ತಾಯಿಯಾಗುತ್ತಿದ್ದಾರೆ ಕನ್ನಡದ ಜನಪ್ರಿಯ ನಟಿ !! | ವಿಭಿನ್ನವಾಗಿ ಸಿಹಿ ಸುದ್ದಿ ಹಂಚಿಕೊಂಡ ಪ್ರಣೀತಾ ಸುಭಾಷ್

ಕಳೆದ ವರ್ಷ ಗುಟ್ಟಾಗಿ ಮದುವೆಯಾಗಿದ್ದ ಕನ್ನಡದ ನಟಿ ತಾಯಿಯಾಗುತ್ತಿದ್ದಾರೆ. ದಕ್ಷಿಣ ಭಾರತದ ಪ್ರತಿಭಾವಂತ ನಟಿ ಪ್ರಣೀತಾ ಸುಭಾಷ್ ಈ ಕುರಿತು ತನ್ನ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.

ಗರ್ಭಿಣಿ ಆಗಿರುವ ಪ್ರಣೀತಾ, ಈ ಸುದ್ದಿಯನ್ನು ವಿಭಿನ್ನವಾಗಿ ಫೋಟೋಗಳ ಮೂಲಕ ಹಂಚಿಕೊಂಡಿದ್ದಾರೆ. ಪತಿ ಹಾಗೂ ಉದ್ಯಮಿ ನಿತಿನ್ ರಾಜು ಜತೆ ಇರುವ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿ ತಾಯಿ ಆಗುತ್ತಿರುವ ಖುಷಿಯನ್ನು ವ್ಯಕ್ತಪಡಿಸಿದ್ದಾರೆ.


Ad Widget

Ad Widget

Ad Widget

ಒಂದು ಫೋಟೋದಲ್ಲಿ ಪ್ರಣೀತಾ ಮತ್ತು ನಿತಿನ್ ಪ್ರಗ್ನೆಂಟ್ ಕಿಟ್ ಹಿಡಿದಿದ್ದರೆ, ಇನ್ನೊಂದು ಫೋಟೋದಲ್ಲಿ ನಿತಿನ್, ಪ್ರಣಿತಾರನ್ನು ಎತ್ತಿಕೊಂಡಿದ್ದು, ಪ್ರಣೀತಾ ಸ್ಕ್ಯಾನ್ ರಿಪೋರ್ಟ್ ಅನ್ನು ಕ್ಯಾಮೆರಾಗೆ ಪ್ರದರ್ಶಿಸುವ ಮೂಲಕ ತಾಯಿಯಾಗುತ್ತಿರುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಸದ್ಯ ಪ್ರಣೀತಾ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

ಪ್ರಣೀತಾ ಅವರು ಕಳೆದ ವರ್ಷ ಮೇ 30ರಂದು ನಿತಿನ್ ಜೊತೆ ಗುಟ್ಟಾಗಿ ಮದುವೆ ಆಗಿದ್ದರು. ಮದುವೆ ಬಳಿಕ ಸುದೀರ್ಘ ಪತ್ರ ಬರೆದಿದ್ದ ಪ್ರಣೀತಾ, ‘2021ರ ಮೇ 30ರಂದು ಅತ್ಯಾಪ್ತರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದೇವೆ. ಈ ಸಂತಸದ ವಿಚಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಮದುವೆಯ ದಿನಾಂಕ ಅರ್ಜೆಂಟಾಗಿ ನಿಗದಿಯಾಯಿತು. ಕೊರೋನಾ ಹಿನ್ನೆಲೆಯಲ್ಲಿ ಮದುವೆಗೆ ಯಾರನ್ನೂ ಆಮಂತ್ರಿಸಲು ಸಾಧ್ಯವಾಗಲಿಲ್ಲ ಇದಕ್ಕಾಗಿ ಕ್ಷಮೆ ಇರಲಿ. ಕೊರೋನಾ ನಿಯಮವನ್ನು ಕಟ್ಟುನಿಟ್ಟಾಗಿ ನಾವೂ ಪಾಲಿಸಬೇಕಿದೆ. ದಯವಿಟ್ಟು ನಮ್ಮನ್ನು ಕ್ಷಮಿಸಿ ಬಿಡಿ’ ಎಂದು ಕೋರಿದ್ದರು.

ದರ್ಶನ್ ಅಭಿನಯದ ‘ಪೊರ್ಕಿ’ ಸಿನಿಮಾದ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಪ್ರಣೀತ ಹಲುವು ಸಿನಿಮಾಗಳಲ್ಲಿ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಸಿನಿಮಾಗಳಲ್ಲೂ ಮಿಂಚಿದ್ದು, ತಮ್ಮ ಸಾಮಾಜಿಕ ಕಾರ್ಯಗಳಿಂದ ಜನಪ್ರಿಯರಾಗಿದ್ದಾರೆ.

Leave a Reply

error: Content is protected !!
Scroll to Top
%d bloggers like this: