ಲವ್ ಬರ್ಡ್ಸ್ ಜಾಲಿ ರೈಡ್; ಪ್ರೇಯಸಿಯನ್ನು ಟ್ಯಾಂಕ್ ಮೇಲೆ ಕೂರಿಸಿ, ಕಿಸ್ಸಿಂಗೋ ಕಿಸ್ಸಿಂಗ್…!!!

ಪ್ರೀತಿ ಮಾಡಬಾರದು ಮಾಡಿದರೆ ಜಗಕೆ ಹೆದರಬಾರದು.. ಅಂತ ಒಂದು ಸಿನಿಮಾ ಪದ್ಯ ಇದೆ. ಈ ಮಾತನ್ನು ಇಲ್ಲೊಂದು ಜೋಡಿ ಚಾಚೂ ತಪ್ಪದೇ ಪಾಲಿಸುತ್ತಿದೆ. ಪ್ರೀತಿ ಅಮಲು ತಲೆಗೇರಿದಾಗ ಬಹುಶಃ ಈಗ ಮಾಡುವುದು ಸಾಮಾನ್ಯ ಎಂದು ನಾವು ಊಹಿಸಬಹುದು. ಅರೇ ಇದೇನಿದು ? ಅಮಲು ನಶೆ ಅಂತಾ ಏನೇನೋ ಹೇಳ್ತಿದ್ದೀವಿ ಅಂತಾ ನೀವು ಯೋಚನೆ ಮಾಡ್ತಾ ಇದ್ದಿರಬಹುದು. ಬನ್ನಿ ಏನು ವಿಷಯ ಅಂತ ತಿಳಿಸ್ತೀವಿ.

ಪ್ರೀತಿಯಲ್ಲಿ ಬಿದ್ದ ಜೋಡಿ ಜಾಲಿರೈಡ್ ಗೆ ಹೋದ ಸಂಗತಿ ಇದು. ಅಂತಿಂಥ ಜಾಲಿ ರೈಡ್ ಅಲ್ಲ, ಸೆಕ್ಸೀ ಜಾಲಿ ರೈಡ್.
ಚಾಮರಾಜನಗರದ ಗುಂಡ್ಲುಪೇಟೆ ರಸ್ತೆಯಲ್ಲಿ ಪ್ರೇಮಿಗಳಿಬ್ಬರು ಜಾಲಿ ರೈಡ್ ವಿಷಯ ಇದು. ಆದರೆ, ವಿಷಯ ಇಷ್ಟೇ ಅಲ್ಲ. ಪ್ರಿಯಕರ ತನ್ನ ಪ್ರೇಯಸಿಯನ್ನು ಬೈಕ್‌ನ ಪೆಟ್ರೋಲ್ ಟ್ಯಾಂಕ್ ಮೇಲೆ ಎದುರಾಗಿ ಕೂರಿಸಿಕೊಂಡು ರಸ್ತೆ ಮೇಲೆ ಗಾಡಿ ಓಡಿಸಿದ್ದಾನೆ. ಯುವತಿಯನ್ನು ಟ್ಯಾಂಕ್ ಮೇಲೆ ಕೂರಿಸಿಕೊಂಡು ಬೈಕ್ ರೈಡಿಂಗ್ ಗೆ ಗುಂಡ್ಲುಪೇಟೆ ಈ ಜೋಡಿ ಜಗತ್ತನ್ನೇ ಮರೆತು ಪ್ರೇಮಲೋಕದಲ್ಲಿ ಮುಳುಗಿದ್ದರು. ರಸ್ತೆ ಮೇಲೆ ಬಸ್, ಲಾರಿಯಂತಹ ಯಾವುದೇ ವಾಹನ ಬಂದರೂ ಲೆಕ್ಕಿಸದೇ ಇಬ್ಬರೂ ಜಾಲಿಯಾಗಿ ರೈಡ್ ಮಾಡಿದ್ದಾರೆ. ಪೆಟ್ರೋಲ್ ಟ್ಯಾಂಕ್ ಮೇಲೆ ಕುಳಿತ ಯುವತಿ ತನ್ನ ಪ್ರಿಯಕರನನ್ನು ತಬ್ಬಿಕೊಂಡು ಚುಂಬಿಸುತ್ತಿರುವ ದೃಶ್ಯವಂತೂ ನೀವು ನೋಡಿ ಸವಿಯಬೇಕು.


Ad Widget

Ad Widget

Ad Widget

ಈ ಪ್ರೇಮಿಗಳ ಪ್ರಣಯದಾಟವನ್ನು ದಾರಿಹೋಕರೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಬೈಕ್ ಚಾಮರಾಜನಗರದ್ದೇ ನೋಂದಣಿ ಸಂಖ್ಯೆ ಹೊಂದಿದ್ದು, ಇದು ಆ ಊರಿನ ಪ್ರೇಮಿಗಳೇ ಎಂದು ಹೇಳಲಾಗಿದೆ.

Leave a Reply

error: Content is protected !!
Scroll to Top
%d bloggers like this: