ಜಿಮ್ ನಲ್ಲಿ ಮಂಗಳೂರು ಯುವತಿ ಸಾವು ಪ್ರಕರಣ : ಪೋಸ್ಟ್ ಮಾರ್ಟಂ ವರದಿಯಲ್ಲಿ ಸಾವಿನ ರಹಸ್ಯ ಬಯಲು!!!

ಬೆಂಗಳೂರು: ನಗರದ ಬೈಯಪ್ಪನಹಳ್ಳಿ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದ ಸಂದರ್ಭದಲ್ಲಿ ಯುವತಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ, ಪೋಸ್ಟ್ ಮಾರ್ಟಮ್ ವರದಿ ಬಂದಿದ್ದು ಸಾವಿನ ಕಾರಣ ಬಹಿರಂಗವಾಗಿದೆ.

ಸಿವಿ ರಾಮನ್ ಆಸ್ಪತ್ರೆ ವೈದ್ಯರಿಂದ ಪೋಸ್ಟ್ ಮಾರ್ಟಂ ವರದಿ ನೀಡಲಾಗಿದೆ. ಅದರಂತೆ, ಕೋಮಾದ ಪರಿಣಾಮವಾಗಿ ಸಾವು ಸಂಭವಿಸಿದೆ. ಮೆದುಳಿನಲ್ಲಿ ಒತ್ತಡ ಉಂಟಾಗಿ ರಕ್ತನಾಳ ಛಿದ್ರಗೊಂಡ ಪರಿಣಾಮವಾಗಿ ಸೆರೆಬ್ರಲ್ ಹೆಮರೇಜ್ ಆಗಿದೆ. ಅದರಿಂದ ಯುವತಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಮಾರ್ಚ್ 26 ರಂದು
ಮಂಗಳೂರು ಮೂಲದ ವಿನಯಾ ಕುಮಾರಿ (35) ಜಿಮ್‌ನಲ್ಲಿ ವರ್ಕೌಟ್ ಮಾಡುವ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದರು. ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ ಯುವತಿ ಸಾವನ್ನಪ್ಪಿದ್ದ ಬಗ್ಗೆ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಹಾಗೂ ಈಗ ಪೋಸ್ಟ್ ಮಾರ್ಟಂ ವರದಿ ಬಂದಿದ್ದು ಸಾವಿಗೆ ಕಾರಣ ತಿಳಿದು ಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೂರ್ವ ವಿಭಾಗ ಡಿಸಿಪಿ ಡಾ.ಭೀಮಾಶಂಕರ್ ಗುಳೇದ ಮಾತನಾಡಿದ್ದು, ಜಿಮ್ ನಲ್ಲಿ ಭಾರವಾದ ವಸ್ತು ಎತ್ತುವ ಮುನ್ನ ಎಚ್ಚರ ವಹಿಸಿ ಎಂದು ಸಲಹೆ ನೀಡಿದ್ದಾರೆ.

Leave A Reply

Your email address will not be published.