ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ ಲವ್ ಮ್ಯಾರೇಜ್ ಕೇಸ್ !! | ಲವ್ ಜಿಹಾದ್ ಎಂದು ಆರೋಪಿಸಿದ ಯುವತಿ ಪೋಷಕರು

ಕರ್ನಾಟಕದಲ್ಲಿ ಸಕ್ರಿಯವಾಗಿರುವ ಧರ್ಮ ಸಂಘರ್ಷ ಇದೀಗ ಪಕ್ಕದ ರಾಜ್ಯಕ್ಕೂ ಹರಡಿದೆ. ಕೇರಳದ ಕೋಜಿಕ್ಕೋಡ್‍ನಲ್ಲೊಂದು ನಡೆದ ಲವ್ ಮ್ಯಾರೇಜ್ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ್ದು, ಡಿವೈಎಫ್‍ಐ ನಾಯಕ ಷಿಜಿನ್, ಅನ್ಯ ಧರ್ಮದ ಜ್ಯೋತ್ಸ್ನಾ ಮೇರಿ ಜೋಸೆಫ್‍ರನ್ನು ಪ್ರೀತಿಸಿ ಮದುವೆ ಆಗಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.

ಜ್ಯೋತ್ಸ್ನಾ ಮೇರಿ ಜೋಸೆಫ್ ಪೋಷಕರು ಇದು ಲವ್ ಜಿಹಾದ್ ಎಂದು ಆರೋಪಿಸಿ, ಮಿಸ್ಸಿಂಗ್ ಕೇಸ್ ದಾಖಲಿಸಿದ್ದಾರೆ. ಕೋರ್ಟ್ ನಲ್ಲಿ ಹೇಬಿಯಸ್ ಕಾರ್ಪಸ್ ಕೂಡ ದಾಖಲಿಸಿದ್ದಾರೆ. ಆದರೆ ಇದು ಕೋರ್ಟ್ ನಲ್ಲಿ ವಜಾಗೊಂಡಿತ್ತು. ಇನ್ನೇನು ಈ ಪ್ರಕರಣ ಸುಖಾಂತ್ಯ ಕಂಡಿತು ಎನ್ನುವಾಗ ಈ ವಿವಾದಕ್ಕೆ ಈಗ ಸಿಪಿಎಂ ಮಾಜಿ ಶಾಸಕ ಜಾರ್ಜ್ ಎಂ. ಥಾಮಸ್ ಇದಕ್ಕೆ ತುಪ್ಪ ಸುರಿದಿದ್ದಾರೆ.

ಲವ್ ಜಿಹಾದ್ ಎನ್ನುವುದು ನಿಜ. ಎಸ್‍ಡಿಪಿಐ, ಜಮಾತ್ ಎ ಇಸ್ಲಾಮಿಯಂತಹ ಸಂಸ್ಥೆಗಳು ಉನ್ನತ ಶಿಕ್ಷಣ ಮಾಡಿದ ಇತರೆ ಧರ್ಮೀಯ ಯುವತಿಯರನ್ನು ಟ್ರ್ಯಾಪ್ ಮಾಡುವಂತೆ ಪ್ರೋತ್ಸಾಹ ನೀಡುತ್ತಾರೆ. ಈ ಮೂಲಕ ಲವ್ ಜಿಹಾದ್‍ಗೆ ಉತ್ತೇಜನ ನೀಡುತ್ತಾರೆ ಎಂದು ಆರೋಪಿಸಿದ್ದಾರೆ.

ಷಿಜಿನ್ ಮದುವೆ ವಿಚಾರವನ್ನು ಮೊದಲು ಪಕ್ಷದ ಮುಂದೆ ಇಡಬೇಕಿತ್ತು ಎಂದು ಅಸಮಾಧಾನ ಹೊರಹಾಕಿದ್ದು, ಷಿಜಿನ್ ಕೋಮು ಸೌಹಾರ್ದತೆಗೆ ಭಂಗ ಉಂಟು ಮಾಡಿದ ಕಾರಣ ಪಕ್ಷವು ಕ್ರಮಕ್ಕೆ ಮುಂದಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಇದು ಲವ್ ಜಿಹಾದ್ ಅಲ್ಲ ಎಂದು ಷಿಜಿನ್-ಜ್ಯೋತ್ಸ್ಯಾ ಸ್ಪಷ್ಟಪಡಿಸಿದ್ದಾರೆ.

Leave A Reply

Your email address will not be published.