ತಲೆ ಕೂದಲು ಬೋಳಿಸಿಕೊಂಡ ಫೋಟೋ ಶೇರ್ ಮಾಡಿದ 8 ತಿಂಗಳ ಗರ್ಭಿಣಿ ನಟಿ ಸಂಜನಾ !! | ಈ ಸಮಯದಲ್ಲಿ ಕೇಶ ಮುಂಡನ ಮಾಡಿಸಿಕೊಳ್ಳಲು ಕಾರಣ !??

ನಟಿ ಸಂಜನಾ ಗಲ್ರಾನಿ ಡ್ರಗ್ಸ್ ಸೇವನೆ ಆರೋಪದಲ್ಲಿ ಜೈಲು ಸೇರಿ ಭಾರಿ ಸುದ್ದಿಯಾಗಿದ್ದರು. ನಂತರ ಮುಸ್ಲಿಂ ವೈದ್ಯನೊಂದಿಗೆ ಮದುವೆ ಆದ ವಿಚಾರದಲ್ಲಿ ಹಲವು ಬಾರಿ ಟ್ರೋಲಿಗರ ಆಹಾರವಾಗಿದ್ದೂ ಉಂಟು. ಪ್ರಸ್ತುತ ಇದೀಗ 8 ತಿಂಗಳ ಗರ್ಭಿಣಿಯಾಗಿರುವ ಆಕೆ ತಮ್ಮ ತಾಯ್ತನದ ಖುಷಿಯನ್ನು ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ಶೇರ್ ಮಾಡಿಕೊಳ್ಳುತ್ತಿದ್ದರು. ಆದರೆ ಭಾನುವಾರ ತಮ್ಮ ತಲೆಕೂದಲು ಬೋಳಿಸಿಕೊಂಡ ಫೋಟೋ ಶೇರ್ ಮಾಡಿ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ.

ಇನ್‍ಸ್ಟಾದಲ್ಲಿ ಫೋಟೋ ಶೇರ್ ಮಾಡಿರುವ ಸಂಜನಾ, ಸೌಂದರ್ಯವು ನೋಡುವವರ ದೃಷ್ಟಿಯಲ್ಲಿದೆ. ಅದಕ್ಕಾಗಿಯೇ ನಾನು ನನ್ನ ಕೂದಲನ್ನು ತ್ಯಾಗ ಮಾಡಿದ್ದೇನೆ. ನಾನು ದೇವರಿಗೆ ಯಾವ ರೀತಿ ನಮನ ಸಲ್ಲಿಸಬೇಕು ಎಂದು ನನಗೆ ತಿಳಿಯುತ್ತಿಲ್ಲ. ಹಲವಾರು ಕಷ್ಟಗಳನ್ನು ದಾಟಿದ ನಂತರ, ನನ್ನ ಜೀವನವು ಮತ್ತೊಮ್ಮೆ ಸುಂದರವಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.


Ad Widget

Ad Widget

Ad Widget

ನನ್ನ ಜೀವನದಲ್ಲಿ ತಾಯ್ತನದ ಹಂತ ಕೊಟ್ಟಿದ್ದಕ್ಕೆ ನಾನು ದೇವರಿಗೆ ಧನ್ಯವಾದ ಹೇಗೆ ಹೇಳಬೇಕು ಎಂದು ತಿಳಿಯುತ್ತಿಲ್ಲ. ನನ್ನ ಮಗು ನನ್ನ ಜೀವನದಲ್ಲಿ ಶೀಘ್ರದಲ್ಲೇ ಬರಲಿ ಎಂದು ನಾನು ನನ್ನ ಕೃತಜ್ಞತೆಯನ್ನು ಈ ರೀತಿ ವ್ಯಕ್ತಪಡಿಸಲು ಬಯಸುತ್ತೇನೆ. ಜೈ ಶ್ರೀ ಕೃಷ್ಣ, ಅಹಂ ಬ್ರಹ್ಮಾಸ್ಮಿ ಎಂದು ತಮ್ಮ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.

ಇತ್ತೀಚಿನ ಸಂದರ್ಶನದಲ್ಲಿ ಸಂಜನಾ ಲಾಕ್‍ಡೌನ್‍ನಿಂದ ತಾವು ಕಲಿತ ಪಾಠವನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡಿಕೊಂಡಿದ್ದು, ಕಳೆದ ಎರಡು ವರ್ಷಗಳಲ್ಲಿ ಯಾವುದು ನಿಜ ಎಂಬುದನ್ನು ತಿಳಿದುಕೊಳ್ಳುವ ಪ್ರಬುದ್ಧತೆ ನನಗೆ ಕೋವಿಡ್ ಸಮಯದಲ್ಲಿ ಬಂದಿದೆ ಎಂದು ವಿವರಿಸಿದ್ದರು. ಇದೀಗ ಕೂದಲು ಬೋಳಿಸಿಕೊಂಡು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ ‘ಗಂಡ-ಹೆಂಡತಿ’ ನಟಿ.

Leave a Reply

error: Content is protected !!
Scroll to Top
%d bloggers like this: