PMSBHGY : ಬಿಪಿಎಲ್ ಕುಟುಂಬಗಳಿಗೆ ಉಚಿತ ವಿದ್ಯುತ್ ಸಂಪರ್ಕ!

0 13

ಯಾವುದೇ ಮನೆಗೆ ವಿದ್ಯುತ್ ಸಂಪರ್ಕ ಇಲ್ಲದಿದ್ದರೆ, ಆ ಮನೆ ಅಪೂರ್ಣ ಎಂದೇ ಹೇಳಬಹುದು. ಕೆಲ ವರ್ಷಗಳ ಹಿಂದೆ ಕುಗ್ರಾಮಗಳಿಗೆ ವಿದ್ಯುತ್ ಸಂಪರ್ಕವೇ ಇರಲಿಲ್ಲ. ಆದರೀಗ ಪರಿಸ್ಥಿತಿ ಬದಲಾಗಿದೆ. ಬಹುತೇಕ ಎಲ್ಲ ಗ್ರಾಮಗಳಿಗೂ ವಿದ್ಯುತ್ ಸಂಪರ್ಕ ಕೊಡಲಾಗಿದೆ.

ಪ್ರಸ್ತುತ ಬಹುತೇಕ ಎಲ್ಲ ಹಳ್ಳಿಗಳು ಮತ್ತು ನಗರಗಳು ವಿದ್ಯುತ್ ಪಡೆಯುತ್ತಿವೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಅತ್ಯುತ್ತಮ ಯೋಜನೆಗಳ ಮೂಲಕ ಎಲ್ಲ ಸ್ಥಳಗಳಿಗೆ ವಿದ್ಯುತ್ ತಲುಪಿಸಲಾಗುತ್ತಿದೆ.

ಇಂತಹ ಯೋಜನೆಗಳ ಪೈಕಿ ‘ಪ್ರಧಾನ ಮಂತ್ರಿ ಸಹಜ್ ಬಿಜ್ಲಿ ಹರ್ ಘರ್ ಯೋಜನೆ’ ಪ್ರಮುಖವಾದುದು. ಈ ಯೋಜನೆಯ ಮೂಲಕ ಆರ್ಥಿಕವಾಗಿ ದುರ್ಬಲರಾಗಿರುವ ಲಕ್ಷಾಂತರ ಜನರ ಮನೆಗಳಿಗೆ ಕಡಿಮೆ ಬೆಲೆಯಲ್ಲಿ ಅಥವಾ ಉಚಿತವಾಗಿ ವಿದ್ಯುತ್ ಸಂಪರ್ಕ ಒದಗಿಸಲಾಗುತ್ತಿದೆ.

ಈ ಯೋಜನೆಯಡಿ 10 ಮಾಸಿಕ ಕಂತುಗಳಲ್ಲಿ ತಲಾ ರೂ. 50ರಂತೆ ವಿದ್ಯುತ್ ಸಂಪರ್ಕ ನೀಡಲಾಗುತ್ತಿದೆ. ಈ ಯೋಜನೆಯಡಿ 1.23 ಕೋಟಿ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಒದಗಿಸುವ ಗುರಿ ಹೊಂದಲಾಗಿದೆ. 2017 -18ರಡಿ ಪ್ರಧಾನ ಮಂತ್ರಿ ಸಹಜ್ ಬಿಜ್ಲಿ ಹರ್ ಘರ್ ಯೋಜನೆ (ಸೌಭಾಗ್ಯ ಯೋಜನೆ) ಅಡಿಯಲ್ಲಿ 51.04 ಲಕ್ಷ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ. ಈ ಯೋಜನೆಯನ್ನು ಜನರಿಗೆ ಸುಲಭವಾಗಿಸಲು, ‘ಇ ಸಂಯೋಜನ್ ಮೊಬೈಲ್ ಅಪ್ಲಿಕೇಶನ್’ ಇದೆ.

ಅರ್ಹತೆ : 1.ವ್ಯಕ್ತಿಯು ದೇಶದ ಖಾಯಂನಿವಾಸಿಯಾಗಿರಬೇಕು

  1. ವ್ಯಕ್ತಿಯು ಎಪಿಎಲ್, ಬಿಪಿಎಲ್ ಕುಟುಂಬ ಅಥವಾ ರೈತನಾಗಿರಬೇಕು.
  2. ಉಚಿತ ವಿದ್ಯುತ್ ಗಾಗಿ
    ಮನೆಯಲ್ಲಿರುವ ಯಾವುದೇ ವ್ಯಕ್ತಿ ಸರ್ಕಾರಿ ಉದ್ಯೋಗದಲ್ಲಿ ಇರಬಾರದು
    4.ಬಡತನ ರೇಖೆಗಿಂತ ಕೆಳಗಿರುವ ಜನರು ಯೋಜನೆಗೆ ಅರ್ಹರು.
    5.ಆದಾಯ ತೆರಿಗೆ ಪಾವತಿಸುವ ಜನರು ಈ ಯೋಜನೆಯ ಲಾಭ ಪಡೆಯಲು ಅರ್ಹರಲ್ಲ.

ದಾಖಲೆ : ಮತದಾರರ ಗುರುತಿನ ಚೀಟಿ, ಹಿಂದಿನ ವಿದ್ಯುತ್ ಸಂಪರ್ಕ ದಾಖಲೆಗಳು, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಆದಾಯ ಪ್ರಮಾಣಪತ್ರ, ಬಿಪಿಎಲ್, ಎಪಿಎಲ್ ರೇಷನ್ ಕಾರ್ಡ್ ಮುಂತಾದ ಎಲ್ಲಾ ಅಗತ್ಯ ದಾಖಲೆಗಳನ್ನು ಹೊಂದಿರಬೇಕು.

ಅರ್ಜಿ ಸಲ್ಲಿಕೆ ಹೇಗೆ ? ಇದಕ್ಕಾಗಿ ನೀವು ಅಧಿಕೃತ ವೆಬ್‌ಸೈಟ್‌ಗೆ ಹೋಗಿ, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ನೀವು ಪ್ರಧಾನ ಮಂತ್ರಿ ಸಹಜ್ ಬಿಜ್ಲಿ ಹರ್ ಘರ್ ಯೋಜನೆಯಡಿ ಆರಂಭಿಸಲಾದ ‘ಇ-ಸಂಯೋಜನ್’ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ, ಇದಲ್ಲದೆ, ನಿಮ್ಮ ರಾಜ್ಯ ಸರ್ಕಾರದ ವಿದ್ಯುತ್ ಇಲಾಖೆಯ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನೀವು ಈ ಯೋಜನೆಗೆ ಸುಲಭವಾಗಿ ಅರ್ಜಿ ಸಲ್ಲಿಸಬಹುದು. ಮನೆಗೆ ಹೊಸ ವಿದ್ಯುತ್ ಸಂಪರ್ಕ ಪಡೆಯಲು ಸಹ ಈ ಯೋಜನೆಯನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ, ನೀವು ರಾಜ್ಯಗಳ ಪ್ರಕಾರ ಪ್ರಧಾನ ಮಂತ್ರಿ ಹರ್ ಘರ್ ಬಿಜ್ಲಿ ಯೋಜನೆಯ ಸಂಪರ್ಕ ಸಂಖ್ಯೆಯನ್ನು ಸಂಪರ್ಕಿಸಬಹುದು.

Leave A Reply