‘ಕರ್ನಾಟಕ ವಿಧಾನಸಭೆ ಸಚಿವಾಲಯ’ದಲ್ಲಿ ಖಾಲಿ ಇರುವ 43 ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು: ಕರ್ನಾಟಕ ವಿಧಾನಸಭೆ ಸಚಿವಾಲದಲ್ಲಿ  ವೃಂದದಲ್ಲಿನ ವಿವಿಧ ವೃಂದಗಳ 43 ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಹುದ್ದೆಗಳ ವಿವರ :
•ವರದಿಗಾರರು – 02
•ಕಂಪ್ಯೂಟರ್ ಆಪರೇಟರ್ – 04
•ಕಿರಿಯ ಸಹಾಯಕರು – 10
• ಬೆರಳಚ್ಚುಗಾರರು – 01
• ದಲಾಯತ್ – 26

ವೇತನ :  ವರದಿಗಾರರು ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮಾಸಿಕ ರೂ.37,900 ರಿಂದ ರೂ. 70,850,  ಕಂಪ್ಯೂಟರ್ ಆಪರೇಟರ್ – ರೂ.30,350 ರಿಂದ ರೂ.58,250, ಕಿರಿಯ ಸಹಾಯಕರು – ರೂ.21,400 ರಿಂದ ರೂ.42,000/-, ಬೆರಳಚ್ಚುಗಾರರು – ರೂ.21,400 ರಿಂದ 42,000, ದಲಾಯತ್ ರೂ. 17,000 ರಿಂದ ರೂ.28,950/-

ವಿದ್ಯಾರ್ಹತೆ : ಕನ್ನಡ ವರದಿಗಾರರಿಗೆ ಯಾವುದೇ ಅಂಗೀಕೃತ ವಿವಿಯಿಂದ ಪದವಿ,  ಕನ್ನಡ ಶೀಘ್ರಲಿಪಿಗಾರ, ಕನ್ನಡ ಬೆರಳಚ್ಚು ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ಕಂಪ್ಯೂಟರ್ ಆಪರೇಟರ್ – ಯಾವುದೇ ವಿವಿಯಿಂದ ಕಂಪ್ಯೂಟರ್ ಅಪ್ಲಿಕೇಷನ್ ನಲ್ಲಿ ಬ್ಯಾಚಲರ್ಸ್ ಪದವಿ ಅಥವಾ ಬಿಎಸ್ಸಿ ಕಂಪ್ಯೂಟರ್ ಸೈನ್ಸ್.
ಕಿರಿಯ ಸಹಾಯಕರು – ಪದವಿ ಜೊತೆಗೆ ಗಣಕಯತಂತ್ರ ಸಾಮಾನ್ಯ ಜ್ಞಾನ ಹೊಂದಿರಬೇಕು.
ಬೆರಳಚ್ಚುಗಾರರು – ಎಸ್ಎಸ್ ಎಲ್ ಸಿ ತತ್ಸಮಾನ
ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.
ಗಣಕಯಂತ್ರದ ಕನಿಷ್ಠ 1 ವರ್ಷ ತರಬೇತಿ
ದಲಾಯತ್ – 7ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.

ವಯೋಮಿತಿ – ಸಾಮಾನ್ಯ ವರ್ಗದವರಿಗೆ 35 ವರ್ಷ, ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಗೆ 38 ವರ್ಷ, ಪರಿಶಿಷ್ಟ ಜಾರಿ, ಪಂಗಡ, ಪ್ರವರ್ಗ-1ರ ಅಭ್ಯರ್ಥಿಗಳಿಗೆ 40 ವರ್ಷ

ಅರ್ಜಿ ಶುಲ್ಕ : ಪರಿಶಿಷ್ಟ ಜಾತಿ, ಪಂಗಡ ಹಾಗೂ ಪ್ರವರ್ಗ-1ರ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ.
ಉಳಿದ ಸಾಮಾನ್ಯ ವರ್ಗದ ಮತ್ತು ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಕ್ರಾಸ್ ಮಾಡಿದ ರೂ.500ರ ಇಂಡಿಯನ್ ಪೋಸ್ಟಲ್ ಆರ್ಡರ್ ಅನ್ನು, ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ ಸಚಿವಾಲಯ, ಮೊದನೇ ಮಹಡಿ, ವಿಧಾನಸೌಧ, ಬೆಂಗಳೂರು –560001ಗೆ ಪಾವತಿಸಬೇಕು.

ಅರ್ಜಿಯನ್ನು ಅರ್ಹ ಅಭ್ಯರ್ಥಿಗಳು ಸೂಕ್ತ ನಮೂನೆಯ ಅರ್ಜಿ ನಮೂನೆಯಲ್ಲಿ ಸಂಪೂರ್ಣ ಭರ್ತಿ ಮಾಡಿ, ಜೊತೆಗೆ ಸಂಬಂಧಿಸಿದಂತ ದಾಖಲೆಗಳ ಸಹಿತ ದ್ವಿಪ್ರತಿಯಲ್ಲಿ ದಿನಾಂಕ 27-05-2022ರೊಳಗಾಗಿ ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ ಸಚಿವಾಲಯ, ಅಂಚೆ ಪೆಟ್ಟಿಗೆ ಸಂಖ್ಯೆ 5074, ಮೊದಲನೇ ಮಹಡಿ, ವಿಧಾನಸೌಧ ಬೆಂಗಳೂರು – 560001ಗೆ ಸಲ್ಲಿಸಬೇಕು.

Leave A Reply

Your email address will not be published.