ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಸಾಮೂಹಿಕ ಉಚಿತ ವಿವಾಹ

ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಪ್ರತಿ ವರ್ಷದಂತೆ ನಡೆಯುವ ಸಾಮೂಹಿಕ ಉಚಿತ ವಿವಾಹ ಸಮಾರಂಭ ಇಂದು ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯಲಿದೆ.

ಈ ವರ್ಷದ ಸಾಮೂಹಿಕ ವಿವಾಹವು ಎ. 27ರಂದು ಸಂಜೆ 6.30ಕ್ಕೆ ಗೋಧೂಳಿ ಲಗ್ನದಲ್ಲಿ ನಡೆಯಲಿದ್ದು, 188 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಲಿದ್ದಾರೆ. ಚಲನಚಿತ್ರ ನಟ ಗಣೇಶ್‌, ಕಂದಾಯ ಸಚಿವ ಆರ್‌. ಅಶೋಕ್‌ ವಿಶೇಷ ಉಪಸ್ಥಿತರಿರುವರು. ಧರ್ಮಾಧಿಕಾರಿ ಡಾl ವೀರೇಂದ್ರ ಹೆಗ್ಗಡೆಯವರು ನೂತನ ದಂಪತಿಗಳಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ.

1972ರ ಮೊದಲ ವಿವಾಹ ಸಮಾರಂಭದಲ್ಲಿ 88 ವಧೂ ವರರು ದಾಂಪತ್ಯಜೀವನಕ್ಕೆ ಪಾದಾರ್ಪಣೆ ಮಾಡಿದ್ದರು. ಕಳೆದ ವರ್ಷದ ವರೆಗೆ 12,393 ಜೋಡಿ ವಿವಾಹವಾಗಿದ್ದು, ಈ ವರೆಗೆ ಒಂದೇ ಒಂದು ವಿಚ್ಛೇದನ ಆಗದಿರುವುದು ಈ ಸರಳ ವಿವಾಹದ ಹೆಗ್ಗಳಿಕೆ.

ಅಂತರ್‌ ಜಾತೀಯ ಮತ್ತು ಪ್ರೇಮ ವಿವಾಹಕ್ಕೂ ಹಿರಿಯರ ಒಪ್ಪಿಗೆಯೊಂದಿಗೆ ಅವಕಾಶ ನೀಡಲಾಗುತ್ತದೆ. ಈವರೆಗೆ ದಕ್ಷಿಣ ಭಾರತದ 4 ರಾಜ್ಯಗಳಿಂದ ಬಂದವರಿಗೆ ಇಲ್ಲಿ ವಿವಾಹವಾಗಿದೆ

Leave A Reply

Your email address will not be published.