‘ಟೂ ಪೀಸ್’ ನಲ್ಲಿ ಹಿಂದೂ ದೇವರ ಚಿತ್ರ- ನೆಟ್ಟಿಗರಿಂದ ಹಿಗ್ಗಾಮುಗ್ಗಾ ತರಾಟೆ!!!
ಈ ವಸ್ತ್ರ ವಿನ್ಯಾಸಕರಿಗೆ ತಮ್ಮ ಕಲ್ಪನೆಗಳನ್ನು ಜಗಜ್ಜಾಹೀರು ಮಾಡಲು ಹಿಂದೂ ದೇವರುಗಳೇ ಸಿಗುತ್ತವೆಯೇನೋ ? ಹಿಂದೂ ದೇವರುಗಳ ಚಿತ್ರವನ್ನು ಕೆಲವೊಂದು ಕಂಪನಿಗಳು ಚಪ್ಪಲಿ ಮೇಲೆ, ಬಟ್ಟೆಗಳ ಮೇಲೆ ಮುದ್ರಿಸಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಪ್ರಮೋಷನ್ ಮಾಡುವುದು, ನಂತರ ಅದರ ವಿರುದ್ಧ ಧ್ವನಿ ಎತ್ತಿದಾಗ ಆ ಪೋಸ್ಟನ್ನು ತೆಗೆಯುವುದು ಇಂತಹ ಘಟನೆ ನಡೆಯುತ್ತಲೇ ಇದೆ. ಭಾರತೀಯರ ಭಾವನೆಗಳಿಗೆ ಧಕ್ಕೆ ತರುವಂತಹ ಇಂಥದ್ದೇ ಒಂದು ಘಟನೆ ಈಗ ಮತ್ತೆ ಆಗಿದೆ. ಸ್ವಿಮ್ ಸೂಟಲ್ಲಿ ದೇವರ ಫೋಟೋ ಹಾಕಿ ಹಿಂದೂ ಧರ್ಮದ ಅವಮಾನ ಮಾಡಲಾಗಿದೆ.
‘ಸಹಾರಾ ರೇ ಸ್ವಿಮ್’ ಹೆಸರಿನ ಬಟ್ಟೆ ಬ್ರಾಂಡ್ ಹೊಸ ವಿವಾದ ಹುಟ್ಟುಹಾಕಿದೆ. ಹೊಸದಾಗಿ ಬಿಡುಗಡೆ ಮಾಡಿರೋ ಈಜುಡುಗೆಗಳ ಮೇಲೆ ಹಿಂದೂ ದೇವತೆಗಳ ಚಿತ್ರಗಳನ್ನು ಮುದ್ರಿಸಿದೆ. ಸಹಾರಾ ರೇ ಒಡೆತನದಲ್ಲಿರುವ ಬ್ರಾಂಡ್ ಇದಾಗಿದೆ.
ಈ ಕಂಪನಿ ಈ ರೀತಿ ಮಾಡಿರೋದು ಇದೇ ಮೊದಲೇನಲ್ಲ. 2019ರಲ್ಲಿ ಕೂಡಾ ಫ್ಲೋರ್ ಮ್ಯಾಟ್ ಹಾಗೂ ಟಾಯ್ಲೆಟ್ ಕವರ್ಗಳ ಮೇಲೆ ಹಿಂದು ದೇವತೆಗಳ ಚಿತ್ರವನ್ನು ಮುದ್ರಿಸಿತ್ತು. ಅದನ್ನು ಅಮೇಜಾನ್ನಲ್ಲಿ ಮಾರಾಟಕ್ಕಿಡಲಾಗಿತ್ತು.
‘ಔರಾ ಕಲೆಕ್ಷನ್ 2022’ ಹೆಸರಿನಲ್ಲಿ ಈ ಸ್ವಿಮ್ ಸೂಟ್ಗಳನ್ನು ಬಿಡುಗಡೆ ಮಾಡಲಾಗಿದೆ. ಥಾಂಗ್ಸ್ ಮತ್ತು ಮೈಕ್ರೋ ಸ್ಟಿಂಗ್ ಟಾಪ್ಗಳನ್ನು ಒಳಗೊಂಡಿರುವ ಹೊಸ ಸಂಗ್ರಹ ಇದಾಗಿದ್ದು, ಇವುಗಳ ಮೇಲೆ ಹಿಂದೂ ದೇವತೆಗಳ ಚಿತ್ರಗಳನ್ನು ಮುದ್ರಿಸಲಾಗಿದೆ. ಈ ವಿವಾದಾತ್ಮಕ ಸ್ವಿಮ್ ಸೂಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಬಿಕಿನಿ ಹಾಗೂ ಟಾಪ್ ಮೇಲೆ ಹಿಂದೂ ದೇವತೆಗಳ ಚಿತ್ರಗಳನ್ನು ಮುದ್ರಿಸಿರೋದು ನೆಟ್ಟಿಗರನ್ನು ಕೆರಳಿಸಿದೆ. ದೇವರ ಚಿತ್ರ ಮುದ್ರಿಸಲೇಬೇಕೆಂಬ ಉದ್ದೇಶ ಕಂಪನಿಗಿದ್ದರೆ, ಯಾಕೆ ಜೀಸಸ್ ಚಿತ್ರವನ್ನು ಮುದ್ರಿಸಿಲ್ಲ ಅಂತಾ ಟ್ವಿಟ್ಟರ್ ಬಳಕೆದಾರನೊಬ್ಬ ಪ್ರಶ್ನಿಸಿದ್ದಾನೆ. ಹಿಂದುತ್ವ ಅನ್ನೋದು ಜೋಕ್ ಅಲ್ಲ, ಅಥವಾ ಕಂಪನಿಗಳಿಗೆ ಹಣ ಮಾಡಿಕೊಳ್ಳುವ ಮಾರ್ಗವೂ ಅಲ್ಲವೆಂದು ಮತ್ತೋರ್ವ ಆಕ್ರೋಶ ಹೊರಹಾಕಿದ್ದಾನೆ.