ಖ್ಯಾತ ನಿರ್ದೇಶಕ, ನಿರ್ಮಾಪಕ ಇನ್ನಿಲ್ಲ!

ತೆಲುಗು, ತಮಿಳು, ಕನ್ನಡ ಅಲ್ಲದೇ ಹಿಂದಿಯಲ್ಲಿ ಹಲವಾರು ಸೂಪರ್‌ ಹಿಟ್‌ ಚಿತ್ರಗಳನ್ನು ನೀಡಿದ್ದ ಹಿರಿಯ ನಿರ್ದೇಶಕ ಹಾಗೂ ನಿರ್ಮಾಪಕ ತಾತನೇನಿ ರಾಮರಾವ್‌ ನಿಧನರಾಗಿದ್ದಾರೆ.

ರಜನಿಕಾಂತ್‌, ಕಮಲ್‌ ಹಾಸನ್‌, ಅಮಿತಾಬ್‌ ಬಚ್ಚನ್‌, ಶ್ರೀದೇವಿ, ಚಿರಂಜೀವಿ, ಎನ್‌ ಟಿಆರ್‌ ಸೇರಿದಂತೆ ಹಲವು ಖ್ಯಾತ ನಟರಿಗೆ ನಿರ್ದೇಶನ ಮಾಡಿದ್ದ ಸ್ಟಾರ್‌ ನಿರ್ದೇಶಕರೇಂದೇ ಗುರುತಿಸಿಕೊಂಡಿದ್ದ ಟಿ. ರಾಮರಾವ್‌(84) ಚೆನ್ನೈನಲ್ಲಿ ಬುಧವಾರ ಅವರು ವಯೋ ಸಹಜ ಸಮಸ್ಯೆಗಳಿಂದ ಅಸುನೀಗಿದ್ದಾರೆ.


Ad Widget

Ad Widget

Ad Widget

ರಾವ್ ಅವರು 1966 ಮತ್ತು 2000 ರ ನಡುವೆ 70 ಹಿಂದಿ ಮತ್ತು ತೆಲುಗು ಚಲನಚಿತ್ರಗಳನ್ನು ನಿರ್ದೇಶಿಸಿ ದಿಗ್ಗಜ ನಟರೊಂದಿಗೆ ಕೆಲಸ ಮಾಡಿದ್ದರು. 1983 ರಲ್ಲಿ ‘ಅಂಧಾ ಕಾನೂನ್’ ಎಂಬ ಚಿತ್ರದ ಮೂಲಕ ತಮಿಳು ಸೂಪರ್ ಸ್ಟಾರ್ ರಜನಿ ಕಾಂತ್ ಅವರನ್ನು ಬಾಲಿವುಡ್ ಪ್ರವೇಶ ಮಾಡಿಸಿದ್ದರು. ರಾಮ ರಾವ್‌ ಅವರ ಅಂತ್ಯಕ್ರಿಯೆ  ಚೆನ್ನೈನಲ್ಲಿ ನಡೆದಿದೆ. ಅನೇಕ ಸಿನಿಗಣ್ಯರು ಕಂಬನಿ ಮಿಡಿದಿದ್ದಾರೆ.

Leave a Reply

error: Content is protected !!
Scroll to Top
%d bloggers like this: