ಒಟ್ಟಿಗೆ ಕಾಡಿಗೆ ಹೋದ ಮೂವರು ಯುವತಿಯರು ಒಂದೇ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ!!

ರಾತ್ರಿ ಹೊತ್ತಿಗೆ ಕಾಡಿಗೆ ಹೋದ ಮೂವರು ಹುಡುಗಿಯರು ಒಂದೇ ಮರಕ್ಕೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಒಡಿಶಾದ ನವರಂಗಪುರದಲ್ಲಿ ನಡೆದಿದೆ.

 

ಮೃತ ಯುವತಿಯರನ್ನು ತೊಹಾರಾ ಎಂಬ ಹಳ್ಳಿಯ ನಿವಾಸಿಗಳಾದ ಹೇಮಲತಾ ಗೌಡಾ (21), ಕೌಸಲ್ಯಾ ಮಜ್ಹಿ (17) ಮತ್ತು ಫುಲಮತಿ ಮಜ್ಹಿ (16) ಎಂದು ಗುರುತಿಸಲಾಗಿದೆ.

ರಾತ್ರಿ ಗಂಟೆ ಒಂಬತ್ತು ಕಳಿದರೂ ಹುಡುಗಿಯರು ಮನೆಗೆ ಬಾರದೆ ಇದ್ದಾಗ ಮನೆಯವರು ಗ್ರಾಮದ ಮೂಲೆಮೂಲೆಯಲ್ಲಿ ಹುಡುಕಿದ್ದಾರೆ. ಆದರೆ ಅವರ ಸುಳಿವು ಮಾತ್ರ ಸಿಕ್ಕಿರಲ್ಲಿಲ.ಬಳಿಕ ಶನಿವಾರ ಸಂಜೆಯ ಹೊತ್ತಿಗೆ ಇವರು ಮೂರು ಜನ ಒಟ್ಟಿಗೇ ಸಮೀಪದ ಅರಣ್ಯ ಪ್ರದೇಶಕ್ಕೆ ಹೋಗುವುದನ್ನು ನೋಡಿದವರು ಇದ್ದು, ಅವರು ಈ ಮಾಹಿತಿಯನ್ನು ಮನೆಯವರಿಗೆ ತಿಳಿಸಿದ್ದಾರೆ.

ತಕ್ಷಣ ಅವರನ್ನು ಹುಡುಕುತ್ತ ಹೋಗಿದ್ದಾರೆ.ಕಾಡಿನಲ್ಲಿ ಸ್ವಲ್ಪ ಹೊತ್ತು ಹುಡುಕಿದ ಸ್ಥಳೀಯರಿಗೆ ಒಂದೇ ಮರದಲ್ಲಿ ಮೂವರ ಶವ ನೇತಾಡುತ್ತಿರುವ ದೃಶ್ಯ ಕಂಡಿದೆ. ಅದನ್ನು ನೋಡಿ ಭಯಭೀತರಾದ ಸ್ಥಳೀಯರು ಕೂಡಲೇ ಪೊಲೀಸರಿಗೆ ಫೋನ್ ಮಾಡಿದ್ದಾರೆ.ಇವರಲ್ಲಿ ಕೌಸಲ್ಯಾ ಮತ್ತು ಫುಲಮತಿ ಇನ್ನೂ ಅಪ್ರಾಪ್ತರೆಂದು ಹೇಳಲಾಗುತ್ತಿದ್ದರೂ, ಉಮೇರಕೋಟೆ ಜಗತ್​ ತಹಸೀಲ್ದಾರ್​ ಜಿಬನ್​ ಚೌಧರಿ ಅದನ್ನು ನಿರಾಕರಿಸಿದ್ದಾರೆ. ಮೃತರೆಲ್ಲರೂ 18 ವರ್ಷ ಮೇಲ್ಪಟ್ಟವರು ಎಂದು ಹೇಳಿದ್ದಾರೆ.

ನಿನ್ನೆ ಸಂಜೆ ಸುಮಾರು 4.30ಕ್ಕೆ ಒಟ್ಟಿಗೇ ಕಾಡಿಗೆ ಹೋದ ಮೂವರು ಹುಡುಗಿಯರು ರಾತ್ರಿ ಹೊತ್ತಿಗೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅದರಲ್ಲೂ ಒಂದೇ ಮರಕ್ಕೆ ಮೂವರೂ ನೇಣು ಬಿಗಿದುಕೊಂಡಿದ್ದಾರೆ.ಇದೇ ಹೆಚ್ಚು ಸಂಶಯಕ್ಕೆ ಎಡವುಮಾಡಿಕೊಟ್ಟಿತು.ಅದ್ಯಾಕೆ ಒಟ್ಟಿಗೇ ಕಾಡಿಗೆ ಹೋಗಿ, ಹೀಗೆ ಆತ್ಮಹತ್ಯೆ ಮಾಡಿಕೊಂಡರು ಎಂಬುದು ಬಹುದೊಡ್ಡ ಪ್ರಶ್ನೆಯಾಗಿದ್ದು,ಕುಟುಂಬದವರ, ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ. ಊರಲ್ಲಿ ಪ್ರತಿಯೊಬ್ಬರೂ ಶಾಕ್​​ನಲ್ಲಿದ್ದು, ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು, ತನಿಖೆ ಶುರುಮಾಡಿದ್ದಾರೆ.

ಕುಟುಂಬದ ಸದಸ್ಯರನ್ನು ಪೊಲೀಸರು ಈಗಾಗಲೇ ವಿಚಾರಣೆ ನಡೆಸಿದ್ದಾರೆ. ಇವರಿಗೆ ಯಾವುದಾದರೂ ಬೇಸರವಾಗಿತ್ತಾ? ಎಂಬಿತ್ಯಾದಿ ಪ್ರಶ್ನೆಗಳನ್ನೂ ಕೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಎಸ್​​ಪಿ ಸ್ಮಿತ್​ ಪರಶೋತ್ತಮದಾಸ್​ ಪಾರ್ಮರ್​, ನಾವು ಮೃತ ಯುವತಿಯರ ಸಂಬಂಧಿಕರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಶವಗಳನ್ನು ಪೋಸ್ಟ್​ಮಾರ್ಟಮ್​ಗೆ ಕಳಿಸಲಾಗಿತ್ತು. ಇದೊಂದು ಆತ್ಮಹತ್ಯೆ ಎಂಬುದನ್ನು ಪ್ರಾಥಮಿಕ ತನಿಖೆಗಳು ಹೇಳುತ್ತವೆ.ಇನ್ನಷ್ಟು ಆಳವಾಗಿ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

Leave A Reply

Your email address will not be published.