ಶಾಸ್ತ್ರೋಕ್ತವಾಗಿ ‘ಮೇಕೆ’ ಗೆ ತಾಳಿ ಕಟ್ಟಿದ ಯುವಕ !

0 9

ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಎಂಬ ಒಂದು ಮಾತಿದೆ. ಹಾಗಾಗಿಯೇ ಜೀವನದಲ್ಲಿ ಜನ ಒಂದು ಮನೆ ಕಟ್ಟಲು ಹಾಗೂ ಮದುವೆ ಆಗಲು ಪಡಬಾರದ ಕಷ್ಟ ಪಡುತ್ತಾರೆ. ಈಗ ನಾವಿಲ್ಲಿ ಹೇಳಲಿಕ್ಕೆ ಹೊರಟಿರೋ ವಿಷಯ ಮದುವೆ. ಇದು ಅಂತಿಂಥ ಮದುವೆಯಲ್ಲ. ವಿಚಿತ್ರ ಮದುವೆ! ಬನ್ನಿ ಏನಿದು ತಿಳಿಯೋಣ.

ಇದು ಯಾವುದೇ ಸಿನಿಮಾ ಸ್ಟೋರಿಯಲ್ಲ. ನಿಜ ಜೀವನದ ಘಟನೆ. ಯುವಕನೊಬ್ಬ ಶಾಸ್ತ್ರೋಕ್ತವಾಗಿ ಮದುವೆಯಾದ ಸ್ಟೋರಿ.

ಅಂದಹಾಗೆ ಇಲ್ಲಿ ನಡೆದಿರುವುದು ಗಂಡು ಹೆಣ್ಣಿನ ನಡುವೆ ನಡೆದ ಮದುವೆ ಅಲ್ಲ. ಗಂಡು ಮತ್ತು ಮೇಕೆಯ ಮದುವೆ. ಅಷ್ಟಕ್ಕೂ ಮೇಕೆ ಜತೆ ಆತ ಮದುವೆ ಆಗಲು ಕಾರಣ ಒಬ್ಬ ಜ್ಯೋತಿಷಿ!

ಆಂಧ್ರದ ಕೃಷ್ಣಾ ಜಿಲ್ಲೆಯ ನೂಜಿವೀಡು ಮೂಲದ ಯುವಕನೊಬ್ಬ ಮದುವೆಯಾಗಲು ಕನ್ಯೆ ಹುಡುಕುತ್ತಿದ್ದ ಸಂದರ್ಭದಲ್ಲಿ, ಇದೇ ವೇಳೆ ಮನೆಯ ಹಿರಿಯರು ಯುವಕನ ಮದು ಬಗ್ಗೆ ಜ್ಯೋತಿಷಿ ಬಳಿ ಪ್ರಸ್ತಾಪಿಸಿದ್ದರು. ಯುವಕನ ಜಾತಕದಲ್ಲಿ ಎರಡು ಮದುವೆ ಯೋಗ ಇದೆ. ಮೊದಲ ಮದುವೆ ಸಂಬಂಧ ಯಾವುದಾದರೂ ಕಾರಣದಿಂದ ಮುರಿದುಬೀಳುವ ಸಾಧ್ಯತೆ ಇದೆ. ಅನಿವಾರ್ಯವಾಗಿ 2ನೇ ಮದುವೆ ಆಗಬೇಕಾದ ಪರಿಸ್ಥಿತಿ ಬರಬಹುದು ಎಂದು ಜ್ಯೋತಿಷಿ ಹೇಳಿದ್ದಾರೆ.

ಇದರಿಂದ ಆತಂಕಗೊಂಡ ಯುವಕನ ಕುಟುಂಬಸ್ಥರು ಈ ಸಮಸ್ಯೆಗೆ ಪರಿಹಾರವೇನು ಏನು ಎಂದು ಕೇಳಿದಾಗ, ಅವನು ಚೆನ್ನಾಗಿರಬೇಕು. 2 ಮದುವೆ ಆಗುವ ಸಂದರ್ಭ ಬರಬಾರದು. ಇದಕ್ಕೆ ನೀವು ಪರಿಹಾರ ಸೂಚಿಸಿ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಜ್ಯೋತಿಷಿ, ಯುವಕನಿಗೆ ಮೇಕೆ ಜೊತೆ ಮೊದಲು ವಿವಾಹ ಮಾಡಿಸಿಬಿಡಿ. ಅಲ್ಲಿಗೆ ದೋಷ ಪರಿಹಾರವಾಗುತ್ತದೆ. ನಂತರ ಯುವಕನಿಗೆ ಕನ್ಯೆಯನ್ನು ಹುಡುಕಿ ಮದುವೆ ಮಾಡಿ ಎಂದು ಸಲಹೆ ನೀಡಿದ್ದರಂತೆ.

ಜ್ಯೋತಿಷಿ ಮಾತಿನಂತೆ ಯುಗಾದಿ ಹಬ್ಬದ ದಿನ ನೂಜಿವೀಡು ನವಗ್ರಹ ದೇವಸ್ಥಾನದಲ್ಲಿ ಸಂಪ್ರದಾಯಬದ್ಧವಾಗಿ ಯುವಕ ಮೇಕೆ ಜೊತೆ ಮದುವೆಯಾಗಿದ್ದಾನೆ. ಅಲ್ಲಿದ್ದವರಿಗೆ ಸಿಹಿಯನ್ನೂ ಹಂಚಲಾಗಿದೆ. ಅಲ್ಲಿಗೆ ಮೊದಲ ಮದುವೆಯ ಗಂಡಾಂತರ ತಪ್ಪಿದ್ದು, ಮುಂದೆ ಹುಡುಗಿ ಜೊತೆ ಮದುವೆಯಾಗಲು ಯಾವುದೇ ತೊಂದರೆ ಆಗಲ್ಲ ಎಂದು ಯುವಕನ ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

Leave A Reply