ಪರೀಕ್ಷೆಯಲ್ಲಿ ನಕಲು ಮಾಡಲು ವಿಚಿತ್ರ ಉಪಾಯ ಮಾಡಿದ ವಿದ್ಯಾರ್ಥಿ

ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ನಕಲು ಮಾಡಲು ಹಲವು ವಿಧಾನಗಳನ್ನು ಅನುಸರಿಸುತ್ತಾರೆ. ಹಾಗೆ ಇಲ್ಲೊಬ್ಬ ನಕಲು ಮಾಡಲು ಮಾಡಿದ ವಿಧಾನಕ್ಕೆ ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದಾರೆ.

ಭೂತಾನ್ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಪರಿವೀಕ್ಷಣಾ ತಂಡವು ಇಲ್ಲಿಗೆ ಬಂದಾಗ ಓರ್ವ ವಿದ್ಯಾರ್ಥಿ ಅನುಮಾನಾಸ್ಪದ ರೀತಿಯಲ್ಲಿ ವರ್ತಿಸಿದ್ದಾನೆ. ಆತನನ್ನು ಗಮನಿಸಿದ ತಂಡ ಆತನ ಬಳಿ ಹೋಗಿ ಪೇಪರ್ ಬೋರ್ಡ್ ನೋಡಿದಾಗ ಬೆಚ್ಚಿಬಿದ್ದಿದ್ದಾರೆ. ಅಧಿಕಾರಿಗಳು ಈ ಬಗ್ಗೆ ಕ್ರಮ ವಹಿಸಿದ್ದಾರೆ.

ಪೇಪರ್ ಬೋರ್ಡ್​ನ್ನು ಕೊರೆದು ಅಲ್ಲಿ ಮೊಬೈಲ್​ ಇರಿಸಿ ಆ ಮೂಲಕ ವಿದ್ಯಾರ್ಥಿ ನಕಲು ಮಾಡುತ್ತಿದ್ದದ್ದು ಬೆಳಕಿಗೆ ಬಂದಿದೆ. ಮೊಬೈಲ್ ವಶಕ್ಕೆ ಪಡೆದು ಪರಿಶೀಲಿಸಿದಾಗ ಗ್ಯಾಲರಿಯಲ್ಲಿ ಇಂಗ್ಲಿಷ್ ವಿಷಯದ ಉತ್ತರಗಳು ಪತ್ತೆಯಾಗಿವೆ. 

ಆದರೆ ಇದನ್ನು ಯಾರು ಅನುಸರಿಸಬೇಡಿ ಓದಿ ಪರೀಕ್ಷೆಯಲ್ಲಿ ಪಾಸಾಗಿ ಎಂದು ಪರೀಕ್ಷಕರು ಹೇಳಿದ್ದಾರೆ.
ಫೇಲ್ ಅದರೆ ಮತ್ತೊಮ್ಮೆ ಪರೀಕ್ಷೆ ಬರೆಬಹುದು ಆದರೆ ನಕಲು ಮಾಡಿ ಸಿಲುಕಿ ಬಿದ್ದರೆ ವಿಧ್ಯಾರ್ಥಿ ಜೀವನವೇ ಹಾಳಾಗುತ್ತದೆ.

Leave A Reply