ಡ್ರಗ್ಸ್ ಖರೀದಿಗೆ ಹಣ ನೀಡದ ತಾಯಿ, ಕೊಂದ ಪಾಪಿ ಮಗ!

ಮಗನೋರ್ವ ತನ್ನ ದುಶ್ಚಟಗಳಿಗೆ ಹಣ ನೀಡದ ತಾಯಿಯನ್ನು ಜೀವಂತವಾಗಿಯೇ ಸುಟ್ಟು ಹಾಕಿದ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ.

ಹಣ ನೀಡದ ಕಾರಣಕ್ಕೆ ಮನೆಗೆ ಬೆಂಕಿ ಹಚ್ಚಿ ತಾಯಿಯನ್ನೇ ಕೊಂದ ಘಟನೆ ಉತ್ತರಾಖಂಡದ ರೂರ್ಕಿಯಲ್ಲಿ ನಡೆದಿದೆ.


Ad Widget

Ad Widget

Ad Widget

ಕುಡಿದ ಮತ್ತಿನಲ್ಲಿದ್ದ ಮಗ, ತಾಯಿಯ ಬಳಿ ಡ್ರಗ್ಸ್ ಖರೀದಿಸಲು ಹಣ ಕೇಳಿದ್ದಾನೆ. ಇದಕ್ಕೆ ತಾಯಿ ನಿರಾಕರಿಸಿದ್ದಾಳೆ. ಈ ವೇಳೆ ಇಬ್ಬರು ನಡುವೆ ಕೆಲ ಹೊತ್ತು ವಾಗ್ವಾದ ನಡೆದಿದೆ.

ಇದರಿಂದ ಕೆರಳಿದ ಆತ ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್‌ಗೆ ಬೆಂಕಿ ಹಚ್ಚಿ
ಸ್ಫೋಟಗೊಳಿಸಿದ್ದಾನೆ. ಇದರ ಪರಿಣಾಮ, ಮನೆಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.

ಕೋಪಗೊಂಡ ಮಗ ಮನೆಗೆ ಬೆಂಕಿ ಹಚ್ಚಿದ್ದಾನೆ. ಈ ಘಟನೆ ಮನೆಯಲ್ಲಿದ್ದ ಸಾಮಗ್ರಿಗಳೆಲ್ಲವೂ ಸುಟ್ಟು ಕರಕಲಾಗಿವೆ. ತುರ್ತು ಸೇವೆಯ ವಾಹನಗಳು ಘಟನಾ ಸ್ಥಳ ತಲುಪುವಷ್ಟರಲ್ಲಿ ತಾಯಿ ಮೃತಪಟ್ಟಿದ್ದಾರೆ.

Leave a Reply

error: Content is protected !!
Scroll to Top
%d bloggers like this: