ಮಂಗನಿಂದ ಮಾನವ ಎಂಬ ಮಾತಿದೆ. ಆದರೆ ಈಮಾನವನಿಗೆ ಮಂಗನಂತೆ ಬಾಲಮೂಡಿದೆ. ವ್ಯಕ್ತಿ ಬೆನ್ನಿನ ಕೆಳಭಾಗದಲ್ಲಿ ಕೂದಲು ಆವರಿಸಿರುವ ಬಾಲವೊಂದು ಮೂಡಿದೆ. ವೈದ್ಯರು ಕೂಡ ಇಂತಹದೊಂದು ಹೊಸ ಸಂಗತಿ ನೋಡಿ ತಲೆಕೆಡಿಸಿಕೊಂಡಿದ್ದಾರೆ.
ಯುವಕನ ಬೆನ್ನಿನ ಕೆಳಭಾಗದಲ್ಲಿ ಕೂದಲು ತುಂಬಿದ ಬಾಲ ಹೊರಬಂದಿದೆ. ನಂತರ ಅದು ನೇತಾಡಲು ಪ್ರಾರಂಭಿಸಿತು. ಈಗ ಆತ ಬರುತ್ತಿರುವ ಕೂದಲನ್ನು ಹೆಣೆಯುವ ಮೂಲಕ ಅದನ್ನು ಉದ್ದವಾಗಿ ಬಿಡುತ್ತಿದ್ದಾನೆ.
ಈತ ನೆಪಾಳದ ಹುಡುಗ. ಇವನಿಗೆ 16 ವರ್ಷ. ಬೆನ್ನುಹುರಿಯ ಅತ್ಯಂತ ಕೆಳಗಿನ ಮೂಳೆಯಾದ ಕೋಕ್ಸಿಕ್ಸ್‌ನಿಂದ ಹುಟ್ಟಿಕೊಂಡ ಈ ಬಾಲವನ್ನು ದೇಸಂತ್‌ನ ತಂದೆತಾಯಿಗಳು ಆತ ಜನಿಸಿದ ಸುಮಾರು 5 ದಿನಗಳ ನಂತರ ನೋಡಿದ್ದಾರೆ. ಪೋಷಕರು ಅನೇಕ ವೈದ್ಯರಿಗೆ ತೋರಿಸಿದರು ಆದರೆ ಈ ಬಾಲದಂತಹ ಕೂದಲುಗಳು ಹೇಗೆ ಬೆಳೆದವು ಎಂದು ಯಾರಿಗೂ ಅರ್ಥವಾಗಲಿಲ್ಲ.
ಬಾಲಕನ ದೇಹದಿಂದ 70 ಸೆಂ.ಮೀ ಕೂದಲುಳ್ಳ ಬಾಲವು ಬೆಳೆಯುತ್ತದೆ. ಆದರೆ ಇವನು ಮುಂದೆ ನೋಡಲು ಮನುಷ್ಯನಿಂತಿದ್ದು ಹಿಂದೆ ಬಾಲ ಹೊಂದಿದವನಾಗಿದ್ದಾನೆ. ಜೋತಿಷ್ಯಿಗಳು ಇವನು ಹನುಮಂತನ ಅವತಾರ ಎನ್ನುತ್ತಿದ್ದಾರೆ.