ಗ್ರಾಹಕರೇ ಗಮನಿಸಿ : ಬ್ಯಾಂಕ್ ವಹಿವಾಟುಗಳಲ್ಲಿ ಅಸಮಾಧಾನ ಇದೆಯೇ ? ಕಂಪ್ಲೇಂಟ್ ನೀಡಬೇಕೇ? ಯಾರಿಗೆ, ಹೇಗೆ ಎಂದು ತಿಳಿದಿಲ್ವಾ ? ಬನ್ನಿ ತಿಳಿಯೋಣ!!!
ಬ್ಯಾಂಕ್ ಅಥವಾ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆ ( ಎನ್ ಬಿಎಫ್ ಸಿ) ವಿರುದ್ಧ ಜನರಿಗೆ ದೂರುಗಳಿರುತ್ತವೆ. ಆದರೆ ದೂರು ನೀಡೋದು ಹೇಗೆ ಎಂದು ಹೊಳೆಯುತ್ತಿಲ್ಲ ಅಲ್ವಾ? ಇದಕ್ಕಾಗಿಯೇ ಭಾರತೀಯ ರಿಸರ್ವ್ ಬ್ಯಾಂಕ್ ದೂರು ನಿರ್ವಹಣಾ ವ್ಯವಸ್ಥೆಯನ್ನು (ಸಿಎಂಎಸ್) ಪ್ರಾರಂಭಿಸಿದೆ.
ಇದರಲ್ಲಿ ಆರ್ ಬಿಐಯಿಂದ ನಿಯಂತ್ರಿಸಲ್ಪಡೋ ಎಲ್ಲ ಹಣಕಾಸು ಸೇವಾ ಪೂರೈಕೆದಾರರ ವಿರುದ್ಧ ಗ್ರಾಹಕರು ದೂರನ್ನು ದಾಖಲಿಸಬಹುದು.
ಈ ಬಗ್ಗೆ ಜನರಿಗೆ ಮಾಹಿತಿ ನೀಡಿ ಅರಿವು ಮೂಡಿಸಲು ಆರ್ ಬಿಐ ಮೆಸೇಜ್ ಗಳನ್ನು ಕಳುಹಿಸುತ್ತಿದೆ. ‘ಯಾವುದೇ ಬ್ಯಾಂಕ್, ಎನ್ ಬಿಎಫ್ ಸಿ ಅಥವಾ ಪಾವತಿ ವ್ಯವಸ್ಥೆ ಸಂಸ್ಥೆ ವಿರುದ್ಧ ಆರ್ ಬಿ- ಇಂಟಿಗ್ರೇಟೆಡ್ ಒಂಬುಡ್ಸ್ ಮನ್ ಯೋಜನೆ ಅಡಿಯಲ್ಲಿ https://cms.rbi.org.in ನಲ್ಲಿ ದೂರು ಸಲ್ಲಿಸಿ. ಹೆಚ್ಚಿನ ಮಾಹಿತಿಗೆ 14440 ಸಂಖ್ಯೆಗೆ ಕರೆ ಮಾಡಿ.’
ದೂರನ್ನು ದಾಖಲಿಸೋದು ಹೇಗೆ…ಇದರ ಸಂಪೂರ್ಣ ವಿವರ ಈ ಕೆಳಗೆ ನೀಡಲಾಗಿದೆ.
1: https://cms.rbi.org.in ವೆಬ್ ಸೈಟ್ ಗೆ ಭೇಟಿ ನೀಡಿ. ‘ಫೈಲ್ ಎ ಕಂಪ್ಲೇಂಟ್’ ಲಿಂಕ್ ಮೇಲೆ ಕ್ಲಿಕ್ ಮಾಡಿ.
2: ಕ್ಯಾಪ್ಚ ಕೋಡ್ ನಮೂದಿಸಿ.
3: ಕಂಪ್ಲೇಂಟ್ ಕೊಡುವವರ ಹೆಸರು ಹಾಗೂ ಮೊಬೈಲ್ ಸಂಖ್ಯೆ ನಮೂದಿಸಿ. ನಂತರ ‘ಗೆಟ್ ಒಟಿಪಿ’ಮೇಲೆ ಕ್ಲಿಕ್ ಮಾಡಿ.
4: ‘ಒಟಿಪಿ’ ಬರೆಯಿರಿ.
5: ಇ-ಮೇಲ್ ಸೇರಿದಂತೆ ಇತರ ಹೆಚ್ಚುವರಿ ಮಾಹಿತಿಗಳನ್ನು ಭರ್ತಿ ಮಾಡಿ. ದೂರಿನ ವರ್ಗವನ್ನು ಡ್ರಾಪ್ ಡೌನ್ ನಿಂದ ಆಯ್ಕೆ ಮಾಡಿ. ನೀವು ದೂರು ನೀಡಲು ಬಯಸೋ ಬ್ಯಾಂಕ್ ಅಥವಾ ಎನ್ ಬಿಎಫ್ ಸಿ ಮಾಹಿತಿಗಳನ್ನು ಕೂಡ ನಮೂದಿಸಿ.
6: ಪ್ರಶ್ನೆಯ ಆಧಾರದಲ್ಲಿ ರೇಡಿಯೋ ಬಟನ್ಸ್ ಆಯ್ಕೆ
ಮಾಡಿ ಹಾಗೂ ‘ನೆಕ್ಸ್ಟ್’ ಆಯ್ಕೆ ಮೇಲೆ ಕ್ಲಿಕ್ ಮಾಡಿ.
7: ಸಂಬಂಧಪಟ್ಟ ಸಂಸ್ಥೆಗೆ ನೀವು ಈಗಾಗಲೇ ದೂರು ದಾಖಲಿಸಿದ್ದೀರಾ ಎಂಬ ಪ್ರಶ್ನೆಗೆ Yes ಅಥವಾ No ಆಯ್ಕೆಯನ್ನು ಆರಿಸಿ.
8: ನೀವು ದೂರು ನೀಡುತ್ತಿರುವ ದಿನಾಂಕ ನಮೂದಿಸಿ ಹಾಗೂ ನಿಮ್ಮ ಮೊಬೈಲ್ ಅಥವಾ ಸಿಸ್ಟಂ ನಲ್ಲಿರುವ ಫೈಲ್ ಅಪ್ಲೋಡ್ ಮಾಡಿ.
9: ವಹಿವಾಟಿನ ಮೊತ್ತ ಹಾಗೂ ದಿನಾಂಕದ ಜೊತೆಗೆ ಸಮಸ್ಯೆಯ ಮಾಹಿತಿಗಳೊಂದಿಗೆ ಯಾವುದಕ್ಕೆ ಸಂಬಂಧಿಸಿ ಪ್ರಶ್ನೆ ಕೇಳುತ್ತೀರೋ ಅದಕ್ಕೆ ಸಂಬಂಧಿಸಿದ ಬಟನ್ ಆಯ್ಕೆ ಮಾಡಿ.
10: ನಿಮ್ಮ ವಹಿವಾಟನ್ನು ಬೆಂಬಲಿಸುವ ಯಾವುದೇ ದಾಖಲೆಗಳಿದ್ದರೆ ಅಪ್ಲೋಡ್ ಮಾಡಿ. ‘ಅತೊರೈಸೇಷನ್’ ಮೇಲೆ ಕ್ಲಿಕ್ ಮಾಡಿ ಹಾಗೂ ‘ಡಿಕ್ಲರೇಷನ್’ ಟಿಕ್ ಮಾಡಿ. 11: Review and Submit ಮೇಲೆ ಕ್ಲಿಕ್ ಮಾಡಿ. ಈಗ ನಿಮಗೆ ದೂರಿನ ಪಿಡಿಎಫ್ ಡೌನ್ ಲೋಡ್ ಮಾಡುವ ಆಯ್ಕೆ ಸಿಗುತ್ತದೆ.
ಸುರಕ್ಷಿತ ಹಣಕಾಸಿನ ವಹಿವಾಟುಗಳ ಬಗ್ಗೆ ಆರ್ ಬಿಐ ಗ್ರಾಹಕರಿಗೆ ಅರಿವು ಮೂಡಿಸುವ ಕೆಲಸವನ್ನು ಆಗಾಗ ಮಾಡುತ್ತಲೇ ಇರುತ್ತದೆ. ಇದಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಆರ್ ಬಿಐ ‘BE(A)WARE ಎಂಬ ಕೈಪಿಡಿ ಬಿಡುಗಡೆ ಮಾಡಿದೆ. ಇದರಲ್ಲಿ ವಿವಿಧ ಹಣಕಾಸಿನ ವಹಿವಾಟುಗಳನ್ನು ನಡೆಸುವಾಗ ಅನುಸರಿಸಬೇಕಾದ ವಿಧಾನಗಳು ಹಾಗೂ ಮುಂಜಾಗ್ರತಾ ಕ್ರಮಗಳ ಮಾಹಿತಿಯಿದೆ.