ಮದುವೆಗೆಂದು ಹೋದವರು ಸೇರಿದ್ದು ಮಸಣ! ಅಪಘಾತದ ತೀವ್ರತೆಗೆ 6 ಮಂದಿ ಸ್ಥಳದಲ್ಲೇ ದುರ್ಮರಣ!!!

ಮದುವೆಯ ಶುಭ ಸಮಾರಂಭ ಮುಗಿಸಿ ಸಂತಸದಿಂದ ಹಿಂತಿರುಗುತ್ತಿರುವ ಜನರ ಮೇಲೆ ಜವರಾಯನ ದೃಷ್ಟಿ ಬಿದ್ದಿದೆ. ಮದುವೆ ಕಾರ್ಯಕ್ರಮದಿಂದ ಹಿಂತಿರುಗುತ್ತಿದ್ದ ಬೊಲೆರೊ ವಾಹನ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ 6 ಮಂದಿ ಸ್ಥಳದಲ್ಲೇ ಮೃತಪಟ್ಟ ಭೀಕರ ಘಟನೆ ಮೈಸೂರಿನಲ್ಲಿ ಸಂಭವಿಸಿದೆ.

ಚಾಲಕನ ನಿಯಂತ್ರಣ ತಪ್ಪಿದ ಬೊಲೆರೊ ವಾಹನ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ 6 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕಲ್‌ ಬೆಟ್ಟ ಬಳಿ ಬುಧವಾರ ಸಂಜೆ ಈ ದುರ್ಘಟನೆ ಸಂಭವಿಸಿದೆ


Ad Widget

Ad Widget

Ad Widget

ದುರ್ಘಟನೆಯಲ್ಲಿ ಪಾಲಿಬೆಟ್ಟ ಗ್ರಾಮದ ನಿವಾಸಿಗಳಾದ ಅನಿಲ್‌, ಸಂತೋಷ್‌, ಬಾಬು ದಯಾನಂದ್‌ ಮೃತಪಟ್ಟಿದ್ದು, ಗಾಯಗೊಂಡಿರುವ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ

Leave a Reply

error: Content is protected !!
Scroll to Top
%d bloggers like this: