಿಕೆಯಿದೆ.

ಫೈಲ್ ಮೀನು ವಿಶ್ವದ ಅತ್ಯಂತ ದುಬಾರಿ ಸಮುದ್ರ ಮೀನು ಮತ್ತು ಅದರ ಬೆಲೆಯನ್ನು ಅದರ ಗಾತ್ರ ಮತ್ತು ತೂಕದಿಂದ ನಿರ್ಧರಿಸಲಾಗುತ್ತದೆ. ಫೋಲ್ ಮೀನಿನಲ್ಲಿ ಒಳಗೊಂಡಿರುವ ಜೀವಸತ್ವಗಳು, ಖನಿಜಗಳು ದೃಷ್ಟಿ ಮತ್ತು ಸ್ನಾಯುವಿನ ಕಾರ್ಯಕ್ಷಮತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಫೋಲ್ ತ : ಮೀನುಗಳು ಚರ್ಮದಲ್ಲಿನ ಸುಕ್ಕುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಆದ್ದರಿಂದ ಪೋಲ್ ಮೀನು ತಿನ್ನುವುದು ಚರ್ಮದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ನಿತ್ಯವೂ ಘೋಲ್ ಮೀನನ್ನು ತಿನ್ನುವುದರಿಂದ ಮಕ್ಕಳ ಮಿದುಳಿನ ಜೀವಕೋಶಗಳು ಮತ್ತು ಸಾಮರ್ಥ್ಯ ಹೆಚ್ಚುತ್ತದೆ. ಇದನ್ನು ಮೀನಿನಲ್ಲಿರುವ ಒಮೆಗಾ-3 ಹೆಚ್ಚಿಸುತ್ತದೆ. ಹೆಣ್ಣು ಮೀನುಗಳಿಗಿಂತ ಗಂಡು ಮೀನು ಹೆಚ್ಚು ದುಬಾರಿಯಾಗಿದೆ. ಮಹಾರಾಷ್ಟ್ರದ ಮನುಗಾರ ಚಂದ್ರಕಾತ್ ತಾರೆ ಅವರು ಸೆಪ್ಟೆಂಬರ್‌ನಲ್ಲಿ ಹಿಡಿದ 157 ಘೋಲ್ ಮೀನುಗಳನ್ನು ಮಾರಾಟ ಮಾಡುವ ಮೂಲಕ 1.33 ಕೋಟಿ ರೂ. ಗಳಿಸಿದ್ದರು.

Leave A Reply

Your email address will not be published.