ಬಿಎಂಡಬ್ಲ್ಯೂ ಕಾರು ಚಾಲಕನ ನಿರ್ಲಕ್ಷ್ಯದಿಂದ ನಡೆದ ಅಪಘಾತ ಪ್ರಕರಣ|ಕಾರು ಚಾಲಕನನ್ನು ವಶಕ್ಕೆ ಪಡೆದ ಪೊಲೀಸರು
ಮಂಗಳೂರು: ಎರಡು ಕಾರುಗಳ ಮಧ್ಯೆ ದ್ವಿಚಕ್ರ ವಾಹನ ಸಿಲುಕಿ ಮಹಿಳೆಯೋರ್ವಳು ಗಂಭೀರ ಗಾಯಗೊಂಡ ಘಟನೆ ಮಂಗಳೂರು ನಗರದ ಎಂ.ಜಿ ರಸ್ತೆಯ ಬಲ್ಲಾಳ್ಬಾಗ್ ಬಳಿ ನಿನ್ನೆ ಮಧ್ಯಾಹ್ನ ನಡೆದಿದ್ದು, ಇದೀಗ ಬಿಎಮ್ ಡಬ್ಲ್ಯೂ ಕಾರು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಚಾಲಕ ಮಣ್ಣಗುಡ್ಡ ನಿವಾಸಿ ಶ್ರವಣ್ ಕುಮಾರ್ (30) ನ್ನು ಪೊಲೀಸರ ವಶಕ್ಕೆ ಪಡೆದುಕೊಂಡಿದ್ದಾರೆ.
ಪಿವಿಎಸ್ ಕಡೆಯಿಂದ ಲಾಲ್ಭಾಗ್ ಕಡೆಗೆ ಅತೀ ವೇಗದಿಂದ ತೆರಳುತ್ತಿದ್ದ ಬಿಎಂಡಬ್ಲ್ಯೂ ಕಾರು ರಸ್ತೆ ವಿಭಜಕ್ಕೆ ಢಿಕ್ಕಿ ಹೊಡೆದು ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಪ್ರೀತಿ ಮನೋಜ್(47)ರವರ ಸ್ಕೂಟಿಗೆ ಢಿಕ್ಕಿ ಹೊಡೆದಿದೆ.ಕಾರು ಹೊಡೆದ ರಭಸಕ್ಕೆ ಸ್ಕೂಟಿ ಚಲಾಯಿಸುತ್ತಿದ್ದ ಮಹಿಳೆ ರಸ್ತೆಗೆ ಬಿದ್ದ ಸಂದರ್ಭ, ಸ್ಕೂಟಿಯ ಹಿಂದಿನಿಂದ ಬರುತ್ತಿದ್ದ ಇಂಟಿರಿಯರ್ ಡೆಕೋರೇಟರ್ ನಿರಂಜನ್ ಎಂ.ಎನ್.ರವರ ಕಾರು ನಿಯಂತ್ರಣ ತಪ್ಪಿ ಮತ್ತೆ ಮಹಿಳೆಗೆ ಢಿಕ್ಕಿ ಹೊಡೆದಿದೆ.ಎರಡೂ ಕಾರುಗಳ ನಡುವೆ ಅಪ್ಪಚ್ಚಿಯಾದ ಸ್ಕೂಟಿ ಮಧ್ಯೆ ಸಿಲುಕಿದ ಮಹಿಳೆಗೆ ಗಂಭೀರ ಗಾಯಗೊಂಡಿದ್ದರು.
ಮಹಿಳೆಯನ್ನು ನಗರದ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿದೆ.ಮಂಗಳೂರು ಪಶ್ಚಿಮ ಸಂಚಾರಿ ಪೊಲೀಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದು,ಐಪಿಸಿ ಸಕ್ಷನ್ 279, 338 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.