ನರ್ಸ್ ಕೈಯಿಂದ ಜಾರಿಬಿದ್ದು ನವಜಾತ ಶಿಶು ಸಾವು! ಮಗು ಬಿದ್ದದ್ದನ್ನು ಕಂಡು ತಾಯಿ ಚೀರಾಡಿದಾಗ, ಬಾಯಿ ಮುಚ್ಚುವಂತೆ ಸಿಬ್ಬಂದಿಯಿಂದ ಬೆದರಿಕೆ!

ಹೆರಿಗೆಯ ನಂತರ ನರ್ಸ್ ಮಗುವನ್ನು ಟವೆಲ್ ನಲ್ಲಿ ಸುತ್ತಿಕೊಳ್ಳದೆ ಎತ್ತಿದಾಗ, ನರ್ಸ್ ಕೈಯಿಂದ ಜಾರಿ ಬಿದ್ದು ನವಜಾತ ಶಿಶುವೊಂದು ಸಾವನ್ನಪ್ಪಿದೆ. ಈ ಘಟನೆ ಲಕ್ನೋದ ಖಾಸಗಿ ಆಸ್ಪತ್ರೆಯೊಂದರಲ್ಲಿ ನಡೆದಿದೆ.

 

ಈ ಘಟನೆ ಏಪ್ರಿಲ್ 19 ರಂದು ನಡೆದಿದ್ದು, ನರ್ಸ್ ನಿರ್ಲಕ್ಷ್ಯದಿಂದ ಮಗು ಸಾವನ್ನಪ್ಪಿದೆ ಎಂದು ಪೋಷಕರು ಆರೋಪ ಮಾಡಿದ್ದಾರೆ. ಏಪ್ರಿಲ್ 20ರಂದು ಮಗವಿನ ಮರಣೋತ್ತರ ವರದಿ ಬಂದಿದ್ದು, ಘಟನೆ ಸಂಬಂಧ ಆಸ್ಪತ್ರೆಯ ನರ್ಸ್ ಮತ್ತು ಇತರ ಸಿಬ್ಬಂದಿ ವಿರುದ್ಧ ಮೃತ ಮಗುವಿನ ತಂದೆ ಜೀವನ್ ರಜಪೂತ್ ಚಿನ್ಹತ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೃತ ಕಂದನ ತಾಯಿ ಪೂನಂ ತೀವ್ರ ಆಘಾತಕ್ಕೆ ಒಳಗಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

‘ನನ್ನ ಪತ್ನಿಗೆ ನಾರ್ಮಲ್ ಡೆಲಿವರಿಯಾಗಿ ಮಗು ಜನಿಸಿತ್ತು. ಆದರೆ ನರ್ಸ್ ಮಗುವನ್ನು ಯಾವುದೇ ಟವೆಲ್ ಇಲ್ಲದೆ ಕೈಯಲ್ಲಿ ಎತ್ತಿಕೊಳ್ಳಲು ಮುಂದಾದಾಗ ಮಗು ಕೈಯಿಂದ ಜಾರಿ ಬಿದ್ದು ಸಾವನ್ನಪ್ಪಿದೆ. ಇದರಿಂದ ಗಾಬರಿಗೊಂಡು ನನ್ನ ಪತ್ನಿ ಕಿರುಚಲು ಪ್ರಾರಂಭಿಸಿದ್ದಳು. ಆಗ ನರ್ಸ್ ಮತ್ತು ಇತರೆ ಸಿಬ್ಬಂದಿ ಅವಳ ಬಾಯಿಯನ್ನು ಮುಚ್ಚಿಕೊಳ್ಳುವಂತೆ ಬೆದರಿಕೆ ಹಾಕಿದ್ದಾರೆ ಎಂದು ಮೃತ ಮಗುವಿನ ತಂದೆ ರಜಪೂತ್ ಅವರು ಆರೋಪಿಸಿದ್ದಾರೆ.

Leave A Reply

Your email address will not be published.