ರಾಜ್ಯದಲ್ಲಿ ಮಾಸ್ಕ್ ಕಡ್ಡಾಯ: ಸಿಎಂ ನೇತೃತ್ವದ ಸಭೆಯಲ್ಲಿ ಮಹತ್ವದ ತೀರ್ಮಾನ

ಬೆಂಗಳೂರು: ಇನ್ಮುಂದೆ ರಾಜ್ಯದಲ್ಲಿ ಮಾಸ್ಕ್ ಕಡ್ಡಾಯ ಎಂದು ರಾಜ್ಯ ಸರ್ಕಾರದಿಂದ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ. ಈ ಕುರಿತು ಇಂದು ನಡೆದ ಸಿಎಂ ನೇತೃತ್ವದ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಾಗಿದೆ.

‘ಲಸಿಕೆ ಅಭಿಯಾನಕ್ಕೆ ಒತ್ತು ನೀಡಲಾಗುವುದು, ಇದಲ್ಲದೇ ಸೋಂಕು ಹೆಚ್ಚು ಇರುವ ದೇಶದಿಂದ ಬರುವವರ ಮೇಲೆ ನಿಗಾ ಇಡಲಾಗುವುದು, ಇನ್ನೂ ಕೊರೊನಾ ಸೋಂಕಿನ ಬಗ್ಗೆ ಶೀಘ್ರದಲ್ಲಿ ಮಾರ್ಗಸೂಚನೆ ಬಿಡುಗಡೆ ಮಾಡಲಾಗುವುದು’ ಎಂದು ಸಚಿವ ಸುಧಾಕರ್ ಸಭೆ ಬಳಿಕ ಹೇಳಿದ್ದಾರೆ.

ನಂತರ ಮಾತನಾಡುತ್ತಾ ಅವರು, ಬೆಂಗಳೂರಿನಲ್ಲಿ ಪಾಸಿಟಿವ್ ಸೋಂಕು ಹೆಚ್ಚಳವಾಗಿದ್ದು, ಎಲ್ಲ ರೀತಿಯಲ್ಲಿ ಈ ಬಗ್ಗೆ ಗಮನ ಹರಿಸಲಾಗುತ್ತಿದೆ, ಇದಲ್ಲದೇ ಸದ್ಯ ಮಾಸ್ಕ್ ಹಾಕದೇ ಇರುವವರಿಗೆ ದಂಡ ಹಾಕುವುದಿಲ್ಲ. ಮುಂಬರುವ ದಿನಲ್ಲಿ ಈ ಬಗ್ಗೆ ಚಿಂತನೆ ನಡೆಸಲಾಗುವುದು ಅಂತ ಅವರು ಹೇಳಿದರು. ಎಲ್ಲರೂ ಸಾಮಾಜಿಕ ಅಂತರ ಕಾಪಾಡಬೇಕು. ಸೋಂಕು ಹೆಚ್ಚಿರುವ ದೇಶಗಳಿಂದ ಬಂದವರ ಮೇಲೆ ನಿಗಾ ವಹಿಸಲಾಗುವುದು. ಏರ್‌ಪೋರ್ಟ್‌ನಲ್ಲಿ ಎಚ್ಚರ ವಹಿಸಿ, ನಾಲ್ಕನೇ ಸೋಂಕು ಬರುವವರೆಗೆ ಕಾಯಬೇಡಿ ಲಸಿಕೆ ಹಾಕಿಸಿಕೊಳ್ಳಿ ಹಾಗೂ ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಳ್ಳಿ. ಮಾಸ್ಕ್ ಬಗ್ಗೆ ಇನ್ನುಳಿದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡುತ್ತೇವೆ” ಎಂದು ಹೇಳಿದರು.

Leave A Reply

Your email address will not be published.