ಇನ್ನು ಮುಂದೆ ಮದುವೆ ಇನ್ನಿತರ ಕಾರ್ಯಕ್ರಮಗಳಿಗೆ ಗನ್ ಕೊಂಡೊಯ್ಯುವುದು ನಿಷೇಧ !!

ಮದುವೆ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಹೊಸ ನಿಯಮವೊಂದು ಜಾರಿಗೆ ಬಂದಿದೆ. ಸೆಕ್ಷನ್ 144 ರ ಅಡಿಯಲ್ಲಿ ಮದುವೆ ಕಾರ್ಯಕ್ರಮಗಳು, ಪಾರ್ಟಿಗಳಿಗೆ ಗನ್ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ ಎಂದು ಮಧ್ಯಪ್ರದೇಶದಲ್ಲಿ ಘೋಷಣೆ ಮಾಡಲಾಗಿದೆ.

ಇತ್ತೀಚಿನ ಮದುವೆ ಮತ್ತು ಇತರ ಸಮಾರಂಭಗಳಲ್ಲಿ ಮಾರಣಾಂತಿಕ ಘಟನೆಗಳು ಹೆಚ್ಚಾಗುತ್ತಿದೆ. ಈ ದೃಷ್ಟಿಯಿಂದ, ಮೊರೆನಾದ ಸೆಕ್ಷನ್ 144 ರ ಅಡಿಯಲ್ಲಿ ಮದುವೆಗಳು, ಪಾರ್ಟಿಗಳು ಇತ್ಯಾದಿ ಸಮಾರಂಭಗಳಿಗೆ ಬಂದೂಕು ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ ಎಂದು ಘೋಷಣೆ ಮಾಡಲಾಗಿದೆ.

ಮೊರೆನಾ ಎಸ್‍ಪಿ ಅವರು ಈ ಕುರಿತು ಮಾತನಾಡಿದ್ದು, ಮೊರೆನಾ ಸೇರಿದಂತೆ ಮಧ್ಯಪ್ರದೇಶದ ಹಲವು ಜಿಲ್ಲೆಗಳಲ್ಲಿ ಇತ್ತೀಚೆಗೆ ಮಾರಣಾಂತಿಕ ಘಟನೆಗಳು ಹೆಚ್ಚಾಗುತ್ತಿದೆ. ಇದಕ್ಕೆ ಮುಖ್ಯಕಾರಣ ಸಮಾರಂಭಗಳಿಗೂ ಜನರು ಗನ್ ಮತ್ತು ಮಾರಣಾಂತಿಕ ಆಯುಧಗಳನ್ನು ತೆಗೆದುಕೊಂಡು ಹೋಗುತ್ತಿರುವುದು. ಈ ಹಿನ್ನೆಲೆಯಲ್ಲಿ ಇದನ್ನು ತಡೆಯಲು ಯಾವುದೇ ರೀತಿಯ ಸಮಾರಂಭಗಳಿಗೆ ಗನ್ ತೆಗೆದುಕೊಂಡು ಹೋಗದಂತೆ ನಿಷೇಧ ಏರಲಾಗಿದೆ ಎಂದು ಹೇಳಿದ್ದಾರೆ.
ಇನ್ನು ಮುಂದೆ ಈ ರೀತಿಯ ಪ್ರಕರಣಗಳು ನಡೆದ್ರೆ, ಗನ್ ಪರವಾನಗಿ ರದ್ದಾಗುತ್ತೆ ಎಂದು ಎಚ್ಚರಿಕೆ ಕೂಡ ನೀಡಿದ್ದಾರೆ ಎಂದು ತಿಳಿದುಬಂದಿದೆ.

Leave A Reply

Your email address will not be published.