ಕೆಜಿಎಫ್ ಚಾಪ್ಟರ್ 2 ಸಿನಿಮಾ ಒಟಿಟಿಯಲ್ಲಿ!

ಏಪ್ರಿಲ್ 14 ರಂದು ಸೂಪರ್ ಹಿಟ್, ಬ್ಲಾಕ್ ಬ್ಲಸ್ಟರ್ ಸಿನಿಮಾ ‘ಕೆಜಿಎಫ್ ಚಾಪ್ಟರ್ 2’ ಸಿನಿಮಾ ಸಿನಿಪ್ರಿಯರ ಮನಸ್ಸನ್ನು ಗೆದ್ದಿರುವುದು ಮಾತ್ರವಲ್ಲ. ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ನತ್ತ ದಾಪುಗಾಲು ಹಾಕುತ್ತಿದೆ.

‘ಕೆಜಿಎಫ್: ಚಾಪ್ಟರ್ 2’ ಹೊಸ ದಾಖಲೆ ನಿರ್ಮಿಸಿದೆ. ಥಿಯೇಟರ್‌ಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿರುವ ‘ಕೆಜಿಎಫ್: ಚಾಪ್ಟರ್ 2’ ಚಿತ್ರ ಇದೀಗ ಒಟಿಟಿ ವೇದಿಕೆಗೆ ಕಾಲಿಡಲು ಡೇಟ್ ಫಿಕ್ಸ್ ಆಗಿದೆ.

‘ಕೆಜಿಎಫ್: ಚಾಪ್ಟರ್ 2’ ಚಿತ್ರದ ಹಕ್ಕುಗಳನ್ನು ಅಮೇಜಾನ್ ಪ್ರೈಮ್ ಖರೀದಿಸಿದೆ. ವರದಿಗಳ ಪ್ರಕಾರ, ಮೇ 27 ರಿಂದ ಅಮೇಜಾನ್ ಪ್ರೈಮ್‌ನಲ್ಲಿ ‘ಕೆಜಿಎಫ್: ಚಾಪ್ಟರ್ 2’ ಚಿತ್ರವನ್ನು ನೋಡಬಹುದಾಗಿದೆ. ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳಿದ ‘ಕೆಜಿಎಫ್: ಚಾಪ್ಟರ್ 2’ ಚಿತ್ರದಲ್ಲಿ ಯಶ್ ಅವರ ಅದ್ಭುತ ಅಭಿನಯದ ಜೊತೆ ಜೊತೆಗೆ ರವೀನಾ ಟಂಡನ್, ಸಂಜಯ್ ದತ್, ಪ್ರಕಾಶ್ ರೈ ಮುಂತಾದವರು ಅಭಿನಯಿಸಿದ್ದಾರೆ.

Leave A Reply

Your email address will not be published.