‘ಪೋರ್ನ್ ವೀಡಿಯೋ’ ನೋಡಿ, ಗಂಟೆಗೆ 1500 ರೂ. ಕೊಡ್ತಾರೆ..!

ಲೈಂಗಿಕಾಸಕ್ತಿ ಮನುಷ್ಯನಿಗೆ ಸಹಜವಾಗಿಯೇ ಇರುತ್ತದೆ.‌ಸೆಕ್ಸ್ ವಿಷಯಗಳನ್ನು ಮಾತನಾಡಲು, ನೋಡಲು ಕೆಟ್ಟ ಕುತೂಹಲವಿರುತ್ತದೆ. ಹೀಗಾಗಿಯೇ ಅದೆಷ್ಟೋ ಪೋರ್ನ್ ಚಾನೆಲ್‌ಗಳು ಕಾರ್ಯಾಚರಿಸುತ್ತಿವೆ ಮತ್ತು ಮಲ್ಟಿ ಬಿಲಿಯನ್ ಡಾಲರ್ ವ್ಯವಹಾರ ನಡೆಸುತ್ತಿವೆ.

ವಯಸ್ಕರಿಂದ ಹಿಡಿದು ವೃದ್ಧರು ಇದನ್ನು ಕದ್ದುಮುಚ್ಚಿ ನೋಡುತ್ತಾರೆ.ಇವತ್ತಿನವರೆಗೆ ಯಾರೂ ಮನೆಯಲ್ಲಿ ಇಲ್ಲದ ಟೈಂನಲ್ಲಿ ಬೆಡ್‌ಶೀಟ್ ಹೊದ್ಕೊಂಡು ಮಾಡೋ ಕೆಲ್ಸ ಇಲ್ಲೊಂದು ಕಡೆ ಫುಲ್ ಟೈಂ ಜಾಬ್ ಆಗಿದೆ. ಅದರ ಜೊತೆಗೆ ನಿಮಗೆ ಕೈ ತುಂಬಾ ಸಂಬಳ‌ನೂ ಕೊಡುತ್ತೆ…! ಅಂಥದ್ದೊಂದು ಜಾಬ್ ಅಪರ್ಚುಣಿಟಿ ಈಗ ಕ್ರಿಯೇಟ್ ಆಗಿದೆ. ಯಾರೋ ಅಸಹ್ಯ ಮಾಡೋ ಕೆಲಸವನ್ನು, ಅಸಹ್ಯ ಪಟ್ಟುಕೊಳ್ಳದೆ ನೋಡುವ ಉದ್ಯೋಗ ಇದಾಗಿದೆ.


Ad Widget

Ad Widget

Ad Widget

ನಾವ್ ಹೇಳ್ತಿರೋದು ನಿಜಾನೆ. ಇಲ್ಲೊಂದು ಕಂಪೆನಿ, ಸುಮ್ಮೆ ಪೋರ್ನ್ ವೀಡಿಯೋ ನೋಡ್ತಾ ಕೂತ್ರೆ ಸಾಕು ಗಂಟೆ ಭರ್ತಿ 1500 ರೂ. ಗರಿ ಗರಿ ಸಂಬಳ ಕೊಡುತ್ತೆ.

ಇಡೀ ಪ್ರಪಂಚದಲ್ಲಿ ವಿಚಿತ್ರ ರೀತಿಯ ಹಲವು ಉದ್ಯೋಗಗಳಿವೆ. ಅಂಥಾ ಜಾಬ್ ಆಫರ್ ಕಂಪನಿಯು ಬೆಡ್‌ಬೈಬಲ್ ಆಗಿದೆ. ಇದು ಸಂಪೂರ್ಣವಾಗಿ ಲೈಂಗಿಕತೆಗೆ ಸಂಬಂಧಿಸಿದ ಕಂಪೆನಿಯಾಗಿದೆ. ಲೈಂಗಿಕ ಆಟಿಕೆ, ಕಾಮ ಪ್ರಚೋದಕ ಬುಕ್ಸ್, ಅಂಥದ್ದೇ ವೀಡಿಯೋಗಳನ್ನು ಮೂಲವಾಗಿಟ್ಟುಕೊಂಡು ಅದರ ಬಿಸಿನೆಸ್ ನಡೀತಿದೆ. ತನ್ನಲ್ಲಿನ ಆನ್‌ಲೈನ್ ಅಶ್ಲೀಲ ವೀಡಿಯೊಗಳನ್ನು ವೀಕ್ಷಿಸಲು ಕಂಪನಿಯು ತಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ ಖಾಲಿ ಹುದ್ದೆಯನ್ನು ಹಾಕಿದ್ದಾರೆ. ಆನ್‌ಲೈನ್ ವಯಸ್ಕ ಚಲನಚಿತ್ರಗಳನ್ನು ವೀಕ್ಷಿಸುವ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಗಾಗಿ ಹುಡುಕಾಟ ನಡೆಯುತ್ತಿದೆ.

ಪೋರ್ನ್ ರಿಸರ್ಚ್ ಮುಖ್ಯಸ್ಥರು ಹೇಳುವ ಪ್ರಕಾರ, ಈ ಹುದ್ದೆಗೆ ಅರ್ಜಿ ಸಲ್ಲಿಸಲು, ಅರ್ಜಿದಾರರು 21 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿರಬೇಕು. ಆದರೆ ಇದಕ್ಕೆ ನೀವು ಜಗತ್ತಿನ ಯಾವ ದೇಶದಲ್ಲಿರುವಿರಿ ಎಂಬುದು ಮುಖ್ಯವಲ್ಲ ಎಂದು ಕಂಪನಿಯು ಹೇಳಿದೆ. ಆದರೆ ವಾರಕ್ಕೊಮ್ಮೆ ವೀಡಿಯೋ ನೋಡುವವರ ಸಂಪರ್ಕದಲ್ಲಿರುವುದಾಗಿ ಕಂಪೆನಿ ತಿಳಿಸಿದೆ. ಅರ್ಜಿ ನಮೂನೆಯು ಅರ್ಜಿದಾರರ ಹೆಸರು, ಇಮೇಲ್ ವಿಳಾಸ ಮತ್ತು ಉದ್ಯೋಗದ ಸ್ಥಿತಿಯನ್ನು ಮತ್ತು ಅರ್ಜಿ ಸಲ್ಲಿಸಲು ಕಾರಣಗಳನ್ನು ಮತ್ತು ಕಂಪನಿಯು ಅವರನ್ನು ಏಕೆ ಆಯ್ಕೆ ಮಾಡಬೇಕು ಎಂಬುದನ್ನು ತಿಳಿಸಲು ಕೇಳುತ್ತದೆ. ಕಂಪನಿಯ ಪ್ರಕಾರ, ಪೋರ್ನ್ ವೀಡಿಯೊಗಳಲ್ಲಿನ ಪ್ರವೃತ್ತಿಗಳು, ಅಂಕಿಅಂಶಗಳ ಬಗ್ಗೆ ಆಳವಾದ ವರದಿಯನ್ನು ನಡೆಸಲು ಈ ಡೇಟಾವನ್ನು ಬಳಸಲಾಗುತ್ತದೆ ಎಂದು ತಿಳಿಸಲಾಗಿದೆ.

ಇನ್ಯಾಕೆ ತಡ ಪೋರ್ನ್ ವೀಡಿಯೋ ನೋಡಿ, ಸಿಕ್ಕಾಪಟ್ಟೆ ದುಡ್ಡು ಮಾಡಿ, ಅಂತಿದೆ ಕಂಪನಿ. ಆದ್ರೆ ಪೋರ್ನ್ ಕೆಟ್ಟದು, ಪ್ರತಿಕೂಲ ಪರಿಣಾಮ ಉಂಟು ಅಂತಿದೆ ಮನೋ ಶಾಸ್ತ್ರಜ್ಞರು. ಎಚ್ಚರ ಎಲ್ಲಾ ಕಡೆ ಬೇಕಲ್ವ.

Leave a Reply

error: Content is protected !!
Scroll to Top
%d bloggers like this: