ಮೇಕೆ ಮರಿ ನುಂಗಿದ ಸುಮಾರು 14 ಅಡಿ ಉದ್ದದ ಹೆಬ್ಬಾವು|ಬೇಟೆ ಮುಗಿಸಿ ಬೆಚ್ಚಗೆ ಶೆಡ್​ನಲ್ಲಿ ಮಲಗಿದ್ದ ಹಾವು ಉರಗ ತಜ್ಞರ ಕೈ ವಶ

ಚಿಕ್ಕಮಗಳೂರು: ಮೇಕೆ ಮರಿ ನುಂಗಿ ಬೆಚ್ಚಗೆ ಶೆಡ್​ನಲ್ಲಿ ಮಲಗಿದ್ದ ಬೃಹತ್ ಗಾತ್ರದ ಹೆಬ್ಬಾವನ್ನು ಉರಗ ತಜ್ಞರ ಸಹಾಯದಿಂದ ಸುರಕ್ಷಿತವಾಗಿ ಸೆರೆ ಹಿಡಿಯಲಾದ ಘಟನೆ ನಡೆದಿದೆ.

ನಗರದ ಕಾಫಿ ಮಂಡಳಿಯ ಸಮೀಪ ವೆಂಕಟಪ್ಪ ಎಂಬುವವರಿಗೆ ಸೇರಿದ ಕುರಿ ಶೆಡ್​ಗೆ ಸುಮಾರು 14 ಅಡಿ ಉದ್ದದ ಹೆಬ್ಬಾವು ಬಂದು ಮೇಕೆ ಮರಿಯನ್ನು ನುಂಗಿದ್ದು,ಇದನ್ನು ಗಮನಿಸಿದ ಮಾಲೀಕ ವೆಂಕಟಪ್ಪ ಮೇಕೆ ಮರಿ ಪ್ರಾಣ ಉಳಿಸಲು ಜೋರಾಗಿ ಕಿರುಚಿದ್ದಾರೆ. ಆದರೆ, ಹೆಬ್ಬಾವು ಮಾತ್ರ ಮೇಕೆ ಮರಿ ನುಂಗುವುದನ್ನು ಬಿಡಲಿಲ್ಲ.

ಸಂಪೂರ್ಣವಾಗಿ ನುಂಗಿಯೇ ನಂತರ ಬೆಚ್ಚಗೆ ಶೆಡ್​ನಲ್ಲಿಯೇ ಮಲಗಿತ್ತು.ಕೂಡಲೇ ಸ್ಥಳೀಯರ ಸಹಕಾರದಿಂದ ಉರಗ ತಜ್ಞ ನರೇಶ್ ಅವರನ್ನು ಸ್ಥಳಕ್ಕೆ ಕರೆಸಲಾಗಿದೆ.ಸುಮಾರು 30 ನಿಮಿಷಕ್ಕೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿದ ಉರಗ ತಜ್ಞ, ನಂತರ ಹಾವನ್ನು ಸೆರೆ ಹಿಡಿದು ಕುರಿಯ ಶೆಡ್​ನಿಂದ ಹೊರತಂದರು.ಬಳಿಕ ನಗರದ ಹೊರ ವಲಯದ ಕರಡಿಹಳ್ಳಿ ಕಾವಲ್ ಅರಣ್ಯ ಪ್ರದೇಶದಲ್ಲಿ ಹೆಬ್ಬಾವನ್ನು ಸುರಕ್ಷಿತವಾಗಿ ಬಿಟ್ಟುಬರಲಾಗಿದೆ.

Leave A Reply

Your email address will not be published.