64ನೇ ಗ್ರ್ಯಾಮಿ ಅವಾರ್ಡ್​ ಮುಡಿಗೇರಿಸಿಕೊಂಡ ಬೆಂಗಳೂರು ಮೂಲದ ರಿಕ್ಕಿ ಕೇಜ್ !! | ಎರಡನೇ ಬಾರಿಗೆ ಪ್ರಶಸ್ತಿ ಸ್ವೀಕರಿಸಲು “ನಮಸ್ತೆ” ಎನ್ನುತ್ತಾ ವೇದಿಕೆಯೇರಿದ ಮ್ಯೂಸಿಕ್ ‌ಕಂಪೋಸರ್

64ನೇ ಗ್ರ್ಯಾಮಿ ಅವಾರ್ಡ್​ ಕಾರ್ಯಕ್ರಮವು ಅಮೆರಿಕಾದ ಲಾಸ್​ ವೇಗಸ್​ನಲ್ಲಿ ನಡೆದಿದ್ದು, ಭಾರತದ ಮ್ಯೂಸಿಕ್​ ಕಂಪೋಸರ್​ ರಿಕ್ಕಿ ಕೇಜ್‌ಗೆ ಈ ಪ್ರಶಸ್ತಿ ದೊರೆತಿದೆ. ಬೆಂಗಳೂರಿನಲ್ಲಿ ನೆಲೆಸಿರುವ ರಿಕ್ಕಿ ಕೇಜ್‌ ಸಂಯೋಜನೆಯ ಆಲ್ಬಂಗೆ 2015ರಲ್ಲಿ ಗ್ರ್ಯಾಮಿ ಪ್ರಶಸ್ತಿ ಲಭಿಸಿತ್ತು. ಇದೀಗ ಮತ್ತೊಮ್ಮೆ ರಿಕ್ಕಿ ಗ್ರ್ಯಾಮಿ ಅಂಗಳದಲ್ಲಿ ನಗೆ ಬೀರಿದ್ದಾರೆ.

“ನಮಸ್ತೆ” ಎನ್ನುತ್ತಾ ವೇದಿಕೆ ಏರಿದ ರಿಕ್ಕಿ ಭಾರತೀಯ ಸಂಸ್ಕೃತಿಯನ್ನು ವಿದೇಶದಲ್ಲೂ ಪಸರಿಸಿದರು ಎನ್ನಬಹುದು. ಇನ್ನು ಈ ಹಿಂದೆ 2015ರಲ್ಲಿ ‘ವಿಂಡ್ಸ್​ ಆಫ್​ ಸಂಸಾರ’ ಎಂಬ ಆಲ್ಬಂಗೆ ಗ್ರ್ಯಾಮಿ ಅವಾರ್ಡ್ ದೊರೆತಿತ್ತು. ಈ ಬಾರಿ ‘ಡಿವೈನ್​ ಟೈಡ್ಸ್​’ ಎಂಬ ಆಲ್ಬಂಗೆ ಸ್ಟೀವರ್ಟ್‌ ಕೋಪ್‌ಲ್ಯಾಂಡ್‌ ಮತ್ತು ರಿಕ್ಕಿ ಕೇಜ್‌ ಇಬ್ಬರೂ ಗ್ರ್ಯಾಮಿ ಪ್ರಶಸ್ತಿ ಪಡೆದಿದ್ದಾರೆ.

ಇನ್ನು ಜಾನ್ ಬ್ಯಾಟಿಸ್ಟ್ ಸಂಗೀತ ವಿಭಾಗದಲ್ಲಿ ಬರೋಬ್ಬರಿ 5 ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅಷ್ಟೇ ಅಲ್ಲದೆ, ಅಮೆರಿಕದ ಸಿಂಗರ್ ಒಲಿವಿಯಾ ರೋಡ್ರಿಗೊ ಅವರು ಸಹ ಈ ಬಾರಿಯ ಗ್ರ್ಯಾಮಿ ಅವಾರ್ಡ್​ ಕಾರ್ಯಕ್ರಮದಲ್ಲಿ ಮೂರು ವಿಭಾಗಗಳಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.

Leave A Reply

Your email address will not be published.