ಈ‌ ನಗರದ ಮಹಿಳೆಯರು ತಲೆಕೂದಲು ಸಣ್ಣದಾಗಿ ಕಟ್ ಮಾಡಿಸಿಕೊಳ್ಳಲು ಇದೆ ಭಯಾನಕ‌‌‌ ಕಾರಣ !

0 5

ಹೆಣ್ಣು ಮಕ್ಕಳು ಸಾಮಾನ್ಯವಾಗಿ ಸುಂದರವಾಗಿ‌ ಕಾಣಲು ಹೇರ್ ಕಟ್ ಮಾಡಿಸಿಕೊಳ್ಳುತ್ತಾರೆ. ಕೆಲವರು ವಿಭಿನ್ನವಾಗಿ ಕಾಣಲು ಬಾಯ್ ಕಟ್ ಮಾಡಿಸಿಕೊಳ್ಳುತ್ತಾರೆ. ಆದರೆ ಇವಾಂಕಿವ್​ ಎಂಬ ನಗರದಲ್ಲಿ ಮಹಿಳೆಯರು ಹೆದರಿ ಜೀವ ಮತ್ತು ಮಾನ ಉಳಿಸಿಕೊಳ್ಳಲು ತಲೆ ಕೂದಲನ್ನು  ಸಣ್ಣದಾಗಿ ಕತ್ತರಿಸಿಕೊಳ್ಳುತ್ತಿದ್ದಾರೆ. ಕಾರಣ ಕೇಳಿದರೆ ಜೀವ ಮರಗುತ್ತದೆ!

ಉಕ್ರೇನ್​ನ ರಾಜಧಾನಿ ಕೀವ್​ನಿಂದ 50 ಮೈಲುಗಳಷ್ಟು ದೂರದಲ್ಲಿ ಇವಾಂಕಿವ್​ ಎಂಬ ನಗರವಿದೆ. ಅಲ್ಲಂತೂ ಹದಿಹರೆಯದ ಯುವತಿಯರೆಲ್ಲ ತಮ್ಮ ತಲೆಕೂದಲನ್ನು ತುಂಬ ಸಣ್ಣದಾಗಿ ಕತ್ತರಿಸಿಕೊಳ್ಳುತ್ತಿದ್ದಾರೆ.  ಕಾರಣ ಚಂದಕಾಣಲೂ ಅಲ್ಲ ಸ್ಟೈಲ್ ಮಾಡಲೂ ಅಲ್ಲ. ಮಾನ ಉಳಿಸಿಕೊಳ್ಳಲು,‌ದೈಹಿಕ‌ ಹಿಂಸೆಯಿಂದ ರಕ್ಷಣೆ ಪಡೆಯಲು!

ರಷ್ಯಾದ ಸೈನಿಕರು ಚೆಂದನೆಯ ಹುಡುಗಿಯರು, ಮಹಿಳೆಯರನ್ನು ಯಾರನ್ನೂ ಬಿಡದೆ ಅತ್ಯಾಚಾರ ಮಾಡುತ್ತಿದ್ದಾರೆ. ಹೀಗಾಗಿ ಕೂದಲನ್ನು ಕತ್ತರಿಸಿಕೊಳ್ಳುವ ಮೂಲಕ ನಮ್ಮನ್ನು ನಾವು ಕುರೂಪಗೊಳಿಸಿಕೊಳ್ಳುತ್ತಿದ್ದೇವೆ’ ಎಂಬುದಾಗಿ ಹೇಳುತ್ತಿದ್ದಾರೆ ಅಲ್ಲಿಯ ಮಹಿಳೆಯರು.

ಹಳ್ಳಿಯೊಂದರಲ್ಲಿ ಇಬ್ಬರು ಯುವತಿಯರನ್ನು ರಷ್ಯಾ ಸೈನಿಕರು ರೇಪ್​ ಮಾಡಿದ್ದಾರೆ. ಅವರಿಬ್ಬರೂ ಸಹೋದರಿಯರಾಗಿದ್ದು ಒಬ್ಬಳಿಗೆ 15 ವರ್ಷ, ಮತ್ತೊಬ್ಬಾಕೆಗೆ 16 ವರ್ಷ. ಇವರ ಕೂದಲನ್ನು ಹಿಡಿದು ಎಳೆದುಕೊಂಡು ಹೋಗಿ, ಬೇಸ್​ಮೆಂಟ್​ಗೆ ಕರೆದುಕೊಂಡು ಹೋಗಿ ದೌರ್ಜನ್ಯ ಎಸಗಿದ್ದಾರೆ. ಇದನ್ನೆಲ್ಲ ನೋಡಿ ಉಳಿದ ಯುವತಿಯರು ಹೆದರಿಹೋಗಿದ್ದಾರೆ. ಹಾಗಾಗಿ ತಮ್ಮ ಕೂದಲನ್ನು ಅತ್ಯಂತ ಚಿಕ್ಕದಾಗಿ ಕಟ್ ಮಾಡಿಕೊಳ್ಳುತ್ತಿದ್ದಾರೆ.

Leave A Reply