ಸನ್ನಿಲಿಯೋನ್ ಫ್ಯಾನ್ಸ್ ಗೆ ಬಂಫರ್ ಆಫರ್ – ಚಿಕನ್ ಅಂಗಡಿಯಲ್ಲಿ 10% ಡಿಸ್ಕೌಂಟ್!!!

ಡಿಸ್ಕೌಂಟ್ ಅಥವಾ ರಿಯಾಯಿತಿ ಇದೆ ಎಂದು ಜನರಿಗೆ ಗೊತ್ತಾದರೆ ಸಾಕು, ಅಲ್ಲಿ ಜನ ಕ್ಯೂ ನಿಲ್ಲೋದು ಗ್ಯಾರಂಟಿ. ಹೆಚ್ಚಿನ ಬೆಲೆಯ ವಸ್ತುಗಳು ಕಮ್ಮಿ ಬೆಲೆಗೆ ಸಿಕ್ಕರೆ ಯಾರು ತಾನೇ ಬಿಡ್ತಾರೆ ಹೇಳಿ?

ಆದರೆ, ಮಾಂಸದ ರಾಣಿ, ನೀಲಿ ಸಿನಿಮಾ ತಾರೆ ಸನ್ನಿ ಲಿಯೋನ್‌ರ ಅಭಿಮಾನಿಯೊಬ್ಬ ಮಂಡ್ಯದಲ್ಲಿ ವರ್ಷಪೂರ್ತಿ ವಿಶೇಷ ಆಫರ್ ನೀಡುವ ಮೂಲಕ ಗಮನ ಸೆಳೆದಿದ್ದಾನೆ. ಹೌದು. ಆಶ್ಚರ್ಯವಾಗುತ್ತಿದೆಯೇ? ಆದರೆ ಇದು ಸತ್ಯ.


Ad Widget

Ad Widget

Ad Widget

ಮಂಡ್ಯ ನಗರದ ಕರ್ನಾಟಕ ಬಾರ್ ವೃತ್ತದಲ್ಲಿ ಚಿಕನ್ ಅಂಗಡಿ ಇಟ್ಟುಕೊಂಡಿರುವ ನಟಿ ಸನ್ನಿ ಲಿಯೋನ್ ಅಭಿಮಾನಿ ಪ್ರಸಾದ್, ತನ್ನ ಅಂಗಡಿಯಲ್ಲಿ ಚಿಕನ್ ಮಾಂಸಕ್ಕೆ ಇನ್ನು ಸಿಗಲಿದೆ ಡಿಸ್ಕೌಂಟ್ ! ಆತನ ಅಂಗಡಿಯಲ್ಲಿ ಮಾಂಸ ಖರೀದಿಸುವ ಸನ್ನಿ ಲಿಯೋನ್ ಅಭಿಮಾನಿಗಳಿಗೆ ಆತ ಶೇ. 10 ಡಿಸ್ಕ್ಂಟ್ ಕೊಡುವುದಾಗಿ ಮಾಹಿತಿ ಫಲಕ ಹಾಕಿಕೊಂಡಿದ್ದಾನೆ. ಸುಮ್ಮನೆ ಬಂದು ಅಭಿಮಾನಿ ಎಂದರೆ ರಿಯಾಯಿತಿ ಸಿಗುವುದಿಲ್ಲ, ಬದಲಿಗೆ ಆತ ಹೇಳುವ ಮೂರು ಪ್ರಮುಖ ಷರತ್ತುಗಳನ್ನು ಪೂರೈಸಿದರೆ ಮಾತ್ರ ಈ ಡಿಸ್ಕೌಂಟ್ ಆಫರ್ ನಿಮಗೆ ಲಭ್ಯ ಆಗಲಿದೆ.

ಕಂಡೀಷನ ನಂ.1 : ಸಾಮಾಜಿಕ ಜಾಲತಾಣ ಫೆಸ್‌ಬುಕ್ ಮತ್ತು ಇನ್ ಸ್ಟಾಗ್ರಾಂನಲ್ಲಿ ಸನ್ನಿ ಲಿಯೋನ್ ಅವರನ್ನು ಫಾಲೋ ಮಾಡುತ್ತಿರಬೇಕು; 2.ತಮ್ಮ ಮೊಬೈಲ್‌ಗಳಲ್ಲಿ ನಟಿಯ ಕನಿಷ್ಠ 10 ಫೋಟೋಗಳನ್ನು ಸಂಗ್ರಹಿಸಿಟ್ಟುಕೊಂಡಿರಬೇಕು; 3. ನಟಿಯ ಎಲ್ಲಾ ಚಿತ್ರಗಳಿಗೆ ಮೆಚ್ಚುಗೆ ಹಾಗೂ ಕಾಮೆಂಟ್ ಮಾಡಿರಬೇಕೆಂದು ಖಡಕ್ ಷರತ್ತು ಹಾಕಲಾಗಿದೆ.

ಇಷ್ಟನ್ನು ಪರಿಶೀಲಿಸಿ ಖಚಿತವಾದ ನಂತರ ನಿಮಗೆ ಡಿಸ್ಕೌಂಟ್ ನಲ್ಲಿ ಮಾಂಸ ತಗೋಬಹುದು. ಸದ್ಯಕ್ಕಂತೂ ಈ ಫಲಕ ಭಾರೀ ವೈರಲ್ ಆಗುತ್ತಿದೆ. ಮಾಂಸದ ಜತೆ ಮತ್ತೂಂದು ಮಾಂಸ ಫ್ರೀ ಅಂತ ಕಾಮೆಂಟ್ ಮಾಡ್ತಿದ್ದಾರೆ ಜನ.

Leave a Reply

error: Content is protected !!
Scroll to Top
%d bloggers like this: