ಕರ್ತವ್ಯ ನಿರತ ಉಪತಹಶೀಲ್ದಾರ್ ಹೃದಯಾಘಾತದಿಂದ‌ ನಿಧನ

ಶಿವಮೊಗ್ಗ : ಸೊರಬ ತಾಲೂಕಿನ ಆನವಟ್ಟಿ ನಾಡಕಚೇರಿಯ ಕರ್ತವ್ಯ ನಿರತ ಉಪತಹಶೀಲ್ದಾರ್ ಚೆನ್ನಕೇಶವ (46) ಹೃದಯಾಘಾತದಿಂದ ಬುಧವಾರ ಮೃತಪಟ್ಟಿದ್ದಾರೆ.

 

ಬುಧವಾರ ಮಧ್ಯಾಹ್ನ ಕರ್ತವ್ಯ ನಿರತ ವೇಳೆಯಲ್ಲಿ ಎದೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಆನವಟ್ಟಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.

ಸಾಗರದ ಶ್ರೀಧರ ನಗರ ನಿವಾಸಿಯಾಗಿದ್ದ ಅವರಿಗೆ ಪತ್ನಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

1998ರಲ್ಲಿ ಗ್ರಾಮ ಲೆಕ್ಕಿಗರಾಗಿ ಕಂದಾಯ ಇಲಾಖೆಗೆ ಸೇರ್ಪಡೆಯಾಗಿದ್ದ ಅವರು ವಿವಿಧ ಹಂತದ ಪದೋನ್ನತಿ ಹೊಂದಿ ಉಪತಹಶೀಲ್ದಾರರಾಗಿದ್ದರು. ಸೊರಬ ಪಟ್ಟಣದ ತಾಲೂಕು ಕಚೇರಿಯಲ್ಲಿ ಶಿಸ್ತೆದಾರರಾಗಿ ಸಹ ಕರ್ತವ್ಯ ಸಲ್ಲಿಸಿದ್ದರು.

Leave A Reply

Your email address will not be published.