ರಾಜಕೀಯದಲ್ಲಿ ಸೋಲಿಲ್ಲದ ಸರದಾರರು ಸಾಕು,ಯುವಕರು ರಾಜಕೀಯಕ್ಕೆ ಬರಬೇಕು-ಭಾಸ್ಕರ ರಾವ್

ಬೆಂಗಳೂರು : ಸೋಲಿಲ್ಲದ ಸರದಾರರು ಅನ್ನಿಸಿಕೊಂಡವರು ಇನ್ನು ಸಾಕು,ಯುವಕರು, ಶಿಕ್ಷಿತರು ರಾಜಕೀಯಕ್ಕೆ ಬರಬೇಕು
ಎಂದು ಮಾಜಿ ಪೊಲೀಸ್ ಆಯುಕ್ತ, ಆಪ್ ಮುಖಂಡ ಭಾಸ್ಕರ್ ರಾವ್ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರಿನ ನ್ಯಾಶನಲ್ ಕಾಲೇಜು ಮೈದಾನದಲ್ಲಿ ನಡೆದ ಆಮ್ ಆದ್ಮಿ‌ ಪಕ್ಷದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಸೋಲಿಲ್ಲದ ಸರದಾರರು ಹಲವು ಭಾರಿ ಗೆದ್ದು ಬರುತ್ತಾರೆ. ಗೆದ್ದವರೆಲ್ಲರೂ ಭ್ರಷ್ಟಾಚಾರದಲ್ಲೇ ಮುಳುಗಿದ್ದಾರೆ.ಡಾಲರ್ಸ್ ಕಾಲೋನಿಯಲ್ಲಿ ದೊಡ್ಡ ದೊಡ್ಡ ಬಂಗಲೆಗಳನ್ನ ಕಟ್ಟಿಸಿಕೊಂಡಿದ್ದಾರೆ ಎಂದರು.


Ad Widget

Ad Widget

Ad Widget

ಉತ್ತರ ಕರ್ನಾಟಕ ಭಾಗದ ಸೋಲಿಲ್ಲದ ಸರದಾರರ ಕ್ಷೇತ್ರಗಳನ್ನ ನೋಡಿ,ಅಲ್ಲಿ ಜನರ ಸಮಸ್ಯೆ ಕೇಳೋರೆ ಇಲ್ಲದಂತಾಗಿದೆ.ಯಾವುದೇ ಸರ್ಕಾರದಲ್ಲಿ ದುಡ್ಡಿನ‌ ಕೊರತೆ ಇಲ್ಲ.ಭ್ರಷ್ಟಾಚಾರ, ಸೋರಿಕೆಯಿಂದ ಹಣದ ಸಮಸ್ಯೆ ಸೃಷ್ಟಿಯಾಗಿದೆ.ಕಾಂಗ್ರೆಸ್, ಬಿಜೆಪಿ ಪೊಳ್ಳು ಭರವಸೆ ನೀಡುತ್ತಿವೆ.ರೈತರ ಬಜೆಟ್ ಮಂಡಿಸುವುದಾಗಿ ಹೇಳಿದ್ದ ಬಿಜೆಪಿ ಏನೂ ಮಾಡಲೇ‌ ಇಲ್ಲ.ಭಯವೇ ನಮಗೆ ದೊಡ್ಡ ಶತ್ರು. ಭಯ ಬಿಟ್ಟು ರಾಜಕೀಯಕ್ಕೆ ಯುವಕರು ಬರಬೇಕಿದೆ ಎಂದು ಕರೆ‌ ನೀಡಿದರು.

ಆಮ್ ಆದ್ಮಿ ಪಕ್ಷಕ್ಕೆ ಹಣ, ತೋಳು, ಜಾತಿ, ಧರ್ಮದ ಬಲವಿಲ್ಲ.ನಮ್ಮ ಪಕ್ಷಕ್ಕೆ ಜನಸಾಮಾನ್ಯರ ಬಲವಿದೆ.ಎಲ್ಲಾ ವರ್ಗದವರು ನೇರವಾಗಿ ರಾಜಕಾರಣದಲ್ಲಿ ಭಾಗವಹಿಸಬೇಕು.ಇಷ್ಟುದಿನ ಕೆಲವರು ಗೆದ್ದು ಬಂದು ಭ್ರಷ್ಟಾಚಾರಕ್ಕೆ ಇಳಿದಿದ್ದಾರೆ.ಸರ್ದಾರ್ ಗಳಾಗಿ ಮೆರೆಯುತ್ತಿದ್ದಾರೆ. 40 ಪರ್ಸೆಂಟ್ ಭ್ರಷ್ಟಾಚಾರ ಮಾಡಿ ಮೊಮ್ಮಕ್ಕಳಿಗೆ ಸಂಪತ್ತು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

Leave a Reply

error: Content is protected !!
Scroll to Top
%d bloggers like this: