ಫ್ಯಾಕ್ಟ್ ಚೆಕ್; ಭಾರತೀಯ ಅಂಚೆ ಇಲಾಖೆಯಿಂದ ಲಕ್ಕಿ ಡ್ರಾ ಲಿಂಕ್ ನಿಜವೇ ?

Share the Article

ಭಾರತೀಯ ಅಂಚೆ 170ನೇ ವಾರ್ಷಿಕೋತ್ಸವದ ಸವಿ ನೆನಪಿನಲ್ಲಿ ಲಕ್ಕಿ ಡ್ರಾ ಆಯೋಜಿಸಿದೆ. ಈಗಲೇ ಭಾಗವಹಿಸಿ ಎಂಬ ಮೆಸೆಜ್​ಗಳು ನಿಮ್ಮ ವಾಟ್ಸಾಪ್​ಗೂ ಬಂದಿರಬಹುದು. ಕುಟುಂಬದ, ಸ್ನೇಹಿತರ ಗ್ರೂಪ್​ಗಳಲ್ಲಿ  ಹರಿದಾಡುತ್ತಿರಬಹುದು. ಇದು ನಿಜವೇ? ಇಲ್ಲಿದೆ ಫ್ಯಾಕ್ಟ್ ಚೆಕ್.

ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಲಿಂಕ್ ಅನ್ನು ಹಂಚಿಕೊಳ್ಳುವ ಮೂಲಕ, ಲಕ್ಕಿ ಡ್ರಾವನ್ನು ಇಂಡಿಯಾ ಪೋಸ್ಟ್ ಪ್ರಾರಂಭಿಸಿದೆ ಎಂಬ ಮೆಸೆಜ್​ಗಳು ವಾಟ್ಸ್​ಆ್ಯಪ್​, ಫೇಸ್​ಬುಕ್​ ಮುಂತಾದ ಕಡೆ ವೈರಲ್ ಆಗುತ್ತಿದೆ. ಮೆಸೆಜ್​ ಕ್ಲಿಕ್ ಮಾಡಿದರೆ ಇದರಲ್ಲಿ ಕೆಲವು ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಬಹುಮಾನವನ್ನು ಸುಲಭವಾಗಿ ಗೆಲ್ಲಬಹುದು ಎಂದು ಆಸೆ ತೋರಿಸಿ ವಂಚನೆ ಎಸಗಲಾಗುತ್ತಿದೆ.

ಭಾರತೀಯ ಅಂಚೆ ಇಲಾಖೆಯು ತನ್ನ ಪರವಾಗಿ ಯಾವುದೇ ರೀತಿಯ ಲಕ್ಕಿ ಡ್ರಾ, ಬೋನಸ್ ಅಥವಾ ಬಹುಮಾನ ಆಧಾರಿತ ಸಮೀಕ್ಷೆಯನ್ನು ಪ್ರಾರಂಭಿಸಲಾಗಿಲ್ಲ ಎಂದು ಇಂಡಿಯಾ ಪೋಸ್ಟ್ ತಿಳಿಸಿದೆ. ಅಂತಹ ಲಿಂಕ್‌ಗಳನ್ನು ಕ್ಲಿಕ್ ಮಾಡಬಾರದು ಅಥವಾ ತನ್ನ ಬಗ್ಗೆ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳಬಾರದು ಎಂದು ಭಾರತೀಯ ಅಂಚೆ ಇಲಾಖೆ ಎಚ್ಚರಿಕೆ ನೀಡಿದೆ.

Leave A Reply