ತೆಳ್ಳನೆಯ ಹುಡುಗಿಗೆ ದಪ್ಪನೆಯ ಹುಡುಗನ ಮೇಲೆ ಲವ್|ಮದುವೆ ಆಗಿ ಒಂದು ಮಗುವಿದ್ದರೂ ಈ ಜೋಡಿನ ಒಪ್ಪಿಕೊಳ್ಳೋದೇ ಇಲ್ವಂತೆ ನೆಟ್ಟಿಗರು!!

ಜಗತ್ತಿನಲ್ಲಿ ಎಷ್ಟು ಜನ ಸಂಖ್ಯೆ ಇದೆಯೋ ಅಷ್ಟೂ ಜನರ ಟೇಸ್ಟ್ ಬೇರೆಯೇ ಇದೆ. ಕೆಲವೊಬ್ಬರಿಗೆ ಕೆಲವೊಂದು ವಿಷಯ ಇಷ್ಟವಾದರೆ ಇನ್ನೂ ಕೆಲವರಿಗೆ ಅದು ಕಷ್ಟ ಎಂಬಂತೆ ಇರುತ್ತೆ. ಅದೇ ರೀತಿ ಇಲ್ಲೊಂದು ಕಡೆ ಇಷ್ಟ ಎಂಬಂತೆ ತೆಳ್ಳನೆಯ ಸುಂದರ ಹುಡುಗಿ ದಪ್ಪಗಿನ ಹುಡುಗನ ಪ್ರೀತಿ ಬಲೆಗೆ ಬಿದ್ದು ಸಂಸಾರನೂ ನಡೆಸುತ್ತಿದ್ದಾಳೆ. ಆದ್ರೆ ಇಲ್ಲಿ ವಿಷಯ ಏನಪ್ಪಾ ಅಂದ್ರೆ, ಇವರಿಬ್ಬರಿಗೆ ಮದುವೆ ಆಗಿ ಒಂದು ಮಗು ಇದ್ದರೂ ಜನ ಮಾತ್ರ ಇವರ ಜೋಡಿಯನ್ನು ಒಪ್ಪಿಕೊಳ್ಳೋದೇ ಇಲ್ವಂತೆ!!


Ad Widget

Ad Widget

Ad Widget

ಹೌದು. ಈ ತೆಳ್ಳನೆ ಬೆಳ್ಳನೆಯ ಹುಡುಗಿ ಸಿಯೆನ್ನಾ ಕೀರಾ ಸಿಡ್ನಿ ಮೂಲದವರಾಗಿದ್ದು, ಜಾರ್ಜ್ ಗಾಗಿ ಲಂಡನ್ ಗೆ ಶಿಫ್ಟ್ ಆಗಿದ್ದಾರೆ.ಇವರಿಬ್ಬರನ್ನು ನೋಡುವಾಗ ಯಾಕೋ ವಿಚಿತ್ರ ಏನಿಸುತ್ತೆ.ಆದ್ರೆ ಆಕೆ ಮಾತ್ರ ಆತನ ಕಣ್ಣಿಗೆ ಸೋತಿದ್ದಾಳಂತೆ.ಅಂದಹಾಗೆ ಈ ಜೋಡಿ 2018ರಲ್ಲಿ ಮೊದಲ ಬಾರಿಗೆ ಹಾಸ್ಯ ಕಾರ್ಯಕ್ರಮದಲ್ಲಿ ಭೇಟಿಯಾಗಿದ್ದರು.ಜಾರ್ಜ್ ಸುಂದರವಾದ ಕಣ್ಣುಗಳಿಂದ ನಾನು ಆಕರ್ಷಿತಳಾದೆ ಎಂದು ಸಿಯೆನ್ನಾ ಕೀರಾ ಹೇಳುತ್ತಾರೆ.ದಂಪತಿಗೆ ಎರಡು ವರ್ಷದ ಮಗನಿದ್ದಾನೆ. ವರದಿಯ ಪ್ರಕಾರ, ದಂಪತಿ ತಮ್ಮ ಜೀವನಕ್ಕೆ ಸಂಬಂಧಿಸಿದ ವೀಡಿಯೊವನ್ನು ಟಿಕ್ಟಾಕ್ನಲ್ಲಿ ಹಂಚಿಕೊಂಡಾಗ, ಜನರು ಅದನ್ನು ಪ್ರಚಾರದ ಸ್ಟಂಟ್ ಎಂದು ಕರೆದಿದ್ದಾರೆ. ಇಷ್ಟು ಸುಂದರ ಹುಡುಗಿ ದಪ್ಪಗಿರುವ ವ್ಯಕ್ತಿಯೊಂದಿಗೆ ಪ್ರೀತಿಯಲ್ಲಿ ಬೀಳಲು ಸಾಧ್ಯವಿಲ್ಲ ಎಂದು ಜನರು ಹೇಳುತ್ತಾರೆ.

ಸಿಯೆನ್ನಾ ಮೂರು ಬಾರಿ ಜಾರ್ಜ್ ಅವರನ್ನು ಸಂಪರ್ಕಿಸಿದ್ದರು. ಇನ್ ಸ್ಟಾಗ್ರಾಂ ಮೂಲಕ ಇಬ್ಬರ ಪರಿಚಯವಾಗಿತ್ತು. ಪರಸ್ಪರ ಸಂದೇಶ ಕಳುಹಿಸಲು ಪ್ರಾರಂಭಿಸಿದ ಕೆಲವೇ ದಿನಗಳಲ್ಲಿ ಇಬ್ಬರ ಸ್ನೇಹ ಪ್ರೇಮಕ್ಕೆ ಬದಲಾಗಿತ್ತು. ಕೂಡಲೇ ಜಾರ್ಜ್ ಅವರನ್ನು ಭೇಟಿಯಾಗಲ ಸಿಯೆನ್ನಾ ಲಂಡನ್ ಗೆ ಬಂದಿದ್ದಾರೆ.ಭೇಟಿಯ ಬಳಿಕ ಇಬ್ಬರು ಜೊತೆಯಾಗಿ ಆರು ವಾರ ಯುರೋಪ್ ಪ್ರವಾಸ ಮಾಡಿದ್ದರು. ನಂತರ ಸಿಡ್ನಿಗೆ ಮರಳಿದ ನಂತರ ಇಬ್ಬರು ಜೊತೆಯಾಗಿರಲು ನಿರ್ಧರಿಸಿದ್ದರು. ನಂತರ ಪ್ರೀತಿಗಾಗಿ ಸಿಯೆನ್ನಾ ಲಂಡನ್ ಗೆ ಶಿಫ್ಟ್ ಆಗಿದ್ದಾರೆ.

ಸಿಯೆನ್ನಾ ಕುಟುಂಬಸ್ಥರು ಒಪ್ಪಿದ್ದರಿಂದ ಇಬ್ಬರ ಮದುವೆ ಆಪ್ತರ ಸಮ್ಮುಖದಲ್ಲಿ ನಡೆದಿದೆ. ದಂಪತಿಗೆ ಮುದ್ದಾದ ಮಗುವಿದ್ದು ಸಂತೋಷದ ಜೀವನ ನಡೆಸುತ್ತಿದ್ದಾರೆ.ಆದ್ರೆ ಇದೀಗ ಸಮಸ್ಯೆ ಮಾತ್ರ ನೆಟ್ಟಿಗರಿಗೆ!.ಇವರಿಬ್ಬರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುತ್ತಿದ್ದು,ಹಣಕ್ಕಾಗಿ ಜಾರ್ಜ್ ಹಿಂದೆ ಬಿದ್ದಿದ್ದಾಳೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.ಅಷ್ಟೇ ಅಲ್ಲದೆ ಇಬ್ಬರ ಫೋಟೋಗಳ ಬಗ್ಗೆ ಜನರು ಕೆಟ್ಟದಾಗಿ ಕಮೆಂಟ್ ಮಾಡಿದ್ದಾರೆ. ಆದ್ರೆ ಇದಕ್ಕೆಲ್ಲ ಕ್ಯಾರೇ ಎನ್ನದ ಸಿಯೆನ್ನಾ ಮತ್ತು ಜಾರ್ಜ್ ಸುಖ ಜೀವನ ನಡೆಸುತ್ತಿದ್ದಾರೆ.

Leave a Reply

error: Content is protected !!
Scroll to Top
%d bloggers like this: