ಬುದ್ಧಿಮಾಂದ್ಯ ತಾಯಿ ತನ್ನ ಕರುಳ ಬಳ್ಳಿಯನ್ನು ಹತ್ತು ವರ್ಷದ ಬಳಿಕ ನೀನೆ ನನ್ನ ಕೂಸು ಎಂದು ಗುರುತಿಸುವ ಹೃದಯಸ್ಪರ್ಶಿ ವೀಡಿಯೋ ವೈರಲ್ !!

ಪ್ರಪಂಚದಲ್ಲಿ ತಂದೆ-ಮಗಳು ಹಾಗೂ ತಾಯಿ-ಮಗನ ಸಂಬಂಧ ತುಂಬಾ ವಿಶೇಷವಾದದ್ದು. ಅದರಲ್ಲೂ ತಾಯಿ ಮತ್ತು ಮಗನ ಸಂಬಂಧವು ತುಂಬಾ ಹತ್ತಿರದ್ದೇ ಎನ್ನಬಹುದು. ಯಾಕೆಂದರೆ ತಾಯಿ ಮಗ ದೊಡ್ಡವನಾದರೂ ಆಕೆಗೆ ಮಾತ್ರ ಆತ ಎಂದಿಗೂ ಮಗುವಿನಂತೆ. ಹೀಗಾಗಿ ಪ್ರತೀ ಹೆಜ್ಜೆಯಲ್ಲೂ ಆಕೆ ಮಗನಿಗೆ ಸಲಹೆಗಳನ್ನು ನೀಡುತ್ತಲಿರುವಳು. ಹೀಗಾಗಿ ತಾಯಿ ಮಗನ ಸಂಬಂಧವು ತುಂಬಾ ವಿಶೇಷವಾಗಿರುವುದು.

ಹೌದು. ಈ ತಾಯಿ-ಮಗನ ಸಂಬಂಧ ಎಷ್ಟು ಪವಿತ್ರವಾದದ್ದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಬುದ್ಧಿಮಾಂದ್ಯತೆಯಿಂದ ಬಳಲುತ್ತಿರುವ 90 ವರ್ಷದ ಮಹಿಳೆಯೊಬ್ಬರು ತನ್ನ ಮಗನನ್ನು ಗುರುತಿಸಿದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ವೀಡಿಯೋ ನೋಡಿದ ನೆಟ್ಟಿಗರು ಭಾವನಾತ್ಮಕವಾಗಿ ಕಾಮೆಂಟ್ ಮಾಡುತ್ತಿದ್ದಾರೆ.

ತನ್ನ ತಾಯಿಯ 90ನೇ ವರ್ಷದ ಹುಟ್ಟುಹಬ್ಬದ ಹಿನ್ನೆಲೆ ಸಪ್ರ್ರೈಸ್ ಕೊಡಬೇಕೆಂದು ಮಗ ಹಲವು ವರ್ಷಗಳ ನಂತರ ಮನೆಗೆ ಬಂದಿದ್ದನು. ಈ ವೇಳೆ ತಾಯಿ ತನ್ನ ಮಗನನ್ನು ಗುರುತಿಸಿ, ನೀನು ನನ್ನ ಮಗ ಜೋಯಿ ಎಂದು ಕರೆಯುವ ಕ್ಷಣ ನೋಡುಗರನ್ನು ಭಾವುಕರನ್ನಾಗಿಸುತ್ತದೆ. ಇನ್‍ಸ್ಟಾಗ್ರಾಮ್‍ನಲ್ಲಿ ಈ ವೀಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ನನ್ನ ಸಹೋದರ ತನ್ನ ತಾಯಿಯ 90ನೇ ವರ್ಷದ ಹುಟ್ಟುಹಬ್ಬದಂದು ಸಪ್ರ್ರೈಸ್ ಕೊಟ್ಟಿದ್ದಾನೆ ಎಂದು ಬರೆದುಕೊಳ್ಳಲಾಗಿದೆ. ನೆಟ್ಟಿಗರು ಸಹ ಈ ವೀಡಿಯೋ ನೋಡಿ ಮೆಚ್ಚಿಕೊಂಡಿದ್ದಾರೆ.

ವೀಡಿಯೋದಲ್ಲಿ ಏನಿದೆ?

ಮಗ ಜೋಯಿ ಬಾಗಿಲು ಬಡಿಯುತ್ತಿರುವುದರಿಂದ ವೀಡಿಯೋ ಪ್ರಾರಂಭವಾಗುತ್ತೆ. ಜೋಯಿ ತಾಯಿ ಮಂಚದ ಮೇಲೆ ಕುಳಿತ್ತಿರುತ್ತಾಳೆ. ಅಲ್ಲಿಗೆ ಜೋಯಿ ಬಂದು ವಿಶ್ ಮಾಡಿ, ತಾಯಿಯನ್ನು ಹೇಗಿದ್ದೀಯಾ ಎಂದು ಕೇಳುತ್ತಾನೆ. ಅದಕ್ಕೆ ಅವಳು ಜೋರು ಧ್ವನಿಯಲ್ಲಿ ನಾನು ಚೆನ್ನಾಗಿದ್ದೇನೆ, ಧನ್ಯವಾದಗಳು ಎಂದು ಕೇಳುತ್ತಾರೆ.

ಈ ವೇಳೆ ಜೋಯಿ ತನ್ನ ತಾಯಿಯನ್ನು, ನಾನು ಯಾರೆಂದು ಗುರುತಿಸು? ಎಂದಾಗ ಆಕೆ, ಜೋಯಿ, ನೀನು ನನ್ನ ಜೋಯಿ ಎಂದು ನಗುತ್ತ ಹೇಳುತ್ತಾಳೆ. ಇದನ್ನು ಕೇಳಿಸಿಕೊಂಡ ಮಗ ಭಾವುಕನಾಗುತ್ತಾನೆ. ನಾನು ನಿನ್ನನ್ನು ಪ್ರೀತಿಸುತ್ತೇನೆ ನನ್ನ ಜೋಯಿ ಎಂದು ಹೇಳುತ್ತ ತಾಯಿಯು ತನ್ನ ಅಂಗೈಯಿಂದ ಜೋಯಿ ಮುಖವನ್ನು ಹಿಡಿದುಕೊಳ್ಳುತ್ತಾಳೆ. ಈ ವೀಡಿಯೋ ನೋಡಿದ ನೆಟ್ಟಿಗರು, ಇದನ್ನು ನೋಡಿ ನನಗೆ ಅಳುವನ್ನು ತಡೆದುಕೊಳ್ಳಲಾಗುತ್ತಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.

https://www.instagram.com/reel/Cc0rEaEjPAL/?igshid=YmMyMTA2M2Y=

ಮತ್ತೆ ಕೆಲವರು, ಅವರ ತಾಯಿ, ಅವನಿಗೆ ಹೇಳುವ ರೀತಿ ಕೇಳಿಸಿಕೊಂಡು ನನಗೆ ಅಳುಬರುತ್ತಿದೆ. ದೇವರು ಅವರಿಗೆ ಆಶೀರ್ವದಿಸಲಿ, ವಿಶೇಷ ಕ್ಷಣ ಎಂದು ಕಾಮೆಂಟ್ ಮಾಡಿದ್ದಾರೆ. ನಿಮ್ಮ ತಂದೆ-ತಾಯಿಗಳು ದೊಡ್ಡವರಾಗುತ್ತಾರೆ. ಆದರೆ ಅವರು ಬೆಳೆಯುತ್ತ ಬೆಳೆಯುತ್ತ ಮಕ್ಕಳಂತೆ ಆಗುತ್ತಾರೆ. ಇದು ಹೃದಯ ವಿದ್ರಾವಕ ವೀಡಿಯೋವಾಗಿದೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.

Leave A Reply

Your email address will not be published.