ಸ್ಕೈಡೈವಿಂಗ್ ವೇಳೆ ಪ್ಯಾರಾಚೂಟ್ ಕಾಲಿಗೆ ಸಿಲುಕಿ 13,500 ಅಡಿ ಎತ್ತರದಿಂದ 201 kmh ವೇಗದಲ್ಲಿ ನೆಲಕ್ಕಪ್ಪಳಿಸಿದ ಮಹಿಳೆ !!

ಆಯಸ್ಸು ಗಟ್ಟಿಯಾಗಿದ್ದರೆ ಸಾವು ಸಮೀಪಿಸಿ ಹಾಗೆಯೇ ಹಾದುಹೋಗುತ್ತದೆ. ಇದಕ್ಕೆ ತಾಜಾ ಉದಾಹರಣೆಯಂತಿದೆ ಈ ಘಟನೆ. ಆಕಾಶದಲ್ಲಿ ಸ್ವಚ್ಛಂದವಾಗಿ ಹಾರಾಡುತ್ತಿದ್ದ ಒಬ್ಬಳು ಸ್ಕೈಡೈವರ್ ತನ್ನ ಪ್ಯಾರಾಚೂಟ್ ತನ್ನ ಕಾಲಿಗೆ ಸಿಲುಕಿಕೊಂಡ ಕಾರಣ 201 kmh ವೇಗದಲ್ಲಿ ನೆಲಕ್ಕೆ ಅಪ್ಪಳಿಸಿದರೂ ಕೂಡ ಪವಾಡ ಸದೃಶವಾಗಿ ಬದುಕುಳಿದ ಘಟನೆ ವರ್ಜೀನಿಯಾದಲ್ಲಿ(US) ನಡೆದಿದೆ.

ಜೋರ್ಡಾನ್ ಹ್ಯಾಟ್‌ಮೇಕರ್ ಎಂಬ 35 ವರ್ಷದ ಮಹಿಳೆ, ಕಳೆದ ವರ್ಷ ನವೆಂಬರ್‌ನಲ್ಲಿ 13,500 ಅಡಿ ಎತ್ತರದಿಂದ ಧುಮುಕುವ ಸಮಯದಲ್ಲಿ ತನ್ನ ಪ್ಯಾರಾಚೂಟ್ ನಿಂದ ಬಿಡುಗಡೆಯ ಬಳ್ಳಿಯನ್ನು ಎಳೆದ 20 ಸೆಕೆಂಡುಗಳ ಅಂತರದಲ್ಲಿ ನೆಲಕ್ಕಪ್ಪಳಿಸಿದಳು.
ಘಟನೆಯಲ್ಲಿ ಆಕೆ ಬೆನ್ನು, ಕಾಲು ಮತ್ತು ಪಾದದ ಮೂಳೆ ಮುರಿತಕ್ಕೆ ಒಳಗಾದಳು.


Ad Widget

Ad Widget

Ad Widget

ವರದಿಗಳ ಪ್ರಕಾರ, ಅವಳ ಕಾಲುಗಳು ಪ್ಯಾರಾಚೂಟ್‌ನ ಹಗ್ಗಗಳಲ್ಲಿ ಸಿಕ್ಕಿಹಾಕಿಕೊಂಡಾಗ ಆಕೆ ಅದರಿಂದ ಬಿಡಿಸಿಕೊಳ್ಳಲು ಯತ್ನಿಸಿದಳು. ಆದರೆ ಅದು ಸಾಧ್ಯವಾಗದೆ ಭಯಾನಕವಾದ ಸ್ಪಿನ್‌ನಲ್ಲಿ ಅವಳು ಭೂಮಿಯ ಕಡೆಗೆ ಮುನ್ನುಗ್ಗುವಂತಾಯಿತು. ಭೂಮಿ ಸ್ಪರ್ಶಿಸುವಾಗ ಅವಳು ತನ್ನ ಎಡಗಾಲನ್ನು ನೆಲಕ್ಕೆ ಹೊಡೆದಳಲ್ಲದೆ ಬೆನ್ನಿನ ಮೇಲೆ ಇಳಿಯಲು ಕೂಡ ಪ್ರಯತ್ನಿಸಿದಳು. ಆದರೆ ಅದು ಸಾಧ್ಯವಾಗಲಿಲ್ಲ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವಳು ಚೇತರಿಸಿಕೊಳ್ಳಲು ಬರೋಬ್ಬರಿ 25 ದಿನಗಳು ಕಾಯಬೇಕಾಯಿತು. ಆದಾಗ್ಯೂ, ಅವಳು ಸಾವಿನ ದವಡೆಯಿಂದ ಪಾರಾಗಿದ್ದು ಮಾತ್ರ ಪವಾಡವೇ ಸರಿ.

“ಎಲ್ಲವೂ ನಿಜವಾಗಿಯೂ ತ್ವರಿತವಾಗಿ ಸಂಭವಿಸಿತು. ನಾನು ಸುತ್ತುತ್ತಿರುವ ಕಾರಣ ನನಗೆ ಯಾವುದೇ ಆಲೋಚನೆಗಳು ಇರಲಿಲ್ಲ‌. ಹಾಗಾಗಿ ಏನು ನಡೆಯುತ್ತಿದೆ ಎಂದು ನನಗೆ ತಿಳಿದಿರಲಿಲ್ಲ, ನಾನು ತಂತ್ರದ ಮೋಡ್‌ನಲ್ಲಿದ್ದೇನೆ” ಎಂದು ಹ್ಯಾಟ್‌ಮೇಕರ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾಳೆ. ಅವಳು ಮತ್ತೆ ನಡೆದಾಡಲು ಮೂರು ತಿಂಗಳು ಬೇಕಾಯಿತು. ಆದಾಗ್ಯೂ, ಈ ಘಟನೆಯ ನಂತರವೂ, ಅವಳು ಮತ್ತೆ ಒಂದು ದಿನ ಸ್ಕೈಡೈವ್ ಮಾಡುವ ಭರವಸೆಯನ್ನು ಹೊಂದಿದ್ದಾಳೆ.

ಅಷ್ಟು ಎತ್ತರದಿಂದ ಬಿದ್ದು ಕೂಡ ಪವಾಡ ಸದೃಶವಾಗಿ ಪ್ರಾಣ ಕಾಪಾಡಿಕೊಂಡದ್ದಲ್ಲದೆ, ಮತ್ತದೇ ಸಾಹಸಕ್ಕೆ ಇಳಿಯುತ್ತೇನೆ ಎಂಬ ಆಕೆಯ ಮಾತು ನೆಟ್ಟಿಗರನ್ನು ಅಚ್ಚರಿಗೊಳಿಸಿದೆ. ಅವಳ ಈ ಆತ್ಮಸ್ಥೈರ್ಯ ಅದೆಷ್ಟೋ ಜನರಿಗೆ ಸ್ಫೂರ್ತಿಯಾಗಿದೆ.

Leave a Reply

error: Content is protected !!
Scroll to Top
%d bloggers like this: