ಇದೆಂಥಾ ದಾಂಪತ್ಯ ? ಮದುವೆಯಾಗಿ 41 ವರ್ಷಗಳಲ್ಲಿ ಕೋರ್ಟ್ ಗೆ ಪರಸ್ಪರ 60 ಕೇಸು ಹಾಕಿಕೊಂಡು ಕಾಲು ಕೆರೆದು ಜಗಳಕ್ಕೆ ನಿಂತುಕೊಂಡ ದಂಪತಿ | ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎನ್.ವಿ. ರಮಣ ಚಕಿತ

ಪತಿ-ಪತ್ನಿ ನಡುವಣ ಜಗಳ ಉಂಡು ಮಲಗುವ ತನಕ ಮಾತ್ರ ಅಲ್ಲ. ಅದು ಉಂಡಾಗ, ಮಲಗಿದಾಗ, ಎಚ್ಚರಿಸಿದಾಗ, ಎದ್ದಾಗ, ನಡೆದಾಗ, ಕೂತಾಗ ಮಾತಾಡಿದಾಗ…. ಅದು ನಿರಂತರ ಅಂತ ಈ ಇಬ್ಬರು ಆದರ್ಶ ದಂಪತಿಗಳು ಪ್ರೂವ್ ಮಾಡಿದ್ದಾರೆ. ದಾಂಪತ್ಯ ಜಗಳದಲ್ಲಿ ಖತಮ್ ಆಗಿದೆ.

ಇಂತಹ ಜಟಾಪಟಿ ಪ್ರಕರಣವೊಂದಕ್ಕೆ ಖುದ್ದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎನ್.ವಿ. ರಮಣ ಸಾಕ್ಷಿಯಾಗಿದ್ದು ಅವರನ್ನೇ ಆಶ್ಚರ್ಯಚಕಿತಗೊಳಿಸಿದೆ. ಈ ದಂಪತಿ ಮದುವೆಯಾಗಿ 41 ವರ್ಷಗಳಾಗಿವೆ. ನಂತರ ಪರಸ್ಪರ ದೂರ ಆಗಿ 11 ವರ್ಷ ಮುಗಿದೇ ಹೋಗಿದೆ. ಆದರೂ ಜಗಳ ನಿಂತಿಲ್ಲ. ಈ ಅವಧಿಯೂ ಸೇರಿದಂತೆ ಒಟ್ಟು 41 ವರ್ಷಗಳಲ್ಲಿ ಪರಸ್ಪರರ ವಿರುದ್ಧ ಒಟ್ಟು 60 ಪ್ರಕರಣಗಳನ್ನು ದಾಖಲಿಸಿದ್ದಾರೆ.


Ad Widget

Ad Widget

Ad Widget

ಇವರ ವೈವಾಹಿಕ ಕಲಹದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಮುಖ್ಯ ನ್ಯಾಯಮೂರ್ತಿಗಳು, ಕೆಲವರು ಯಾವಾಗಲೂ ನ್ಯಾಯಾಲಯದಲ್ಲಿ ಇರಲು ಬಯಸುತ್ತಾರೆ, ಕೋರ್ಟ್ ನೋಡದೇ ಇದ್ರೆ ಅವರಿಗೆ ನಿದ್ದೆಯೇ ಬರುವುದಿಲ್ಲ ಎಂದರು. ವಿವಾದವನ್ನು ಇತ್ಯರ್ಥಗೊಳಿಸಲು ಮಧ್ಯಸ್ಥಿಕೆಯ ಮೊರೆ ಹೋಗುವಂತೆ ದಂಪತಿಗಳಿಗೆ ನ್ಯಾಯಪೀಠ ಸಲಹೆ ನೀಡಿದೆ.
ಒಟ್ಟು 60 ಕೇಸುಗಳ ಹೋರಾಟಕ್ಕಾಗಿ ನೂರಾರು ಬಾರಿ ದಂಪತಿ ಕೋರ್ಟ್ ಗೆ ಬಂದಿರೋದನ್ನು ನೋಡಿ ನ್ಯಾಯಮೂರ್ತಿ ಹಿಮಾ ಕೊಹ್ಲಿ ಕೂಡ ಆಶ್ಚರ್ಯ ವ್ಯಕ್ತಪಡಿಸಿದ್ರು. ಈ ದಂಪತಿ ನಡುವಣ ಪ್ರಕರಣಗಳು ವಿಚಾರಣಾ ನ್ಯಾಯಾಲಯ ಮತ್ತು ಹೈಕೋರ್ಟ್‌ನಲ್ಲಿವೆ. ಈಗಾಗಲೇ ಗಂಡ, ಹೆಂಡತಿ ದೂರವಾಗಿದ್ದಾರೆ. ಅಲ್ಲಿಂದ ಬೇರೆ ತನ್ನ ಮಾವ ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಪತ್ನಿ ಆರೋಪಿಸಿದ್ದಳು. ಈಗ ಇಬ್ಬರೂ ಮಧ್ಯಸ್ಥಿಕೆ ಮೂಲಕ ಜಗಳ ಬಗೆಹರಿಸಿಕೊಳ್ಳಲು ಆಸಕ್ತಿ ತೋರಿದ್ದಾರೆ.

ಕೊನೆಯ ಬಾರಿಗೆ ಪೂರ್ತಿ ಇತ್ಯರ್ಥಕ್ಕೆ ನೀವು ಸಿದ್ಧರಿದ್ದೀರಾ ಎಂದು ಸುಪ್ರೀಂ ಕೋರ್ಟ್ ಪತ್ನಿಯ ಪರ ವಕೀಲರನ್ನು ಕೇಳಿದೆ. ಆಕೆಯ ವಕೀಲರು ಪ್ರತಿಕ್ರಿಯಿಸಿ, ಮಧ್ಯಸ್ಥಿಕೆಗೆ ಹೋಗಲು ಸಿದ್ಧರಿದ್ದಾರೆ, ಆದರೆ ಹೈಕೋರ್ಟ್ ವಿಚಾರಣೆಗೆ ತಡೆ ನೀಡಬಾರದು ಎಂದು ಹೇಳಿದ್ದಾರೆ. ಆದು ಸಾಧ್ಯವಿಲ್ಲ, ನೀವು ಹೋರಾಟದಲ್ಲಿ ತುಂಬಾ ಆಸಕ್ತಿ ಹೊಂದಿರುವಂತೆ ತೋರುತ್ತಿದೆ. ಎರಡನ್ನೂ ಮುಂದುವರಿಸಲು ಸಾಧ್ಯವಿಲ್ಲ ಅಂತಾ ಖಂಡ ತುಂಡವಾಗಿ ನ್ಯಾಯಪೀಠ ಹೇಳಿದೆ.

Leave a Reply

error: Content is protected !!
Scroll to Top
%d bloggers like this: