ಮಂಗಳೂರು : ತಣ್ಣೀರುಬಾವಿ ಬೀಚಿನಲ್ಲಿ ಅಪಾಯಕ್ಕೆ ಸಿಲುಕಿದ್ದ ವಿದ್ಯಾರ್ಥಿಗಳ ರಕ್ಷಣೆ !

Share the Article

ಮಂಗಳೂರು: ಮೂಡಬಿದಿರೆ ಕಾಲೇಜಿನ ಐವರು ವಿದ್ಯಾರ್ಥಿಗಳು ತಣ್ಣೀರುಬಾವಿ ಬೀಚ್ ನಲ್ಲಿ ಈಜಾಡಲೆಂದು ಸಮುದ್ರಕ್ಕೆ ಇಳಿದಿದ್ದು, ಅಲೆಯ ರಭಸಕ್ಕೆ ವಿದ್ಯಾರ್ಥಿಗಳು ಕೊಚ್ಚಿಹೋಗಿದ್ದ ಘಟನೆಯೊಂದು ನಡೆದಿದೆ‌. ತಕ್ಷಣವೇ ಅಲ್ಲೇ ಇದ್ದ ಸ್ಥಳೀಯರಿಂದ
ಐವರು ವಿದ್ಯಾರ್ಥಿಗಳನ್ನು ರಕ್ಷಿಸಲಾಗಿದೆ.

ಸ್ಥಳದಲ್ಲಿದ್ದ ರಾಷ್ಟ್ರೀಯ ಈಜುಪಟುಗಳಾದ ಸಂಕೇತ್ ಬೆಂಗ್ರೆ, ಶಿಲ್ಪಾ ಬೆಂಗ್ರೆ ಇಬ್ಬರನ್ನು ರಕ್ಷಿಸಿದ್ದಾರೆ. ಇನ್ನುಳಿದ ಮೂವರು ಕೂಗಾಡುವಾಗ ತೇಜಸ್ ಮತ್ತು ಇತರ ಸರ್ಫ್ ತರಬೇತುದಾರರು ಸ್ಥಳಕ್ಕೆ ಧಾವಿಸಿ ಅವರನ್ನು ಸರ್ಫ್ ಬೋರ್ಡ್ ಮೂಲಕ ದಡಕ್ಕೆ ಕರೆತಂದಿದ್ದಾರೆ. ಬಳಿಕ ಪ್ರಥಮ ಚಿಕಿತ್ಸೆ ನೀಡಿ ಕಳುಹಿಸಿಕೊಟ್ಟಿದ್ದಾರೆ.

Leave A Reply