ಇಂದು ವಿಶ್ವ ನೃತ್ಯ ದಿನ; ತಿಳಿಯಿರಿ ಈ ಮುಖ್ಯ ಮಾಹಿತಿ
ವಿಶ್ವ ನೃತ್ಯ ದಿನಾಚರಣೆಯನ್ನು ಪ್ರಪಂಚದಾದ್ಯಂತ ಪ್ರತಿ ವರ್ಷ ಏಪ್ರಿಲ್ 29ರಂದು ಆಚರಿಸಲಾಗುತ್ತದೆ. ಈ ದಿನ ಜಗತ್ತಿನಾದ್ಯಂತ ಅನೇಕ ಕಡೆ ವಿವಿಧ ಪ್ರಕಾರಗಳ ನೃತ್ಯ ಪ್ರದರ್ಶನ ನಡೆಯುತ್ತದೆ.
ಅಂತಾರಾಷ್ಟ್ರೀಯ ನೃತ್ಯದಿನವನ್ನು ಪ್ರಾರಂಭಿಸಿದ್ದು ಅಂತಾರಾಷ್ಟ್ರೀಯ ಥಿಯೇಟರ್ ಇನ್ಸ್ಟಿಟ್ಯೂಟ್ (ಐಐಟಿ)ನ ನೃತ್ಯ ಸಮಿತಿ. ಈ ಐಐಟಿ ಯುನೆಸ್ಕೋದ ಕಲಾಪ್ರದರ್ಶನಗಳ ಪ್ರಮುಖ ಪಾಲುದಾರನೂ ಹೌದು. 1982ರಿಂದಲೂ ಇದನ್ನೂ ಆಚರಿಸಿಕೊಂಡು ಬರಲಾಗುತ್ತಿದ್ದು, ನೃತ್ಯ ಪ್ರಕಾರದ ಮೌಲ್ಯ, ಪ್ರಾಮುಖ್ಯತೆಯನ್ನು ಅರಿತವರು ಈ ಅಂತಾರಾಷ್ಟ್ರೀಯ ನೃತ್ಯ ದಿನವನ್ನು ತುಂಬ ಸಂಭ್ರಮದಿಂದ ಆಚರಿಸುತ್ತಾರೆ.
ಐಐಟಿಯ ನೃತ್ಯ ಸಮಿತಿ ಏಪ್ರಿಲ್ 29ರಂದೇ ಅಂತಾರಾಷ್ಟ್ರೀಯ ನೃತ್ಯ ದಿನವನ್ನು ಆಚರಿಸಲು ಆಯ್ಕೆ ಮಾಡಿಕೊಂಡಿದ್ದಕ್ಕೆ ಕಾರಣವೂ ಇದೆ. ಫ್ರೆಂಚ್ನ ಪ್ರಸಿದ್ಧ ನೃತ್ಯಗಾರ, ಆಧುನಿಕ ಬ್ಯಾಲೆ ನೃತ್ಯದ ಸೃಷ್ಟಿಕರ್ತ ಜೀನ್ ಜಾರ್ಜಸ್ ನೊವೆರೆ ಅವರ ಜನ್ಮದಿನ. ಜೀನ್ ಅವರ ಗೌರವಾರ್ಥ ಪ್ರತಿವರ್ಷ ಏಪ್ರಿಲ್ 29ರಂದು ಸಂಭ್ರಮಿಸಲಾಗುತ್ತದೆ.