ಚಾಕಲೇಟ್ ನಿಂದ ಹರಡುತ್ತಿದೆ ಸಾಲ್ಮೋನೆಲ್ಲಾ ಬ್ಯಾಕ್ಟೀರಿಯಾ | ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ

ಚೀನಾದಿಂದ ಕೊರೊನಾ ವೈರಸ್‌ ಹರಡಿದ ರೀತಿಯಲ್ಲೇ ಬೆಲ್ಜಿಯಂನಿಂದ ಚಾಕೋಲೇಟ್‌ಗಳಲ್ಲಿ ಸಾಲ್ಮೋನೆಲ್ಲಾ ಹೆಸರಿನ ಬ್ಯಾಕ್ಟೀರಿಯಾ ಹರಡಲಾರಂಭಿಸಿದೆ. ಈ ಸೋಂಕಿಗೆ ಈಗಾಗಲೇ ಯುರೋಪ್‌ ಖಂಡದಾದ್ಯಂತ 150 ಮಕ್ಕಳು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ.

ಯುನೈಟೆಡ್‌ ಕಿಂಗ್‌ಡಂ ವಿಶ್ವ ಆರೋಗ್ಯ ಸಂಸ್ಥೆಗೆ ನೀಡಿರುವ ವರದಿಯ ಪ್ರಕಾರ ಅಮೆರಿಕದಲ್ಲಿ ಓರ್ವರಿಗೆ ಹಾಗೂ ಯುರೋಪ್‌ ಖಂಡದ 10 ರಾಷ್ಟ್ರಗಳ 150 ಮಕ್ಕಳಿಗೆ ಸಲ್ಮೋನೆಲ್ಲಾ ಸೋಂಕು ಹರಡಿದೆ.

ಸೋಂಕಿತರು ಬಹುಪಾಲು 10 ವರ್ಷದೊಳಗಿನ ಮಕ್ಕಳಾಗಿದ್ದಾರೆ. ವಿಶ್ವಸಂಸ್ಥೆ ವರದಿಯ ಪ್ರಕಾರ ಬೆಲ್ಜಿಯಂ ಕನಿಷ್ಠ 113 ರಾಷ್ಟ್ರಗಳಿಗೆ ಚಾಕೋಲೇಟ್‌ ರಫ್ತು ಮಾಡಿದೆ. ಈ ಬ್ಯಾಕ್ಟೀರಿಯಾದಿಂದ ಮನುಷ್ಯನಲ್ಲಿ ಜ್ವರ, ಹೊಟ್ಟೆ ನೋವು, ಅತಿಸಾರ ಕಾಣಿಸಿಕೊಳ್ಳಬಹುದು. ಮಕ್ಕಳಲ್ಲಿ ಮತ್ತು ವೃದ್ಧರಲ್ಲಿ ಇದು ಗಂಭೀರ ಪರಿಣಾಮ ಉಂಟುಮಾಡಬಹುದು.

ಈ ಹಿಂದೆ ಬೆಲ್ಜಿಯಂನ ಕಿಂಡರ್‌ ಚಾಕೋಲೇಟ್‌ ಉತ್ಪಾದನಾ ಕಂಪನಿಯಲ್ಲಿ ಸಲ್ಮೊನೆಲ್ಲಾ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಆ ಕಂಪನಿಯ ಬಾಗಿಲು ಮುಚ್ಚಲಾಗಿತ್ತು.

Leave A Reply

Your email address will not be published.