ಎನರ್ಜಿ ಡ್ರಿಂಕ್ ಕುಡಿದ ಬಾಲಕ ಹೃದಯಾಘಾತದಿಂದ ಸಾವು!

ಇಂದಿನ ಆಹಾರ ಪದ್ದತಿ ಅದೆಷ್ಟು ಜನರ ಪ್ರಾಣವನ್ನೇ ಹಿಂಡುತಿದ್ದು,ರಾಸಾಯನಿಕವಾದ ಆಹಾರಗಳೇ ಇವುಗಳಿಗೆಲ್ಲ ಕಾರಣ.ಇದಕ್ಕೆಲ್ಲ ಸಾಕ್ಷಿ ಎಂಬಂತಿದೆ ಈ ಘಟನೆ. ಹೌದು,6 ವರ್ಷದ ಬಾಲಕನೊಬ್ಬ ಮಾನ್‌ಸ್ಟರ್ ಎನರ್ಜಿ ಡ್ರಿಂಕ್ಸ್‌ ಕುಡಿದು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಈಶಾನ್ಯ ಮೆಕ್ಸಿಕೋದ ಮ್ಯಾಟಮೊರೊಸ್‌ನಲ್ಲಿ ನಡೆದಿದೆ.

ಫ್ರಾನ್ಸಿಸ್ಕೊ ​​​​ಸರ್ವಾಂಟೆಸ್(6) ಮೃತ ಬಾಲಕ.

ಬಾಲಕ ಏಪ್ರಿಲ್ 16 ರಂದು ಫ್ರಾನ್ಸಿಸ್ಕೊ ​​​​ಸರ್ವಾಂಟೆಸ್ ತನ್ನ ಅಜ್ಜಿಯ ಮನೆಗೆ ಹೋಗುತ್ತಿದ್ದಾಗ ಈ ದುರಂತ ಸಂಭವಿಸಿದ್ದು,ಸರ್ವಾಂಟೆಸ್ ತನ್ನ ಬಾಯಾರಿಕೆಯನ್ನು ನೀಗಿಸಲು ಮಾನ್ಸ್ಟರ್ ಎನರ್ಜಿ ಡ್ರಿಂಕ್ ಅನ್ನು ಸೇವಿಸಿದ್ದಾನೆ. ನಂತರ ಬಾಲಕ ಅಸ್ವಸ್ಥಗೊಂಡು ಚಡಪಡಿಸಲಾರಂಭಿಸಿದ್ದಾನೆ. ಇದನ್ನು ಕಂಡ ಸಂಬಂಧಿಕರು ಕೂಡಲೇ ಅವನ್ನು ಸ್ಥಳೀಯ ಆಲ್ಫ್ರೆಡೋ ಪುಮಾರೆಜೊ ಆಸ್ಪತ್ರೆಗೆ ಕರೆದೊಯ್ದರು.

ಆಸ್ಪತ್ರೆಗೆ ದಾಖಲಾದ ನಂತರ, ಬಾಲಕನನ್ನು ಪರೀಕ್ಷಿಸಿದ ವೈದ್ಯರು, ಈತ ಹೃದಯಾಘಾತದಿಂದ ಬಳಲುತ್ತಿದ್ದಾನೆ ಮತ್ತು ಅವನ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ತಿಳಿಸಿದ್ದಾರೆ. ಇದಾದ ನಂತರವೂ ​​ಆರು ದಿನಗಳ ಕಾಲ ಕೋಮಾದಲ್ಲಿದ್ದು, ಕೊನೆಯುಸಿರೆಳೆದಿದ್ದಾನೆ.ವರದಿಯ ಪ್ರಕಾರ, ಸರ್ವಾಂಟೆಸ್ ಈಗಾಗಲೇ ಯಾವುದೇ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದಾನೆಯೇ ಅಥವಾ ಇಲ್ಲವೇ ಎಂಬುದು ತಿಳಿದಿಲ್ಲ. ಆದಾಗ್ಯೂ, NHS ಸೇರಿದಂತೆ ವಿವಿಧ ಆರೋಗ್ಯ ತಜ್ಞರು ಚಿಕ್ಕ ಮಕ್ಕಳಿಗೆ ಹೆಚ್ಚಿನ ಪ್ರಮಾಣದ ಕೆಫೀನ್ ಮತ್ತು ಸಕ್ಕರೆಯನ್ನು ಹೊಂದಿರುವ ಶಕ್ತಿ ಪಾನೀಯಗಳನ್ನು ಸೇವಿಸದಂತೆ ಸಲಹೆ ನೀಡಿದ್ದಾರೆ.

Leave A Reply

Your email address will not be published.