ಆತ್ಮಗಳ ಓಡಾಟವನ್ನು ಕೂಡ ಪತ್ತೆ ಮಾಡುತ್ತದೆಯಂತೆ ಈ ಕಾರು !! | ಸ್ವಯಂ ಚಾಲನಾ ಸಾಮರ್ಥ್ಯ ಹೊಂದಿರುವ ಈ ಸ್ಪೆಷಲ್ ಕಾರ್ ನ ಕುರಿತು ಇಂಟರೆಸ್ಟಿಂಗ್ ಮಾಹಿತಿ ನಿಮಗಾಗಿ

0 16

ಟೆಕ್ನಾಲಜಿ ಕಾಲವಾಗಿರುವುದರಿಂದ ಪ್ರತಿಯೊಂದು ಹೊಸ ವಸ್ತುಗಳಲ್ಲಿ,ವಾಹನಗಳಲ್ಲಿ ವಿಭಿನ್ನ ರೀತಿಯ ವೈಶಿಷ್ಟ್ಯಗಳಿರುತ್ತದೆ.ಇಂದಿನ ಮಾರುಕಟ್ಟೆಗೆ ವಿನೂತನವಾದ ಕಾರುಗಳು ಬರುತ್ತಲೇ ಇದ್ದು,ಟೆಸ್ಲಾ ಪ್ರಸ್ತುತ ಅತ್ಯಂತ ಜನಪ್ರಿಯ ಹಾಗೂ ಹೈ ಟೆಕ್​ ಇವಿ ಬ್ರ್ಯಾಂಡ್​ಗಳಲ್ಲಿ ಒಂದಾಗಿದೆ.ಟೆಸ್ಲಾಗೆ ಕೆಲವು ವೈಶಿಷ್ಟ್ಯಗಳಿದ್ದು, ಅದರಲ್ಲೂ ಇದು ಆತ್ಮಗಳ ಓಡಾಟವನ್ನು ಪತ್ತೆ ಮಾಡುವ ಸಾಮರ್ಥ್ಯ ಹೊಂದಿದೆ ಎಂಬುದು ಅನೇಕರನ್ನು ಬೆಚ್ಚಿ ಬೀಳಿಸಿದೆ.

ಸ್ವಯಂ ಚಾಲನಾ ಸಾಮರ್ಥ್ಯವನ್ನು ಹೊಂದಿರುವ ಟೆಸ್ಲಾ ಕಾರುಗಳು ಆಟೋ ಮೊಬೈಲ್ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನೇ ಮಾಡಿದ್ದು,ಟೆಸ್ಲಾ ಆರನೇ ಇಂದ್ರಿಯವನ್ನು ಹೊಂದಿದೆ ಹಾಗೂ ಇದು ಆತ್ಮಗಳನ್ನು ಗುರುತಿಸುವ ಸಾಮರ್ಥ್ಯವನ್ನು ಹೊಂದಿದೆ.ಇದು ನಿಜವಾಗಿಯೂ ಹೌದೇ ಎಂಬುದನ್ನು ಈ ವಿಡಿಯೋ ಮೂಲಕ ನೋಡಬಹುದು.

ಹೌದು.ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಕಾರು ಸ್ಮಶಾನದ ಬಳಿ ನಿಲ್ಲುತ್ತದೆ. ಮೊದಲು ಕಾರಿನ ಕ್ಯಾಮರಾವು ಎಲ್ಲಾ ಸಮಾಧಿಗಳತ್ತ ಫೋಕಸ್​ ಮಾಡಿದೆ.ಆಗ ಪರದೆಯ ಮೇಲೆ ಸಾಕಷ್ಟು ಜನರು ಇರುವುದು ಕಾಣುತ್ತದೆ. ಆದರೆ ಅಸಲಿಗೆ ಸಮಾಧಿ ಇರುವಲ್ಲಿ ಯಾವ ವ್ಯಕ್ತಿಯೂ ಕಾಣಿಸುವುದಿಲ್ಲ.ಎಲ್ಲಾ ಆತ್ಮಗಳು ತಮ್ಮಷ್ಟಕ್ಕೆ ತಾವೇ ತಿರುಗುತ್ತಾ ಜಾಗವನ್ನು ಬದಲಾಯಿಸುವುದನ್ನು ಗಮನಿಸಬಹುದಾಗಿದೆ.

ಇದು ಟೆಸ್ಲಾ ಕಾರು ಚಾಲಕರಿಗೆ ಆಶ್ಚರ್ಯವಾಗಿದ್ದು, ಆ ಕ್ಯಾಲಿಫೋರ್ನಿಯಾದ ವೆಸ್ಟ್ ಸೈಡ್ ಸ್ಮಶಾನ, ಟಾಫ್ಟ್ ಸ್ಥಳ ನಿರ್ಜನವಾಗಿದ್ದರಿಂದ ಕಾರಿನಲ್ಲಿದ್ದವರು ಗಾಬರಿಗೊಳಗಾಗಿದ್ದಾರೆ.ಇದು ವೀಕ್ಷಕರನ್ನೂ ದಿಗ್ಬ್ರಮೆ ಗೊಳಿಸುವುದರಲ್ಲಿ ಅನುಮಾನವೇ ಇಲ್ಲ.

Leave A Reply