ಬಲೆಗೆ ಬಿತ್ತು ಬೃಹತ್ ಕಾಟ್ಲಾ ಮೀನು

ಸಣ್ಣ ಮೀನುಗಳನ್ನು ಹಿಡಿಯಲು ಹೋಗಿದ್ದ ಮೀನುಗಾರನಿಗೆ ಬೃಹತ್ ಮೀನು ಸಿಕ್ಕಿದೆ.ಈ ಬೃಹತ್ ಕಾಟ್ಲಾ ಮೀನು ಮೀನುಗಾರ ಗುರುದೇವ್ ಹಲ್ವಾರ್ ಅವರ ಬಲೆಯಲ್ಲಿ ಸಿಕ್ಕಿಬಿದ್ದಿದೆ.

ಇಷ್ಟು ದೊಡ್ಡ ಗಾತ್ರದ ಕಾಟ್ಲಾ ಮೀನು ಸಿಕ್ಕಿದಾಗ ಅಲ್ಲಿದ್ದವರೆಲ್ಲ ಅಚ್ಚರಿಗೊಂಡರು. ಪದ್ಮ ನದಿ ಎಂದರೆ ಹಿಲ್ಸಾ ಮೀನು ಮಾತ್ರವಲ್ಲ, ಇತರ ಮೀನುಗಳಿಗೂ ಸಹ ಫೇಮಸ್, ಹಿಲ್ಸಾಗೋಸ್ಕರ ಹೋಗಿದ್ದರೂ ಸಿಕ್ಕಿದ್ದು 16.2 ಕೆಜಿ ತೂಕದ ಬೃಹತ್ ಕಾಟಾ ಮೀನು!

ಹೌದು, ಆದರೆ ವಾಸ್ತವದಲ್ಲಿ ಕಾಟ್ಲಾ ಮೀನು ಬಲೆಗೆ ಬಿದ್ದಿದೆ. ಬಾಂಗ್ಲಾದೇಶದಲ್ಲಿ ಈ ದೈತ್ಯ ಮೀನು ಬಹಳ ಫೇಮಸ್.

ದೌಲತ್ತಿಯಾ ಫೆರ್ರಿ ಟರ್ಮಿನಲ್ ಪಕ್ಕದಲ್ಲಿರುವ ಮಾರುಕಟ್ಟೆಯಲ್ಲಿ ಮೀನುಗಳನ್ನು ಹರಾಜಿಗೆ ತಂದಿದ್ದರು. ಸ್ಥಳೀಯ ಉದ್ಯಮಿ ಮೊಹಮ್ಮದ್ ಚಂದು ಮೊಲ್ಲಾ ಮೀನು ಖರೀದಿಸಿದ್ದಾರೆ.

ಮೀನುಗಾರರ ಪ್ರಕಾರ, ಬಿಸಿ ಏರುತ್ತಿದೆ, ಮಳೆ ಕಡಿಮೆಯಾಗಿದೆ. ಇದರಿಂದಾಗಿ ನದಿ ನೀರು ಸಾಕಷ್ಟು ಕಡಿಮೆಯಾಗಿದೆ. ಅದಕ್ಕಾಗಿಯೇ ದೊಡ್ಡ ರುಯಿ,ಕಾಡ್ತಾ, ಜೋಲ್ ಮುಂತಾದ ಮೀನುಗಳು ಹೆಚ್ಚಿನ ಪ್ರಮಾಣಗಳಲ್ಲಿ ಸಿಗುತ್ತಿದೆ.

ಅದರಲ್ಲೂ ಮಾಣಿಕಗಂಜ್ ಮತ್ತು ಪಟ್ನಾ ಜಿಲ್ಲೆಗಳಲ್ಲಿ ಇಂತಹ ದೊಡ್ಡ ಮೀನುಗಳು ಹೆಚ್ಚಾಗಿ ಸಿಗುತ್ತದೆ.

Leave A Reply