ಈ ದೇಶದಲ್ಲಿ ದಂಪತಿಗಳು ಒಟ್ಟಿಗೆ ಮಲಗುವಂತಿಲ್ಲ ಚುಂಬಿಸಿಕೊಳ್ಳುವಂತಿಲ್ಲ, ಪರಸ್ಪರ ಅಪ್ಪಿಕೊಳ್ಳುವಂತೆಯೂ ಇಲ್ಲ!; ಯಾಕೆ ಈ ವಿಚಿತ್ರ ನಿಯಮ ?

ದಂಪತಿಗಳು ಒಟ್ಟಿಗೆ ಮಲಗುವಂತಿಲ್ಲ, ಪ್ರತ್ಯೇಕವಾಗಿ ಮಲಗಬೇಕು. ಚುಂಬಿಸಿಕೊಳ್ಳುವಂತಿಲ್ಲ, ಪರಸ್ಪರ ಅಪ್ಪಿಕೊಳ್ಳಲೂ ಅವಕಾಶವಿಲ್ಲ ಎಂಬ ನಿಯಮ ಬಂದರೆ …? ಮನಸ್ಥಿತಿ, ಮನೆಸ್ಥಿತಿ , ಪರಿಸ್ಥಿತಿ ಹೇಗಾಗುತ್ತದೆ ? ಊಹಿಸಲು ಅಸಾಧ್ಯ ಅಲ್ಲವೆ ? ಈ ಪರಿಸ್ಥಿತಿ ಈ ದೇಶದ ಪ್ರದೇಶಕ್ಕೆ ಬಂದಿದೆ. ಇಲ್ಲಿದೆ ನೋಡಿ ಜೀವ ಉಳಿಸಿಕೊಳ್ಳಲು ದೇಹದ ವಾಂಛೆ ಬಿಡುವ ವಿಚಿತ್ರ ನಿಯಮ

ಚೀನಾದ ಮಧ್ಯ ಕರಾವಳಿ ತೀರದ ಅತ್ಯಂತ ದೊಡ್ಡ ನಗರ ಶಾಂಘೈನಲ್ಲಿ ಕೊವಿಡ್​ 19 ನಿಂದ ಜನರು ಪರದಾಡುತ್ತಿದ್ದಾರೆ. ಜನರು ಮನೆಬಿಟ್ಟು ಹೊರಗೆ ಕಾಲಿಡುವಂತಿಲ್ಲ. ಜೀವನ ನಡೆಸುವುದೇ ಬಹುದೊಡ್ಡ ಸಮಸ್ಯೆಯಾಗಿದೆ. ಎಲ್ಲಾ ದೇಶಕ್ಕೆ ಕೊರೊನಾ ಹಂಚಿದ ಚೀನಾ ಇಂದು ಕರ್ಮ ಬ್ಯಾಕ್ ಆಗಿ ಪರದಾಡುತ್ತಿದೆ. ಮನೆಯೊಳಗೆ ಬಂಧಿಯಾಗಿ ಇರೋಣ ಎಂದರೆ ಮನೆಯಲ್ಲಿ ಇರುಲೂ ನೆಮ್ಮದಿ ಇಲ್ಲದಂತಾಗಿದೆ ಶಾಂಘೈ ಜನರಿಗೆ.

ಶಾಂಘೈನಲ್ಲಿ ಸುಮಾರು 26 ಮಿಲಿಯನ್​ ಜನರಿದ್ದಾರೆ. ಮನೆಯೊಳಗೂ ಎಲ್ಲರಿದ್ದು ಏಕಾಂಗಿಯಾಗಿ ಬದುಕುವ ಘನಘೋರ ಜೀವನಕ್ಕೆ ಅಲ್ಲಿಯ ಜನ ಬಂದು ಮುಟ್ಟಿದ್ದಾರೆ. ಕೊರೊನಾ ನಿಯಂತ್ರಣಕ್ಕೆ ರಸ್ತೆಯಲ್ಲಿ ಆರೋಗ್ಯ ಕಾರ್ಯಕರ್ತರು ಮೈಕ್ ಹಿಡಿದು ವಿಚಿತ್ರ ಹಾಗೂ ಕಠಿಣ, ಉಹಿಸಲೂ ಅಸಾಧ್ಯವಾದ ನಿಯಮಗಳನ್ನು ಹೇಳುತ್ತಿದ್ದಾರೆ. ಇವತ್ತು ರಾತ್ರಿಯಿಂದ ದಂಪತಿ ಒಟ್ಟಿಗೇ ಮಲಗುವಂತಿಲ್ಲ, ಪ್ರತ್ಯೇಕವಾಗಿ ಮಲಗಬೇಕು. ಚುಂಬಿಸಿಕೊಳ್ಳುವಂತಿಲ್ಲ, ಪರಸ್ಪರ ಅಪ್ಪಿಕೊಳ್ಳಲೂ ಅವಕಾಶವಿಲ್ಲ. ಪ್ರತ್ಯೇಕವಾಗಿಯೇ ಊಟ-ತಿಂಡಿ ಮಾಡಬೇಕು ಎಂದು ಆಕೆ ಹೇಳಿದ್ದಾಳೆ. ವಿಡಿಯೋವನ್ನು ಶೇರ್ ಮಾಡಿಕೊಂಡಿರುವ ಟ್ವಿಟರ್​ ಬಳಕೆದಾರರು ನಿಬ್ಬೆರಗಾಗಿದ್ದಾರೆ.

ದಿನನಿತ್ಯ ಬೇಕಾಗುವ ಅಗತ್ಯ ವಸ್ತುಗಳ ಖರೀದಿ ಸಾಧ್ಯವಾಗುತ್ತಿಲ್ಲ, ಆಹಾರ-ಪದಾರ್ಥಗಳ ಕೊಳ್ಳಲೂ ಆಗುತ್ತಿಲ್ಲ. ಸಂದಿಗ್ಧ ಪರಿಸ್ಥಿತಿ ಉಂಟಾಗಿದೆ. ಅಗತ್ಯವಸ್ತುಗಳ ಪೂರೈಕೆ ಸರಿಯಾಗಿ ಆಗದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ತಮ್ಮ ಅಪಾರ್ಟ್​ಮೆಂಟ್​ನಲ್ಲಿ ಬಾಲ್ಕನಿಗೆ ಹೋಗಿ ಹಾಡುತ್ತ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದರು. ಶಾಂಘೈನಲ್ಲೀಗ ಜನರು ಕೊರೊನಾ ರೋಗದ ಹೋರಾಟದಲ್ಲಿದ್ದಾರೆ!

Leave A Reply