ಮಿತ್ರನ ಶವ ತರಲು‌ ಹೋದ ಗೆಳೆಯರು ಹೆಣವಾಗಿ ಬಂದರು!

ಸ್ನೇಹ ಶೋಕದಿಂದ ಮಿತ್ರನ ಹೆಣತರಲು ಹೋದ ಸ್ನೇಹಿತರು ಮಿತ್ರನ ಜೊತೆ ಕಳೆಬರಹವಾದ ನೋವಿನ ಘಟನೆ ನಡೆದಿದೆ. ಸ್ನೇಹಿತನ ಶವ ತೆಗೆದುಕೊಂಡು ಊರಿಗೆ ಮರಳುವಾಗ ಅಪಘಾತ ಸಂಭವಿಸಿ ಗೆಳೆಯರೂ ಸಾವನ್ನಪ್ಪಿದ್ದಾರೆ !

ಬೆಂಗಳೂರಿನಲ್ಲಿ ಮೃತಪಟ್ಟಿದ್ದ ಗೆಳೆಯನ ಶವವನ್ನು ಊರಿಗೆ ಕೊಂಡೊಯ್ಯುತ್ತಿದ್ದ ಮೂವರು ಮಿತ್ರರು ಮಾರ್ಗಮಧ್ಯೆ ಭೀಕರ ಅಪಘಾತಕ್ಕೆ ಒಳಗಾಗಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.


Ad Widget

Ad Widget

Ad Widget

ಇವರ ಸ್ನೇಹಿತ ಬಸಯ್ಯ ಎಂಬಾತ ನಿನ್ನೆ ಬೆಂಗಳೂರಿನ ಹೃದಯಾಘಾತಕ್ಕೀಡಾಗಿ ಮೃತಪಟ್ಟಿದ್ದ. ಆತನ ಶವವವನ್ನು ತೆಗೆದುಕೊಂಡು ನಿನ್ನೆ ರಾತ್ರಿ ಬೆಂಗಳೂರಿನಿಂದ ಹೊರಟು ಯಾದಗಿರಿ ಜಿಲ್ಲೆಯ ವಡಗೇರಾ ಎಂಬಲ್ಲಿಗೆ ಹೊರಟಿದ್ದರು. ಬೆಂಗಳೂರಿನಿಂದ ಮೂರು ಕಾರು ಹಾಗೂ ಒಂದು ಆಯಂಬುಲೆನ್ಸ್​ನಲ್ಲಿ ಹೊರಟಿದ್ದು, ಆ ಪೈಕಿ ಒಂದು ಕಾರು ಪಂಕ್ಚರ್​ ಆಗಿ ಹಿಂದೆ ಉಳಿದಿತ್ತು. ನಂತರ ಇವರು ಹೊರಟಿದ್ದು ಮಾರ್ಗಮಧ್ಯೆ ಎದುರಿನಿಂದ ಬರುತ್ತಿದ್ದ ಇನ್ನೊಂದು ಕಾರು ಮತ್ತು ಇವರಿದ್ದ ಕಾರು ಮುಖಾಮುಖಿ ಡಿಕ್ಕಿ ಆಗಿದ್ದವು.

ಡಿಕ್ಕಿಯ ರಭಸಕ್ಕೆ ಕಾರು ಜಖಂಗೊಂಡಿದ್ದು ರಸ್ತೆಯಾಚೆಗೆ ಪಲ್ಟಿಯಾಗಿತ್ತು. ಗಾಯಾಳುಗಳನ್ನು ಬಾಗಲಕೋಟೆ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಗೊಲ್ಲಪಲ್ಲಿ ಬಳಿ ಈ ಅಪಘಾತ ಸಂಭವಿಸಿದ್ದು, ಅಂಬರೀಷ್ (30), ಗೋವಿಂದ್ (35) ದೇವರಾಜ್ (34) ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಕಾರು ಚಾಲಕ ಉಸ್ಮಾನ್ ಪಾಷಾ ಹಾಗೂ ಯಲ್ಲಾಲಿಂಗ ಎಂಬವರಿಗೆ ಗಂಭೀರ ಗಾಯಗಳಾಗಿವೆ. 

Leave a Reply

error: Content is protected !!
Scroll to Top
%d bloggers like this: