ಉಡುಪಿ : ಅಕ್ರಮ ಮನೆ ತೆರವು ಪ್ರಕರಣ – ಪಂಚಾಯತ್ ಕಚೇರಿ ಎದುರು ಹೈ ಡ್ರಾಮ| ನೂಕಾಟ ತಳ್ಳಾಟದಲ್ಲಿ ಹರಿದ ಮಾಜಿ ಸಚಿವ ಸೊರಕೆ ಶರ್ಟ್!!!

ಉಡುಪಿ: ಅಕ್ರಮ ಮನೆ ತೆರವು ವಿಚಾರದಲ್ಲಿ ಮಾತಿನ ಚಕಮಕಿ ನಡೆದು ಜಗಳ ತಾರಕಕ್ಕೇರಿ ಕೊನೆಗೆ ನೂಕಾಟ ತಳ್ಳಾಟದಲ್ಲಿ ಕಾಪು ಕ್ಷೇತ್ರದ ಮಾಜಿ ಶಾಸಕರ ಶರ್ಟು ಹರಿದ ಘಟನೆ ಶಿರ್ವ ಗ್ರಾಮ ಪಂಚಾಯತ್ ಕಚೇರಿ ಆವರಣದಲ್ಲಿ ಇಂದು ನಡೆದಿದೆ.

ಪರಿಶಿಷ್ಟ ಜಾತಿಯವರಿಗೆ ಸೇರಿದ ವ್ಯಕ್ತಿಯ ಮನೆಯನ್ನು ಗ್ರಾಮಪಂಚಾಯತ್ ಅಧ್ಯಕ್ಷ ಹಾಗೂ ಪಿಡಿಓ ಸಮ್ಮುಖದಲ್ಲಿ ತೆರವುಗೊಳಿಸಲಾಗಿತ್ತು.
ಮನೆ ತೆರವುಗೊಳಿಸಿದ್ದನ್ನು ಖಂಡಿಸಿ ಇಂದು ಬೆಳಗ್ಗೆ ಮಾಜಿ ಸಚಿವ ಸೊರಕೆ ನೇತೃತ್ವದಲ್ಲಿ ಪಂಚಾಯತ್ ಆವರಣದಲ್ಲಿ ಪ್ರತಿಭಟನೆ ನಡೆಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಪಿಡಿಒ ಜೊತೆ ಮಾತಿನ ಚಕಮಕಿ ನಡೆದು ನೂಕಾಟ ತಳ್ಳಾಟ ನಡೆಯುವ ವೇಳೆ ಮಾಜಿ ಸಚಿವರ ಶರ್ಟ್ ಹರಿದಿದೆ. ಸುದ್ದಿ ತಿಳಿದ ತಕ್ಷಣ ಪ್ರತಿಭಟನೆ ನಡೆಯುತ್ತಿದ್ದ ಜಾಗಕ್ಕೆ ಬಿಜೆಪಿ ಕಾರ್ಯಕರ್ತರು ಬಂದಿದ್ದಾರೆ.

ಈ ಸಂದರ್ಭದಲ್ಲಿ ಮತ್ತೆ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಜೋರಾಗಿ ನಡೆದಿದೆ.

ಈ ಕೃತ್ಯದಲ್ಲಿ ಬಿಜೆಪಿ ಕುಮ್ಮಕ್ಕಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಬಡವರಿಗೆ ಹಕ್ಕು ಪತ್ರ ಹಾಗೂ ಮನೆ ನೀಡಲು ಮಾಜಿ ಸಚಿವ ಸೊರಕೆ ಈ ಸಂದರ್ಭದಲ್ಲಿ ಆಗ್ರಹಿಸಿದ್ದಾರೆ.

Leave A Reply

Your email address will not be published.